ನವದೆಹಲಿ: ರಿಯಾಯಿತಿಯ ಆಮೀಷಕ್ಕೆ ಒಳಗಾಗಿ ಮಾರ್ಚ್ 31ರ ನಂತರ BS-4 ವಾಹನ ಖರೀಸಿದವರ ಪಾಲಿಗೆ ಶಾಕಿಂಗ್ ಸುದ್ದಿಯೊಂದು ಪ್ರಕಟವಾಗಿದೆ.  ಹೌದು, ಮಾರ್ಚ್ 31ರ ಬಳಿಕ ಖಾರೀದಿಸಲಾಗಿರುವ BS-4 ಇಂಜಿನ್ ಹೊಂದಿರುವ ವಾಹನಗಳ ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇಂತಹ ವಾಹನಗಳ ಮಾರಾಟಕ್ಕೆ ಲಾಕ್ ಡೌನ್ ಅವಧಿಯ ಬಳಿಕ ನೀಡಲಾಗಿದ್ದ 10 ನೀಡಲಾಗಿದ್ದ ಹಳೆ ಆದೇಶವನ್ನು ನ್ಯಾಯಾಲಯ ವಾಪಸ್ ಪಡೆದಿದೆ.


COMMERCIAL BREAK
SCROLL TO CONTINUE READING

ವಾಸ್ತವದಲ್ಲಿ, ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿಗೆ ಸುಪ್ರೀಂ ಕೋರ್ಟ್ 2020 ಮಾರ್ಚ್ 31 ರ ಗಡುವನ್ನು ನಿಗದಿಪಡಿಸಿತ್ತು. ಏಪ್ರಿಲ್ ನಲ್ಲಿ ಹೊಸ ಹೊರಸೂಸುವಿಕೆ ಮಾನದಂಡ ಹೊಂದಿರುವ ಬಿಎಸ್ -6 ಜಾರಿಗೆ ಬರಬೇಕಿತ್ತು (ಇದನ್ನು ಮಾಡಲಾಗಿದೆ). ಏತನ್ಮಧ್ಯೆ, ಮಾರ್ಚ್ 22 ರಂದು ಸಾರ್ವಜನಿಕ ಕರ್ಫ್ಯೂ ವಿಧಿಸಲಾಗಿದ್ದು, ಮಾರ್ಚ್ 25 ರಿಂದ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಗೆ ಬಂದಿತ್ತು.


ಆದರೆ, ಆಗಲೇ ವಾಹನಗಳ ಡೀಲರ್ ಬಳಿ ಅಪಾರ ಸಂಖ್ಯೆಯಲ್ಲಿ ಬಿಎಸ್-4 ಮಾನದಂಡ ಹೊಂದಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಸ್ಟಾಕ್ ಉಳಿದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಡೀಲರ್ ಗಳು BS-4  ಮಾನದಂಡ ಹೊಂದಿರುವ ವಾಹನಗಳ ಮಾರಾಟ ಮತ್ತು ನೋಂದಣಿಗೆ ಡೆಡ್ ಲೈನ್ ವಿಸ್ತರಣೆಗೆ ಆಗ್ರಹಿಸಿ ಸುಪ್ರೀಂ ಕದ ತಟ್ಟಿದ್ದರು. ಡೀಲರ್ ಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸರ್ವೋಚ್ಛ ನ್ಯಾಯಾಲಯ, ಶೇ.10 ರಷ್ಟು BS-4 ಮಾನದಂಡ ಹೊಂದಿರುವ ವಾಹನಗಳ ಮಾರಾಟಕ್ಕೆ ಅನುಮತಿ ನೀಡಿ, ಲಾಕ್ ಡೌನ್ ನಂತರ 10 ದಿನಗಳಲ್ಲಿ ಈ ವಾಹನಗಳ ಮಾರಾಟ ಮಾಡಬಹುದಾಗಿದೆ ಎಂದು ಹೇಳಿತ್ತು.


ಸದ್ಯ ಸರ್ವೋಚ್ಛ ನ್ಯಾಯಾಲಯ ಬಿಎಸ್-4 ವಾಹನಗಳ ಮಾರಾಟಕ್ಕಾಗಿ ಲಾಕ್ ಡೌನ್ ಬಳಿಕ 10 ದಿನಗಳ ಕಾಲಾವಕಾಶ ನೀಡಿದ್ದ ತನ್ನ ಹಳೆ ಆದೇಶವನ್ನು ವಾಪಸ್ ಪಡೆದಿದೆ. ಅಷ್ಟೇ ಅಲ್ಲ ಈ 10 ದಿನಗಳ ಅವಧಿಯಲ್ಲಿ ಮಾರಾಟ ಮಾಡಲಾಗಿರುವ ವಾಹನಗಳ ನೋಂದಣಿ ಕೂಡ ನಡೆಸದಂತೆ ನಿರ್ದೇಶನ ನೀಡಿದೆ. ಕೋರ್ಟ್ ನೀಡಿರುವ ಈ ತೀರ್ಪಿನ ಬಳಿಕ ಇದೀಗ ಮಾರ್ಚ್ 31ರ ಬಳಿಕ ಮಾರಾಟವಾದ ಬಿಎಸ್-4 ವಾಹನಗಳ ರಿಜಿಸ್ಟ್ರೇಶನ್ ನಡೆಸಲಾಗುವುದಿಲ್ಲ.


ಅರ್ಜಿಯ ವಿಚಾರಣೆಯ ವೇಳೆ ಸರ್ವೋಚ್ಛ ನ್ಯಾಯಾಲಯ ಆಟೋಮೊಬೈಲ್ ಡೀಲರ್ ಅಸೋಸಿಯೇಷನ್ ಗೆ ತಪರಾಕಿ ಹಾಕಿದೆ. ಈ ಕುರಿತು ಹೇಳಿಕೆ ನೀಡಿರುವ ನ್ಯಾಯಪೀಠ ಇದುವರೆಗೂ ಕೂಡ BS-4 ವಾಹನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಅಷ್ಟೇ ಅಲ್ಲ "ಫ್ರಾಡ್ ನಡೆಸಿ ಈ ನ್ಯಾಯಪೀಠದ ಲಾಭ ಪಡೆಯಲು ಯತ್ನಿಸಬೇಡಿ" ಎಂದು ನ್ಯಾ.ಅರುಣ್ ಮಿಶ್ರಾ, ನ್ಯಾ. ಎನ್. ನಜೀರ್ ಹಾಗೂ ನ್ಯಾ.ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಪೀಠ ಡೀಲರ್ ಅಸೋಸಿಯೇಷನ್ ಅನ್ನು ತರಾಟೆಗೆ ತೆಗೆದುಕೊಂಡಿದೆ.


ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣದ ವಿಚಾರಣೆಯ ವೇಳೆ ಮಾರ್ಚ್ ಕೊನೆಯ ವಾರದಲ್ಲಿ ಬಿಎಸ್-4 ವಾಹನಗಳ ಮಾರಾಟದಲ್ಲಿ ಹೆಚ್ಚಳವಾಗಿದ್ದು, ಈ ಅವಧಿಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು ಎಂದು ನ್ಯಾಯಪೀಠ ಹೇಳಿದೆ. ಅಷ್ಟೇ ಅಲ್ಲ ಇದುವರೆಗೂ ಕೂಡ ಈ ಮಾನದಂಡಗಳನ್ನು ಹೊಂದಿರುವ ವಾಹನಗಳನ್ನು ಆನ್ಲೈನ್ ನಲ್ಲಿ ಮಾರಾಟ ನಡೆಸಲಾಗುತ್ತಿದೆ ಎಂದು ನ್ಯಾಯಾಲಯ ಆಕ್ರೋಶವ್ಯಕ್ತಪಡಿಸಿದೆ. ಈ ಮೊದಲು ಪ್ರಕರಣದಲ್ಲಿ ಅಕ್ಟೋಬರ್ 2018ರಲ್ಲಿ ತೀರ್ಪು ನೀಡಿದ್ದ ಸರ್ವೋಚ್ಛ ನ್ಯಾಯಾಲಯ, ಮುಂಬರುವ ಏಪ್ರಿಲ್ ನಿಂದ ದೆಶಾದ್ಯಂತೆ ಯಾವುದೇ BS-4 ಮಾನದಂಡಗಳನ್ನು ಹೊಂದಿರುವ ವಾಹನಗಳ ಖರೀದಿ ಹಾಗೂ ಮಾರಾಟ ಪ್ರಕ್ರಿಯೆ ನಡೆಸಬಾರದು ಮತ್ತು ಅವುಗಳ ನೋಂದಣಿ ಪ್ರಕ್ರಿಯೆಯನ್ನು ಕೂಡ ನಡೆಸಬಾರದು ಎಂದು ಆದೇಶಿಸಿತ್ತು.