ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ದೆಹಲಿಯ ಮಾಜಿ ಸಚಿವ ಡಾ.ಎ.ಕೆ.ವಾಲಿಯಾ(72) ಅವರು ಇಂದು ಕೋವಿಡ್ -19 ಕಾರಣದಿಂದ ನಿಧನ ಹೊಂದಿದ್ದಾರೆ.


COMMERCIAL BREAK
SCROLL TO CONTINUE READING

ಎ.ಕೆ.ವಾಲಿಯಾ(AK Walia) ಅವರು ದೆಹಲಿಯ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.


ಇದನ್ನೂ ಓದಿ : Covid Vaccine Report: ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆದ 21 ಸಾವಿರ ಜನರಿಗೆ ಕೊರೋನಾ ಪಾಸಿಟಿವ್!


ಕಾಂಗ್ರೆಸ್(Congress) ಹಿರಿಯ ಮುಖಂಡರಾಗಿದ್ದ ಕಾರಣ ದೆಹಲಿ ಘಟಕದಲ್ಲಿ ಡಾ ಎಕೆ ವಾಲಿಯಾ ಪ್ರಭಾವ ಶಾಲಿಯಾಗಿದ್ದರು.  ವಿಧಾನಸಭೆಯ (ಶಾಸಕ) ಸದಸ್ಯರಾಗಿ ನಾಲ್ಕು ಅವಧಿಗೆ ಸೇವೆ ಸಲ್ಲಿಸಿದ ಕೆಲವರಲ್ಲಿ ವಾಲಿಯಾ ಕೂಡ ಒಬ್ಬರು.


ಇದನ್ನೂ ಓದಿ : Covid-19: ಭಾರತದಲ್ಲಿ ಕರೋನಾ 2ನೇ ಅಲೆ ಯಾವಾಗ ಉತ್ತುಂಗಕ್ಕೇರಲಿದೆ? CEA ಕೆ.ವಿ.ಸುಬ್ರಮಣಿಯನ್ ಹೇಳಿದ್ದೇನು?


ನಾಲ್ಕು ಬಾರಿ ಶಾಸಕ(MLA)ರಾಗಿ ಆಯ್ಕೆ ಆಗಿದ್ದಾರೆ. ನಾಲ್ಕನೇ ಅವಧಿಗೆ ದೆಹಲಿಯ ಲಕ್ಷ್ಮಿ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು ಮತ್ತು ದೆಹಲಿ ಸರ್ಕಾರದಲ್ಲಿ ಆರೋಗ್ಯ, ನಗರಾಭಿವೃದ್ಧಿ, ಭೂಮಿ ಮತ್ತು ಕಟ್ಟಡ ಖಾತೆಗಳನ್ನು ನಿಭಾಯಿಸಿದ್ದಾರೆ.


ಇದನ್ನೂ ಓದಿ : ಕರೋನಾ ಮಹಾಮಾರಿ ವಿರುದ್ದ ಸಮರಕ್ಕೆ ಬಂತು ವಾಯುಪಡೆ..!


ದೆಹಲಿ(Delhi)ಯಲ್ಲಿ ಬುಧವಾರ 24,638 ಹೊಸ ಕೋವಿಡ್ -19(COVID-19) ಪ್ರಕರಣಗಳು ವರದಿಯಾಗಿವೆ.  249 ಜನ ಮೃತಪಟ್ಟಿದ್ದಾರೆ ಎಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.