ಒಣಭೂಮಿಯಲ್ಲಿ ಕೃಷಿ ಮಾಡಲು ಪೆರೋಲ್ ನೀಡುವಂತೆ ಬಾಬಾ ರಾಮ್ ರಹೀಮ್ ಮನವಿ
ಪತ್ರಕರ್ತನ ಹತ್ಯೆ ಪ್ರಕರಣದ ವಿಚಾರವಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವ ಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್, ಇಲ್ಲಿರುವ ಸುನಾರಿಯಾ ಜೈಲು ಅಧಿಕಾರಿಗಳಿಗೆ ಪೆರೋಲ್ ನೀಡುವಂತೆ ಮನವಿ ಮಾಡಿದ್ದಾರೆ, ಸಿರ್ಸಾದಲ್ಲಿ ತನ್ನ ಭೂಮಿಯನ್ನು ಬಂಜರು ಪ್ರದೇಶದಲ್ಲಿ ಕೃಷಿ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ನವದೆಹಲಿ: ಪತ್ರಕರ್ತನ ಹತ್ಯೆ ಪ್ರಕರಣದ ವಿಚಾರವಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವ ಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್, ಇಲ್ಲಿರುವ ಸುನಾರಿಯಾ ಜೈಲು ಅಧಿಕಾರಿಗಳಿಗೆ ಪೆರೋಲ್ ನೀಡುವಂತೆ ಮನವಿ ಮಾಡಿದ್ದಾರೆ, ಸಿರ್ಸಾದಲ್ಲಿ ತನ್ನ ಭೂಮಿಯನ್ನು ಬಂಜರು ಪ್ರದೇಶದಲ್ಲಿ ಕೃಷಿ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಮ್ ಜೈಲಿನಲ್ಲಿ ತೋಟಗಾರನಾಗಿ ಕೆಲಸ ಮಾಡುತ್ತಿದ್ದಾನೆ. ಈಗ ಅವರ ಮನವಿಯನ್ನು ಜಿಲ್ಲಾಡಳಿತದ ಅಧಿಕಾರಿಗಳು ಹರಿಯಾಣ ಸರ್ಕಾರಕ್ಕೆ ರವಾನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಜನವರಿ 17 ರಂದು ಪತ್ರಕರ್ತ ರಾಮ್‌ಚಂದರ್ ಛತ್ರಪತಿ ಅವರನ್ನು 2002 ರ ಅಕ್ಟೋಬರ್‌ನಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ರಾಮ್ ರಹಿಮ್ ಮತ್ತು ಇತರ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಡೇರಾ ಸಾಚಾ ಸೌದಾ ಪ್ರಧಾನ ಕಚೇರಿಯಲ್ಲಿ ರಾಮ್ ರಹೀಮ್ ಅವರು ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿ ಅನಾಮಧೇಯ ಪತ್ರವನ್ನು ಪತ್ರಿಕೆ ಪ್ರಕಟಿಸಿದ ನಂತರ ಪತ್ರಕರ್ತನನ್ನು ಸಿರ್ಸಾದಲ್ಲಿ ಕೊಲ್ಲಲಾಯಿತು.ತನ್ನ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಆತನಿಗೆ 2017 ರ ಆಗಸ್ಟ್‌ನಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.