ನವದೆಹಲಿ: ಹಿರಿಯ ಪತ್ರಕರ್ತ ಕುಲ್ದೀಪ್ ನಯ್ಯರ್ ಬುಧವಾರ (ಆಗಸ್ಟ್ 22) ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. 95 ವರ್ಷ ವಯಸ್ಸಿನ ನಯ್ಯರ್ ದೆಹಲಿಯ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ. ಲೋಧಿ ರಸ್ತೆಯ ಸ್ಮಶಾನದಲ್ಲಿ ಮಧ್ಯಾಹ್ನ 1 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ.



COMMERCIAL BREAK
SCROLL TO CONTINUE READING

ಉರ್ದು ಪತ್ರಿಕಾ ವರದಿಗಾರನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಕುಲದೀಪ್ ನಯ್ಯರ್ ಹಲವು ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಅವರು ಭಾರತದ ಒಬ್ಬ ಹಿರಿಯ ಪತ್ರಕರ್ತರು, ಪತ್ರಿಕಾ ಅಂಕಣಕಾರರು, ಮಾನವಹಕ್ಕು ಕಾರ್ಯಕರ್ತರು ಮತ್ತು ಲೇಖಕರು. ಅವರು ದಿ ಸ್ಟೇಟ್ಸ್ಮನ್ ಪತ್ರಿಕೆಯ ಸಂಪಾದಕರಾಗಿದ್ದರು. ಪತ್ರಿಕೋದ್ಯಮದ ಹೊರತಾಗಿ ಅವರು ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ನಯ್ಯರ್ ಅವರು ಉರ್ದು ಪತ್ರಿಕಾ ವರದಿಗಾರರಾಗಿ ಭಾರತದ ತುರ್ತು ಪರಿಸ್ಥಿತಿಯ (1975-77) ಸಮಯದಲ್ಲಿ ಬಂಧನಕ್ಕೊಳಗಾಗಿದ್ದರು.


ಕುಲದೀಪ್ ನಯ್ಯರ್ 1924 ರ ಆಗಸ್ಟ್ 14 ರಂದು ಸಯಾಲ್ಕೋಟ್ನಲ್ಲಿ ಜನಿಸಿದರು. ಕುಲ್ದೀಪ್ ನಯ್ಯರ್ ಲಾಹೋರ್ನಲ್ಲಿ ಕಾನೂನು ಪದವಿಯನ್ನು ಪಡೆದರು. ಅವರು ಯುಎಸ್ಎ ಪತ್ರಿಕೋದ್ಯಮ ಪದವಿ ಪಡೆದರು. ಅಲ್ಲದೆ ತತ್ವಶಾಸ್ತ್ರದಲ್ಲಿ ಪಿಹೆಚ್ಡಿಯನ್ನು ಪಡೆದರು.


ಅವರು ಹಲವು ವರ್ಷಗಳ ಕಾಲ ಭಾರತದ ಸರ್ಕಾರದ ಪ್ರೆಸ್ ಇನ್ಫಾರ್ಮೇಶನ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದರು. ಇದರ ನಂತರ, ಅವರು ಯುಎನ್ಐ, ಪಿಐಬಿ, ದಿ ಸ್ಟೇಟ್ಸ್ಮನ್ ಮತ್ತು ಇಂಡಿಯನ್ ಎಕ್ಸ್ಪ್ರೆಸ್ಗಳೊಂದಿಗೆ ಅವರು ದೀರ್ಘಕಾಲದ ಸಂಬಂಧ ಹೊಂದಿದ್ದಾರೆ. ಅವರು 25 ವರ್ಷಗಳ ಕಾಲ 'ದಿ ಟೈಮ್ಸ್ ಲಂಡನ್' ನ ವರದಿಗಾರರಾಗಿದ್ದರು. ಅವರು ಶಾಂತಿ ಮತ್ತು ಮಾನವ ಹಕ್ಕುಗಳ ಮೇಲಿನ ಅವರ ನಿಲುವುಗೆ ಹೆಸರುವಾಸಿಯಾಗಿದ್ದಾರೆ. ಅವರ ಅಂಕಣ 'ಬಿಟ್ವೀನ್ ದಿ ಲೈನ್ಸ್' ಪ್ರಸಿದ್ಧವಾಗಿದೆ. ಇದನ್ನು 14 ಭಾಷೆಗಳಲ್ಲಿ ಸುಮಾರು 80 ಕ್ಕೂ ಹೆಚ್ಚು ಪತ್ರಿಕೆಗಳು ಪ್ರಕಟಿಸಿವೆ.


ಕುಲದೀಪ್ ನಯ್ಯರ್ 1996 ರಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ನಿಯೋಗದಲ್ಲಿ ಸದಸ್ಯರಾಗಿದ್ದರು. 1997 ರಲ್ಲಿ ಭಾರತದ ರಾಜ್ಯಸಭೆ ಸದಸ್ಯರಾಗಿ ನಾಮಾಂಕಿತಗೊಂಡಿದ್ದರು. ಕುಲದೀಪ್ ನಯ್ಯರ್ ಅವರ ಅಂಕಣಗಳು 14 ಭಾಷೆಗಳ ಸುಮಾರು 80 ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಅವುಗಳಲ್ಲಿ ಡೆಕ್ಕನ್ ಹೆರಾಲ್ಡ್ (ಬೆಂಗಳೂರು), ಯುನೈಟೆಡ್ ಕಿಂಗ್‍ಡಂನ ಡೈಲಿ ಸ್ಟಾರ್, ಸಂಡೇ ಗಾರ್ಡಿಯನ್, ಭಾರತದ ದ ಸ್ಟೇಟ್ಸ್ ಮನ್, ಪಾಕಿಸ್ತಾನದ ದ ನ್ಯೂಸ್, ಎಕ್ಸ್ ಪ್ರೆಸ್ ಟ್ರಿಬ್ಯೂನ್, ಡಾನ್ ಪತ್ರಿಕೆಗಳು ಸೇರಿವೆ.