‘ಉರಿ’ಯಲ್ಲಿ ಭಯೋತ್ಪಾದಕರ ದಾಳಿ ಯತ್ನ ವಿಫಲಗೊಳಿಸಿದ ಸೇನೆ
`ಉರಿ` ವಲಯದ ರಾಜ್ವಾನಿಯಲ್ಲಿನ ಸೇನಾ ಶಸ್ತ್ರಾಸ್ತ್ರ ಘಟಕದ ಸುತ್ತ ಕೆಲವು ಅನುಮಾನಾಸ್ಪದ ಚಟುವಟಿಕೆ ಗಳನ್ನೂ ಗಮನಿಸಿದ ಬಳಿಕ ಗುಂಡು ಹಾರಿಸಿದ್ದಾರೆ.
ಶ್ರೀನಗರ: ಮಹತ್ವದ ಬೆಳವಣಿಗೆಯಲ್ಲಿ, ಸೋಮವಾರ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ 'ಉರಿ' ವಲಯದ ರಾಜ್ವಾನಿಯಲ್ಲಿನ ಸೇನಾ ಶಸ್ತ್ರಾಸ್ತ್ರ ಘಟಕದ ಸುತ್ತ ಕೆಲವು ಅನುಮಾನಾಸ್ಪದ ಚಟುವಟಿಕೆಗಳನ್ನೂ ಗಮನಿಸಿದ ಬಳಿಕ ಗುಂಡಿನ ದಾಳಿ ನಡೆಸಿದ್ದು ಭಯೋತ್ಪಾದಕರ ದಾಳಿಯನ್ನು ವಿಫಲಗೊಳಿಸಿದ್ದಾರೆ.
ಉರಿ ವಲಯದ ಸಂಪೂರ್ಣ ಪ್ರದೇಶವನ್ನು ಸೇನೆ ಸುತ್ತುವರಿದಿದ್ದು, ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ಪಡೆಗಳು ತೀವ್ರ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಆರ್ಮಿ ಆರ್ಟಿಲರಿ ಯುನಿಟ್ನಲ್ಲಿ ನಿಯೋಜಿತವಾಗಿರುವ ಭದ್ರತಾ ಸಿಬ್ಬಂದಿ ರಾತ್ರಿ ಸಮಯದಲ್ಲಿ ತಡವಾಗಿ ಶಿಬಿರದ ಸುತ್ತ ಸಂಶಯಾಸ್ಪದ ಚಟುವಟಿಕೆಗಳನ್ನು ಗುರುತಿಸಿ ತಕ್ಷಣ ಅಲರ್ಟ್ ಆಗಿದ್ದು ಸಂಭಾವ್ಯ ದಾಳಿಯನ್ನು ತಡೆಗಟ್ಟಲು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಕೆಲವು ಮೂಲಗಳ ಪ್ರಕಾರ ಭದ್ರತಾ ಸಿಬ್ಬಂದಿ ಇಬ್ಬರು ಭಯೋತ್ಪಾದಕರನ್ನು ಸದೆಬಡಿದಿದ್ದಾರೆ ಎಂದು ತಿಳಿಸಿವೆ. ಇದಲ್ಲದೆ ಸೇನಾ ಶಿಬಿರದ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಏತನ್ಮಧ್ಯೆ, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.