ನವದೆಹಲಿ:ಈ ಕುರಿತು ನಿರ್ಣಯ ನೀಡಿರುವ ಸರ್ವೋಚ್ಛ ನ್ಯಾಯಾಲಯ (Supreme Court) ಸೆಪ್ಟೆಂಬರ್ ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ನೀಟ್ ಪರೀಕ್ಷೆಗಳನ್ನು ಸ್ಥಗಿತಗೊಳಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನೀಟ್ ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿ ದೇಶಾದ್ಯಂತ ಅನೇಕ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 


COMMERCIAL BREAK
SCROLL TO CONTINUE READING

ಸುಪ್ರೀಂ ಕೋರ್ಟ್ ನಿರಾಕರಣೆ
ನೀಟ್ ಪರೀಕ್ಷೆಯನ್ನು  ಮುಂದೂಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಹೀಗಾಗಿ ಇದೀಗ ಈ ಪರೀಕ್ಷೆಗಳನ್ನು ನಿಗದಿತ ವೇಳಾಪಟ್ಟಿಯಂತೆ ಅಂದರೆ ಸೆಪ್ಟೆಂಬರ್ 13 ರಂದು ನಡೆಸಲಾಗುವುದು. ಹೆಚ್ಚುತ್ತಿರುವ ಕೊರೊನಾವೈರಸ್ ಮತ್ತು ಬಿಹಾರದಲ್ಲಿ ಪ್ರವಾಹ ಸಮಸ್ಯೆಯನ್ನು ಉಲ್ಲೇಖಿಸಿ ಪರೀಕ್ಷೆಗಳನ್ನು ಮುಂದೂಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ವಿಚಾರಣೆಯ ವೇಳೆ, ಬಿಹಾರ್‌ನಲ್ಲಿ ಪರೀಕ್ಷೆಗೆ ಕೇವಲ 2 ಕೇಂದ್ರಗಳು ಇರುವುದರಿಂದ ಸೆಪ್ಟೆಂಬರ್ 13 ರಿಂದ ಪ್ರಾರಂಭವಾಗುವ ನೀಟ್ ಪರೀಕ್ಷೆಯನ್ನು ಮುಂದೂಡಬೇಕು ಎಂದು ವಿದ್ಯಾರ್ಥಿಗಳ ಪರ ವಕೀಲರು ವಾದಿಸಿದ್ದರು.  ಪರೀಕ್ಷೆಯನ್ನು ಮೂರು ವಾರಗಳವರೆಗೆ ಮುಂದೂಡಬೇಕೆಂದು ಅವರು ಒತ್ತಾಯಿಸಿದ್ದರು.


ಮರು ಪರಿಶೀಲನಾ ಅರ್ಜಿ ಕೂಡ ದಾಖಲಿಸಲಾಗಿತ್ತು
ಇದಕ್ಕೂ ಮೊದಲು, ಸೆಪ್ಟೆಂಬರ್ 4 ರಂದು ಜೆಇಇ ಮತ್ತು ನೀಟ್ ಪರೀಕ್ಷೆಯನ್ನು ನಡೆಸುವ ವಿರುದ್ಧ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಈ ಅರ್ಜಿಯನ್ನು ಬಿಜೆಪಿ ಆಡಳಿತ ಇಲ್ಲದ ರಾಜ್ಯಗಲಾಗಿರುವ ಪಂಜಾಬ್, ರಾಜಸ್ಥಾನ್, ಪಶ್ಚಿಮ್ ಬಂಗಾಳ್, ಚತ್ತೀಸ್ ಗಡ್, ಝಾರ್ಖಂಡ್ ಹಾಗೂ ಮಾಹಾರಾಷ್ಟ್ರದ 6 ಕ್ಯಾಬಿನೆಟ್ ಮಂತ್ರಿಗಳು ಜಂಟಿಯಾಗಿ ಸಲ್ಲಿಸಿದ್ದರು. ಈ ಮರುಪರಿಶೀಲನಾ ಅರ್ಜಿ ದಾಖಲಿಸಿದವರಲ್ಲಿ ಪಶ್ಚಿಮ ಬಂಗಾಳದ ಮೊಲಾಯ್ ಘಟಕ್, ಝಾರ್ಕಂಡ್ ನ ರಾಮೇಶ್ವರ್ ಉರಾವ್, ಚತ್ತೀಸ್ಗಡದ ಅಮರಜೀತ್ ಭಗತ್, ಪಂಜಾಬ್ ನ ಬಲಬೀರ್ ಸಿದ್ಧು, ಮಹಾರಾಷ್ಟ್ರದ ಉದಯ್ ಸಾಮಂತ್ ಹಾಗೂ ರಾಜಸ್ಥಾನದ ರಘು ಶರ್ಮಾ ಶಾಮೀಲಾಗಿದ್ದರು. ಈ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 17ರಂದು ತಿರಸ್ಕರಿಸಿ, ಪರೀಕ್ಷೆಗಳ ನಡೆಸುವಿಕೆಗೆ ಹಸಿರು ನಿಶಾನೆ ನೀಡಿತ್ತು.