ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ತನ್ನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದೆ. ಹೀಗಾಗಿ ಒಂದು ವೇಳೆ ನೀವು ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದರೆ, ನೀವು ಈ ನೂತನ ಬಡ್ಡಿದರಗಳ ಬಗ್ಗೆ ಮಾಹಿತಿ ಹೊಂದಿರಲೇಬೇಕು.  ಇದಕ್ಕೂ ಮೊದಲು ಐಸಿಐಸಿಐ ಬ್ಯಾಂಕ್, ಎಚ್.ಡಿ.ಎಫ್.ಸಿ ಬ್ಯಾಂಕ್ ಗಳೂ ಕೂಡ ತನ್ನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಇಳಿಕೆ ಮಾಡಿವೆ. ಭಾರತೀಯ ಸ್ಟೇಟ್ ಬ್ಯಾಂಕ್ ಒಂದು ವರ್ಷದಿಂದ ಹಿಡಿದು ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್.ಡಿಗಳ ಮೇಲಿನ ಬಡ್ಡಿ ದರವನ್ನು ಶೇ.0.20 ರಷ್ಟು ಕಡಿತಗೊಳಿಸಿದೆ. ಹೀಗಾಗಿ ಇನ್ಮುಂದೆ SBI ನಲ್ಲಿಡಲಾಗುವ FD ಮೇಲೆ ನಿಮಗೆ ಕಡಿಮೆ ಲಾಭ ಸಿಗಲಿದೆ. ನೂತನ ಬಡ್ಡಿ ದರಗಳು ಸೆಪ್ಟೆಂಬರ್ 10 ರಿಂದ ಜಾರಿಗೆ ಬಂದಿವೆ. ಇದಕ್ಕೂ ಮೊದಲು ಮೇ 27 ರಂದು ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ FD ದರಗಳಲ್ಲಿ ಬದಲಾವಣೆ ಮಾಡಿತ್ತು.


COMMERCIAL BREAK
SCROLL TO CONTINUE READING

ನೂತನ SBI ಬಡ್ಡಿದರಗಳು ಇಂತಿವೆ
- 7 ರಿಂದ 45 ದಿನಗಳ ಮುಕ್ತಾಯದೊಂದಿಗೆ ಎಸ್‌ಬಿಐ ಎಫ್‌ಡಿ ಮೇಲಿನ ಬಡ್ಡಿದರವು ಶೇಕಡಾ 2.90 ಇರಲಿದೆ.
- 46 ರಿಂದ 179 ದಿನಗಳ ಯೋಜನೆಯ ಬಡ್ಡಿದರವು ಶೇಕಡಾ 3.90 ಇರಲಿದೆ.
- 180 ದಿನಗಳಿಂದ 210 ದಿನಗಳವರೆಗಿನ ಯೋಜನೆಗಳ ಬಡ್ಡಿದರ ಶೇ 4.40 ರಷ್ಟಿರಲಿದೆ.
- 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಇರುವ ಯೋಜನೆಗಳ ಬಡ್ಡಿದರ ಶೇಕಡಾ 4.40 ಇರಲಿದೆ.
- ಒಂದು ವರ್ಷ ಮತ್ತು ಎರಡು ವರ್ಷಗಳಿಗಿಂತ ಕಡಿಮೆ ಇರುವ ಯೋಜನೆಗಳ ಬಡ್ಡಿದರ ಶೇಕಡಾ 4.90 ಇರಲಿದೆ.
- 2 ವರ್ಷ ಮತ್ತು ಮೂರು ವರ್ಷಗಳಿಗಿಂತ ಕಡಿಮೆ ಇರುವ ಯೋಜನೆಗಳ ಬಡ್ಡಿದರ ಶೇಕಡಾ 5.10 ಇರಲಿದೆ.
- ಮೂರು ವರ್ಷಗಳಲ್ಲಿ ಮತ್ತು 5 ವರ್ಷಕ್ಕಿಂತ ಕಡಿಮೆ ಇರುವ ಯೋಜನೆಗಳ ಬಡ್ಡಿದರ 5.30% ರಷ್ಟು ಇರಲಿದೆ.
- 5 ವರ್ಷಗಳಲ್ಲಿ, 10 ವರ್ಷದೊಳಗಿನ ಯೋಜನೆಗಳ ಬಡ್ಡಿದರವು ಶೇಕಡಾ 5.40 ಇರಲಿದೆ.