ನವದೆಹಲಿ: ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧದ ಎಲ್ಲಾ ತನಿಖೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ವಿಧಿಸಿದ್ದು, ಮುಂದಿನ ವಿಚಾರಣೆವರೆಗೆ ಆಕೆಯ ವಿರುದ್ಧ ಯಾವುದೇ ಕ್ರಿಮಿನಲ್ ವಿಚಾರಣೆ ನಡೆಯುವುದಿಲ್ಲ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಮಲಯಾಳಂನ 'ಒರು ಅಡಾರ್ ಲವ್’ ಚಿತ್ರದ ಹಾಡೊಂದರಲ್ಲಿ ತನ್ನ ಕಣ್ ಸನ್ನೆ ಮೂಲಕ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ತೆಲಂಗಾಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ ಸೋಮವಾರ ಸುಪ್ರೀಂಕೋರ್ಟಿಗೆ ಅರ್ಜಿಸಲ್ಲಿಸಿದ್ದರು. 


ಪ್ರಿಯಾ ವಾರಿಯರ್ ಅಭಿನಯದ ಒರು ಅಡಾರ್ ಲವ್ ಚಿತ್ರದ ಮಾಣಿಕ್ಯ ಮಲರಾಯ ಪೂವಿ ಹಾಡಿನಲ್ಲಿ ಮುಸಲ್ಮಾನರ ಧಾರ್ಮಿಕ ಭಾವನೆಗೆ ಧಕ್ಕೆ ಆಗುವ ವಿಚಾರಗಳಿವೆ ಎಂದು ಹೈದ್ರಾಬಾದ್‍ನ ಫಲಕ್‍ನಾಮಾ ಠಾಣೆಯಲ್ಲಿ ದೂರು ದಾಖಲಾಗಿದೆ. ಮೊಹಮ್ಮದ್ ಅಬ್ದುಲ್ ಖಾನ್ ತನ್ನ ಸ್ನೇಹಿತರ ಜೊತೆ ದೂರು ದಾಖಲಿಸಿದ್ದು, ಪ್ರವಾದಿ ಕೀರ್ತನೆಗಳನ್ನು ಸಿನಿಮಾ ಹಾಡಿಗೆ ಬಳಸಿರುವುದು ಸರಿಯಲ್ಲ ಎಂದು ದೂರಿನಲ್ಲಿ ಹೇಳಿದ್ದರು.


ಈ ಬಗ್ಗೆ ಪ್ರಿಯಾ ವಾರಿಯರ್ ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸದಂತೆ ಮತ್ತು ತನಿಖೆ ನಡೆಸದಂತೆ ತೆಲಂಗಾಣ ರಾಜ್ಯಗಳಿಗೆ ನಿರ್ಬಂಧ ವಿಧಿಸಬೇಕು ಎಂದು ವಕೀಲೆ ಪಲ್ಲವಿ ಪ್ರತಾಪ್ ಮೂಲಕ ಸುಪ್ರೀಂ ಕೋರ್ಟಿಗೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು.