`ಕೈ` ಬಿಟ್ಟು `ಕಮಲ` ಹಿಡಿದ ಎ.ಕೆ. ಆಂಟನಿ ಪುತ್ರ, `ನಿರ್ಧಾರ ಸರಿಯಲ್ಲ, ನೋವು ತಂದಿದೆ` ಎಂದ ತಂದೆ
AK Antony Son Joins BJP: ಪುತ್ರ ಅನಿಲ್ ಆಂಟೋನಿ ಬಿಜೆಪಿ ಸೇರ್ಪಡೆ ಬಗ್ಗೆ ಎಕೆ ಆಂಟನಿ ಪ್ರತಿಕ್ರಿಯೆ ಕೂಡ ಬಂದಿದೆ. `ಬಿಜೆಪಿ ಸೇರುವ ಅನಿಲ್ ನಿರ್ಧಾರದಿಂದ ನನಗೆ ನೋವಾಗಿದೆ`, `ಇದು ತಪ್ಪು ನಿರ್ಧಾರ` ಎಂದು ಎಕೆ ಆಂಟನಿ ಹೇಳಿದ್ದಾರೆ.
Anil Antony Joins BJP: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟೋನಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮಗ ಅನಿಲ್ ಬಿಜೆಪಿ ಸೇರಿರುವ ಬಗ್ಗೆ ಎಕೆ ಆಂಟನಿ ಪ್ರತಿಕ್ರಿಯೆ ಕೂಡ ಬಂದಿದೆ. 'ಬಿಜೆಪಿ ಸೇರುವ ಅನಿಲ್ ನಿರ್ಧಾರದಿಂದ ನನಗೆ ನೋವಾಗಿದೆ, ಇದು ತಪ್ಪು ನಿರ್ಧಾರ' ಎಂದು ಎಕೆ ಆಂಟನಿ ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಎಕೆ ಆಂಟನಿ, 'ಅನಿಲ್ ಬಿಜೆಪಿ ಸೇರುವ ನಿರ್ಧಾರ ನನಗೆ ನೋವುಂಟು ಮಾಡಿದೆ. ಇದು ಅತ್ಯಂತ ತಪ್ಪು ನಿರ್ಧಾರ' ಎಂದಿದ್ದಾರೆ.
ಅನೀಲ್ ಆಂಟನಿ, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ಮಾಡಲು ಅವರ ದೃಷ್ಟಿ ಸ್ಪಷ್ಟವಾಗಿದೆ ಮತ್ತು ಇದಕ್ಕೆ ಕೊಡುಗೆ ನೀಡುವುದು ತಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ಈ ವರ್ಷದ ಜನವರಿ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಗೆ ಅನಿಲ್ ರಾಜೀನಾಮೆ ನೀಡಿದ್ದರು. ಕೇರಳ ಕಾಂಗ್ರೆಸ್ ಘಟಕದ ಡಿಜಿಟಲ್ ಮೀಡಿಯಾ ವಿಭಾಗದ ಮುಖ್ಯಸ್ಥರೂ ಕೂಡ ಅವರು ಆಗಿದ್ದರು. ಅನಿಲ್ ಅವರನ್ನು ಬಿಜೆಪಿಗೆ ಸ್ವಾಗತಿಸಿದ ಗೋಯಲ್, ಅವರನ್ನು "ತಳಮಟ್ಟದ ರಾಜಕೀಯ ಕಾರ್ಯಕರ್ತ" ಎಂದು ಬಣ್ಣಿಸಿದ್ದಾರೆ ಮತ್ತು ಬಿಜೆಪಿ ದೇಶದ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
OMG! ಕುಡಿದ ಮತ್ತಿನಲ್ಲಿ ಓರ್ವ ಯುವಕ ಮತ್ತೊರ್ವ ಯುವಕನ ಜೊತೆಗೆ ವಿವಾಹವಾದ... ಮುಂದೇನಾಯ್ತು ತಿಳಿಯಲು ಸುದ್ದಿ ಓದಿ
ಪ್ರಧಾನಿಯವರ ಸುಸ್ಥಿರ ಅಭಿವೃದ್ಧಿಯ ದೂರದೃಷ್ಟಿಯನ್ನು ತಾವೂ ಸಹ ಒಪ್ಪುತ್ತೇವೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ಸೇರುವ ಮುನ್ನ ತಂದೆಯ ಸಲಹೆ ಕೇಳಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅನಿಲ್, 'ಇದು ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದಲ್ಲ, ಭಿನ್ನಾಭಿಪ್ರಾಯ ಮತ್ತು ಅಭಿಪ್ರಾಯಕ್ಕೆ ಸಂಬಂಧಿಸಿದ್ದು. ನಾನು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದೇನೆ ಎಂದು ನಾನು ದೃಢವಾಗಿ ನಂಬುತ್ತೇನೆ. ನನ್ನ ತಂದೆಯ ಮೇಲಿನ ಗೌರವ ಹಾಗೆಯೇ ಇರಲಿದೆ' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Trending Video: ಗಾಳಿಯಲ್ಲಿ ನೇತಾಡಿ ಖತರ್ನಾಕ್ ರೀತಿಯಲ್ಲಿ ಕಾಗೆಯ ಬೇಟೆಯಾಡಿದ ಹಾವು.. ವಿಡಿಯೋ ನೋಡಿ!
ಈ ಕಾರಣದಿಂದ ಕಾಂಗ್ರೆಸ್ ತೊರೆದಿರುವುದಾಗಿ ಹೇಳಿದ ಅನೀಲ್
2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆಯನ್ನು ಆಧರಿಸಿದ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಸಾಕ್ಷ್ಯಚಿತ್ರವನ್ನು ಭಾರತೀಯ ಸಂಸ್ಥೆಗಳ ದೃಷ್ಟಿಕೋನದ ಮೇಲೆ ಅಪಾಯಕಾರಿ ಪ್ರವೃತ್ತಿ ಎಂದು ಬಣ್ಣಿಸಿದ ಅವರು, ಇದು ದೇಶದ ಸಾರ್ವಭೌಮತ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದರು. ಈ ಪ್ರತಿಕ್ರಿಯೆಯ ನಂತರ ಅವರು ಕಾಂಗ್ರೆಸ್‌ನಿಂದಲೇ ಟೀಕೆಗೆ ಗುರಿಯಾಗಿದ್ದರು. ಇದಾದ ಬಳಿಕ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಅನೀಲ್ ನೀಡಿದ್ದರು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.