ಸೆಲ್ಫಿ ... ಸೆಲ್ಫಿ ... ಇದು ಪ್ರತಿಯೊಬ್ಬರೂ ಬಾಯಿಯಿಂದ ಕೇಳಿಬರುವ ಪದ ಸೆಲ್ಫಿ. ಸ್ಮಾರ್ಟ್ ಫೋನ್ಗಳ ಕ್ರಾಂತಿಯೊಂದಿಗೆ ಅದು ಇಲ್ಲದೇ ಜೀವನವೇ ಇಲ್ಲ ಎಂಬ ಮಟ್ಟಿಗೆ ಇಂದಿನ ಎಲ್ಲರ ಮನಸ್ಥಿತಿ. ಪ್ರತಿ ಸಂದರ್ಭದಲ್ಲಿ ಅದು ನಮ್ಮ ಜೀವನಕ್ಕೆ ಅಪಾಯ ತಂದೊಡ್ಡುತ್ತದೆ.


COMMERCIAL BREAK
SCROLL TO CONTINUE READING

ಸೆಲ್ಫಿಯಿಂದ ಜೀವ ಹೋಗುವಂತಹದ್ದು ಈಗ ಏನಾಗಿದೆ? ಇಲ್ಲಿದೆ ನೋಡಿ...


ಹೌದು ಇಂತಹ ಒಂದು ಘಟನೆ ನಡೆದಿದೆ. ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ 40 ವರ್ಷದ ಸಾದಿಕ್ ಎಂಬಾತನನ್ನು ಆನೆ ಕೊಂದಿದೆ. ಜಾನಿ ಜಲಪಾಯಿ ಎಂಬ ಪ್ರದೇಶದಲ್ಲಿ ಇಂತಹ ಒಂದು ದುರ್ಘಟನೆ ಸಂಭವಿಸಿದೆ. ಲಥಗಿರಿ ಅರಣ್ಯ ಪ್ರದೇಶದಲ್ಲಿ ಆನೆಯನ್ನು ಕಂಡ ಪಾದಚಾರಿ ಸಾದಿಕ್ ಎಂಬಾತ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಆನೆ ಸಾದಿಕ್ ನನ್ನು ಆಕ್ರಮಣ ಮಾಡಿದೆ. ಈ ಸಂದರ್ಭದಲ್ಲಿ ಸಾದಿಕ್ ಮರನಹೊಂದಿದ್ದಾರೆ.   


ನಾವು ಕೆಲವೊಮ್ಮೆ ವಿನೋಧಕ್ಕಾಗಿ ಮಾಡುವ ಕೆಲವೊಂದು ಕೆಲಸಗಳು ನಮ್ಮ ಜೀವಕ್ಕೆ ಅಪಾಯ ತಂದೊಡ್ಡುತ್ತದೆ ಎಂಬುದಕ್ಕೆ ಇತ್ತೀಚಿನ ಘಟನೆ ಸಾಬೀತಾಗಿದೆ.