ಚೆನ್ನೈ: ತಮಿಳುನಾಡು ಮತ್ತೆ ಸುದ್ದಿಯಲ್ಲಿದೆ, ಮಂಗಳವಾರದ ನಾಲ್ಕು ಬಾಲಕಿಯರು ಶಿಕ್ಷಕಿಯರ ದೌರ್ಜನ್ಯದಿಂದ ಮನನೊಂದು ಮೃತ ಪಟ್ಟಿರುವ ಸುದ್ದಿ ಇನ್ನು ಹಸಿರುವಾಗಲೇ ಮತ್ತೊಂದು ಘಟನೆ ನಿಜಕ್ಕೂ ತಲೆತಗ್ಗಿಸುವಂತಿದೆ. 


COMMERCIAL BREAK
SCROLL TO CONTINUE READING

ಹೌದು, ತಮಿಳುನಾಡಿನ ತಿರುವಳ್ಳುವರ್ ಜಿಲ್ಲೆಯ ಸರ್ಕಾರಿ ಶಾಲೆಯ ವಿಧ್ಯಾರ್ಥಿನಿಯರು ತಮ್ಮ ಸಮವಸ್ತ್ರದ ಮೂಲಕ ಶೌಚಾಲಯವನ್ನು ಸ್ವಚ್ಚಗೊಳಿಸುತ್ತಿರುವ ವಿಡಿಯೋ ಒಂದು ಈಗ ಎಲ್ಲರ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.ಇದರಲ್ಲಿ ಒಬ್ಬಳು ಇನ್ನು ಹೆಚ್ಚು ನೀರನ್ನು ಹಾಕು ಎಂದು ಮತ್ತೊಬ್ಬ ಗೆಳತಿಗೆ ಹೇಳುತ್ತಿರುವ ಧ್ವನಿಯನ್ನು ಕೇಳಬಹುದು.


ಈ ಘಟನೆಯು ಸುಮಾರು 1000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು  ವಿಧ್ಯಾಬ್ಯಾಸ ಮಾಡುತ್ತಿರುವ  ಆರ್.ಎಂ  ಜೈನ ಸರ್ಕಾರಿ ಗರ್ಲ್ಸ್ ನ ಶಾಲೆಯಲ್ಲಿ ನಡೆದಿದೆ. ಈ ಘಟನೆಯ ವಿಷಯವಾಗಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಎಸ್.ಎಫ್.ಐ ನ ತಿರುವಳ್ಳುವರ್ ಜಿಲ್ಲೆಯ ಕಾರ್ಯದರ್ಶಿ ಎನ್.ದಿನೇಶ್  ಮಾತನಾಡುತ್ತಾ "ಶಾಲೆಯ ಮುಖ್ಯೋಪಾಧ್ಯಾಯಿನಿಯು ವಿದ್ಯಾರ್ಥಿನಿಯರನ್ನು ಬರಿ ಗೈಯಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸಲು ಹೇಳಿದ್ದಾರೆ ಒಂದು ವೇಳೆ ಅದನ್ನು ತಿರಸ್ಕರಿಸಿದರೆ ತಲೆಕೆಳಗಾಗಿ ನಿಲ್ಲ ಬೇಕಾಗುತ್ತದೆ ಎಂದು ಹೆದರಿಸಿದ್ದಾರೆ" ಎಂದು ತಿಳಿಸಿದ್ದಾರೆ.


ತಿರುವಳ್ಳುವರ್ ಜಿಲ್ಲೆಯ ಮುಖ್ಯ ಶಿಕ್ಷಣ ಅಧಿಕಾರಿಗಳು ಈ ಬಗ್ಗೆ ಈಗಾಗಲೇ ತನಿಖೆಯನ್ನು ಕೈಕೊಂಡಿದ್ದು. ಇದನ್ನು ಉನ್ನತ ಅಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.