ಕೇವಲ ಸಂದರ್ಶನದ ಮೂಲಕ 15 ಲಕ್ಷ ರೂ.ನ ನೌಕರಿ ನೀಡಲಿದೆ SBI, ಇಲ್ಲಿದೆ Job ಪ್ರೊಫೈಲ್
ಈ ಪೋಸ್ಟ್ ಗಳಿಗೆ ಆನ್ಲೈನ್ ಅರ್ಜಿ ಪ್ರಕ್ರಿಯೆ ಜನವರಿ 22 ರಿಂದ ಪ್ರಾರಂಭವಾಗಿದ್ದು, ಫೆಬ್ರವರಿ 11 ಅರ್ಜಿ ಸಲ್ಲಿಸಲು ಕೊನೆದಿನವಾಗಿದೆ.
ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಎಸ್ಬಿಐ, ಗುತ್ತಿಗೆ ಆಧಾರಿತ ಸ್ಪೆಷಲಿಸ್ಟ್ ಕೇಡರ್ ಆಫೀಸರ್ನಲ್ಲಿ ಹಲವು ಹುದ್ದೆಗಳಿಗೆ ನೇಮಕ ಮಾಡಲಿದೆ. ಈ ಪೋಸ್ಟ್ಗಳಿಗೆ ಸಂಬಳ 12 ರಿಂದ 15 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಈ ಪೋಸ್ಟ್ ಗಳಿಗೆ ಆನ್ಲೈನ್ ಅರ್ಜಿ ಪ್ರಕ್ರಿಯೆ ಜನವರಿ 22 ರಿಂದ ಪ್ರಾರಂಭವಾಗಿದ್ದು, ಫೆಬ್ರವರಿ 11 ಅರ್ಜಿ ಸಲ್ಲಿಸಲು ಕೊನೆದಿನವಾಗಿದೆ.
ಬ್ಯಾಂಕಿನ ಪರವಾಗಿ ಹಿರಿಯ ಕಾರ್ಯನಿರ್ವಾಹಕ (ಕ್ರೆಡಿಟ್ ರಿವ್ಯೂ) ನ 15 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ವರ್ಗಕ್ಕೆ 9 ಹುದ್ದೆಗಳು, ಒಬಿಸಿಗೆ 3 ಹುದ್ದೆಗಳು, ಎಸ್ಸಿಗಾಗಿ 2 ಹುದ್ದೆಗಳು ಮತ್ತು ಎಸ್ಟಿಗೆ 1 ಹುದ್ದೆ ಲಭ್ಯವಿದೆ.
ಈ ಹುದ್ದೆಗಾಗಿ ಅರ್ಜಿ ಸಲ್ಲಿಸಲು ಅರ್ಜಿದಾರರ ಕನಿಷ್ಠ ವಯಸ್ಸಿನ ಮಿತಿ 25 ವರ್ಷ ಮತ್ತು ಗರಿಷ್ಠ ವಯಸ್ಸಿನ ಮಿತಿ 35 ವರ್ಷಗಳು. ಇದಕ್ಕೆ ಯಾವುದೇ ಲಿಖಿತ ಪರೀಕ್ಷೆಯಿರುವುದಿಲ್ಲ. ಮೊದಲು ಶಾರ್ಟ್ ಲಿಸ್ಟ್ ಪ್ರಕ್ರಿಯೆ ಇರುತ್ತದೆ. ನಂತರ ಸಂದರ್ಶನದ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ವರ್ಷ ಗುತ್ತಿಗೆ ಮಾಡಿಕೊಳ್ಳಲಾಗುವುದು.
ಹಿರಿಯ ಕಾರ್ಯನಿರ್ವಾಹಕ, ಕ್ರೆಡಿಟ್ ರಿವ್ಯೂ ಹುದ್ದೆಗಾಗಿ ಅರ್ಜಿ ಸಲ್ಲಿಸು CA ಅಥವಾ ಹಣಕಾಸು ವಿಭಾಗದಲ್ಲಿ MBA ಪದವಿ ಅಗತ್ಯವಿದೆ. ಪದವಿ ಬಳಿಕ ಕನಿಷ್ಠ ಎರಡು ವರ್ಷಗಳ ಕಾಲ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವವಿರಬೇಕು. ಕೆಲಸದ ಸ್ಥಳ ಮುಂಬೈ ಇರಬಹುದು ಎನ್ನಲಾಗಿದೆ. ಅದಾಗ್ಯೂ ಸ್ಥಳದ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.
ಸಂಬಳ ಕುರಿತು ಹೇಳುವುದಾದರೆ, ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯ ಸಂಬಳ 12 ರಿಂದ 15 ಲಕ್ಷಗಳ ನಡುವೆ ಇರುತ್ತದೆ. ವಾರ್ಷಿಕ ಶೇ.10 ಇನ್ಕ್ರಿಮೆಂಟ್ ಇರಲಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗೆ ಅರ್ಜಿ ಶುಲ್ಕ ಅರ್ಜಿ ಶುಲ್ಕ 600 ರೂ. ಆದರೆ ಎಸ್ಸಿ ಮತ್ತು ಎಸ್ಟಿಗಳಿಗೆ ಅರ್ಜಿ ಶುಲ್ಕ 100 ರೂ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ಪಾವತಿ ಮಾಡಬಹುದು. ಮೀಸಲಾತಿ ವ್ಯವಸ್ಥೆಯಡಿಯಲ್ಲಿ, ಎಸ್ಸಿ ಮತ್ತು ಎಸ್ಟಿಗಳಿಗೆ 5 ವರ್ಷದ ಅವಧಿಗೆ ವಯಸ್ಸಿನ ಮಿತಿ ಸಡಿಲಿಕೆ ನೀಡಲಾಗಿದೆ.