ಮುಂಬೈ / ನವದೆಹಲಿ: ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸುವುದಾಗಿ ಹಣಕಾಸು ಸಚಿವರು ಶುಕ್ರವಾರ ಘೋಷಿಸಿದ ನಂತರ, ದೇಶೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಕಂಡಿತ್ತು. ಇದು ಸೋಮವಾರವೂ ಮುಂದುವರೆದಿದೆ. ಶುಕ್ರವಾರ, 1,921.15 ಪಾಯಿಂಟ್‌ಗಳ ಏರಿಕೆಯೊಂದಿಗೆ 38014.62 ಕ್ಕೆ ಮುಟ್ಟಿದ ಸೆನ್ಸೆಕ್ಸ್ (ಷೇರು ಮಾರುಕಟ್ಟೆ) ವಾರದ ಮೊದಲ ದಿನವೂ ಉತ್ತಮ ಏರಿಕೆ ಕಂಡಿದೆ.


COMMERCIAL BREAK
SCROLL TO CONTINUE READING

ಇಂದು ಬೆಳಗ್ಗಿನ ವಹಿವಾಟಿನಲ್ಲಿ ಷೇರುಗಳ ಸರಾಸರಿ ಮೌಲ್ಯ ಹೆಚ್ಚಾಗಿದೆ. ಸೆನ್ಸೆಕ್ಸ್ ಸೋಮವಾರ 830 ಅಂಕಗಳಷ್ಟು ಏರಿಕೆಗೊಂಡು 38,844.00 ರ ಗಡಿ ದಾಟಿದೆ. ಅದೇ ಸಮಯದಲ್ಲಿ, 50-ಪಾಯಿಂಟ್ ನಿಫ್ಟಿ 268 ಪಾಯಿಂಟ್ ಜಿಗಿದು 11,542.70 ತಲುಪಿದೆ.


ಸೆನ್ಸೆಕ್ಸ್ ವಹಿವಾಟಿನ ಅವಧಿಯಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ 759.95 ಲಾಭದೊಂದಿಗೆ 38774.57 ಮಟ್ಟದಲ್ಲಿ ವಹಿವಾಟು ನಡೆಸಿತು. ಈ ಸಮಯದಲ್ಲಿ, ನಿಫ್ಟಿ 232.3 ಪಾಯಿಂಟ್ಗಳ ಜಿಗಿತದೊಂದಿಗೆ 11506.50 ಕ್ಕೆ ವಹಿವಾಟು ನಡೆಸುತ್ತಿದೆ. ವಹಿವಾಟಿನ ಒಂದು ಹಂತದಲ್ಲಿ, ಇದು 1300 ಪಾಯಿಂಟ್‌ಗಳಿಗಿಂತ ಹೆಚ್ಚು ಏರಿ 39,346.01 ಮಟ್ಟವನ್ನು ತಲುಪಿತು. ಆದರೂ ಇದು ಲಾಭದ ಬುಕಿಂಗ್‌ನಿಂದಾಗಿ ಅಲ್ಪಾವಧಿಯಲ್ಲಿಯೇ ಇಳಿಯಿತು. ಅಂತೆಯೇ, ಇಲ್ಲಿಯವರೆಗಿನ ವಹಿವಾಟಿನಲ್ಲಿ ನಿಫ್ಟಿ 11,666.35 ರ ಗರಿಷ್ಠ ಮಟ್ಟವನ್ನು ಮುಟ್ಟಿದೆ.