ನವದೆಹಲಿ:ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ನಾವೆಲ್ ಕರೋನಾ ವೈರಸ್ ಸೋಂಕು ಇದೀಗ ಭಾರತಕ್ಕೂ ಕೂಡ ಪಸರಿಸಿದೆ. ಈ ವೈರಸ್ ನ ಸೋಂಕು ತಗುಲಿದ ಎರಡನೇ ಪ್ರಕರಣ ಇದೀಗ ಕೇರಳದಿಂದ ವರದಿಯಾಗಿದೆ. ಇತ್ತೀಚೆಗಷ್ಟೇ ಈ ವ್ಯಕ್ತಿ ಚೀನಾದಿಂದ ಭಾರತಕ್ಕೆ ಮರಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೊದಲೂ ಕೂಡ ಹಲವು ಬಾರಿ ಈ ವ್ಯಕ್ತಿ ಚೀನಾ ಪ್ರವಾಸ ಕೈಗೊಂಡಿದ್ದರು. ಸದ್ಯ ರೋಗಿಯನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿದ್ದು, ಆತನ ಪರಿಸ್ಥಿತಿಯ ಕುರಿತು ವೈದ್ಯರು ನಿರಂತರ ನಿಗಾ ವಹಿಸಿದ್ದಾರೆ ಎನ್ನಲಾಗಿದೆ. ಈ ವೈರಸ್ ನ ಸೋಂಕು ತಗುಲಿದ ಮೊದಲ ಅಧಿಕೃತ ಪ್ರಕರಣ ಕೂಡ ಕೇರಳದಿಂದ ವರದಿಯಾಗಿದ್ದು ಇಲ್ಲಿ ಗಮನಾರ್ಹ.


COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ಜನವರಿ 30 ರಂದು ಕೇರಳದ ತ್ರಿಶೂರ್‌ನಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿತು. ಸಂತ್ರಸ್ತ ವಿದ್ಯಾರ್ಥಿಯು ಕಳೆದ ವಾರ ವುಹಾನ್ ವಿಶ್ವವಿದ್ಯಾಲಯದಿಂದ ಮರಳಿದ್ದಳು. ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದ ರಾಜ್ಯ ಆರೋಗ್ಯ ಸಚಿವೆ ಕೆ. ಕೆ. ಶೈಲಜಾ, ಈ ಸೋಂಕು ತಗುಲಿದ ಪ್ರಕರಣಗಳ ಕುರಿತು ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ವೈದ್ಯಕೀಯ ಮಂಡಳಿಯೊಂದನ್ನು ರಚಿಸಿದ್ದೆ ಎಂದು ಮೀಹಿತಿ ನೀಡಿದರು ಅಷ್ಟೇ ಅಲ್ಲ ಅವರು ಈ ಕುರಿತು ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿರುವುದಾಗಿಯೂ ಕೂಡ ಹೇಳಿದ್ದರು.


ಈ ವೇಳೆ ಮಾತನಾಡಿದ್ದ ಸಚಿವೆ ಶೈಲಜಾ, "ವಿದ್ಯಾರ್ಥಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಯ ಪರಿಣಾಮ ರೋಗಿಯ ಮೇಲೆ ಕಂಡುಬರುತ್ತಿದೆ. ಈ ಕುರಿತು ನಾವು ವೈದ್ಯಕೀಯ ಮಂಡಳಿಯೊಂದನ್ನು ರಚಿಸಿದ್ದು, ಈ ಮಂಡಳಿ ನಿತ್ಯ ಸಂಜೆ ವೈದ್ಯಕೀಯ ಬುಲೆಟಿನ್ ನೀಡಲಿದೆ" ಎಂದು ಹೇಳಿದ್ದರು.



ಈಗಾಗಲೇ 323 ನಾಗರಿಕರನ್ನು ಚೀನಾದಿಂದ ಭಾರತಕ್ಕೆ ಕರತರಲಾಗಿದೆ
ಚೀನಾದ ವುಹಾನ್‌ನಿಂದ 323 ಭಾರತೀಯರನ್ನು ಹೊತ್ತ ಮತ್ತೊಂದು ಏರ್ ಇಂಡಿಯಾ ವಿಮಾನ ಇದೀಗ ದೆಹಲಿ ತಲುಪಿದೆ. 7 ಮಾಲ್ಡೀವ್ಸ್ ನಾಗರಿಕರನ್ನು ಸಹ ಇದೆ ವಿಮಾನದಲ್ಲಿ ಕರೆತರಲಾಗಿದೆ. ಇದಕ್ಕೂ ಮೊದಲು ಶನಿವಾರ 324 ಭಾರತೀಯರನ್ನು ಚೀನಾದಿಂದ ಭಾರತಕ್ಕೆ ಕರೆತರಲಾಗಿತ್ತು.