ಚುನಾವಣಾ ಫಲಿತಾಂಶಕ್ಕೆ ಜಿಗಿದ ಸೆನ್ಸೆಕ್ಸ್
ನವದೆಹಲಿ: ಬಿಜೆಪಿ ಗುಜರಾತ್ ಮತ್ತು ಹಿಮಾಚಲ್ ಪ್ರದೇಶದ ವಿಧಾನ ಸಭೆಯಲ್ಲಿ ಜಯಸಾಧಿಸುತ್ತಿದ್ದಂತೆ ಬಾಂಬೆ ಶೇರು ಮಾರುಕಟ್ಟೆಯಲ್ಲಿ 235,06 ಅಂಕಗಳ ಏರಿಕೆಯನ್ನು ಕಂಡಿದೆ. ಆ ಮೂಲಕ 33,685.56 ರಿಂದ 33,836.74, ವರೆಗೆ ಅಂಕಗಳನ್ನು ತಲುಪಿದೆ.
ರೂಪಾಯಿ ಮೌಲ್ಯವು ಕೂಡ ಡಾಲರ ಎದುರು ಏರಿಕೆಯನ್ನು ಕಂಡಿದೆ,ಆ ಮೂಲಕ ಒಟ್ಟು ಮೌಲ್ಯವು 63.95 ರಷ್ಟು ಹೆಚ್ಚಳ ಕಂಡಿದೆ. ಇದರಲ್ಲಿ ಮಾರುತಿ ಸುಜುಕಿ, ಹೀರೋ ಮೋಟೋ ಕಾಪ್, ಟಾಟಾಮೋಟರ್ಸ್, ಬಜಾಜ್ ಅಟೋ, ಭಾರತಿ ಏರಟೆಲ್, ಓಏನ್ಜಿಸಿ, ಕೂಡಾ ಶೇಕಡಾ 6 ರಷ್ಟು ಪ್ರಗತಿಯನ್ನು ಕಂಡಿದೆ.
ಜಾಗತಿಕವಾಗಿ ವಾಲ್ ಸ್ಟ್ರೀಟ್ ಮಾರುಕಟ್ಟೆಯಲ್ಲಿಯೂ ಕೂಡ ತೀವ್ರ ಏರಿಕೆಯನ್ನು ಕಂಡಿದೆ. ಜಪಾನಿನ ನಿಕ್ಕೆ 0.15 ರಷ್ಟು ಏನ್ ಮೌಲ್ಯವನ್ನು ವ್ರುದ್ದಿಸಿಕೊಂಡಿದೆ. ಆಷ್ಟ್ರೇಲಿಯಾದ ಶೇರುಗಳಲ್ಲಿ 0.55 ರಷ್ಟು ಏರಿಕೆಯಾಗಿದೆ. ಹಾಂಗ್ ಕಾಂಗ್ ನ ಹಾಂಗ್ ಸೆಂಗ್ 0.8 ರಷ್ಟು ಏರಿಕೆಯನ್ನು ಕಂಡಿದೆ ಎಂದು ತಿಳಿದು ಬಂದಿದೆ.ಭಾರತದಲ್ಲಿನ ಶೇರು ಮಾರುಕಟ್ಟೆಯ ತಜ್ಞರ ಪ್ರಕಾರ ಎರಡು ರಾಜ್ಯಗಳಲ್ಲಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಮುನ್ನಡೆಯನ್ನು ಸಾಧಿಸಿದ್ದಕ್ಕೆ ಈ ಏರಿಕೆಯಾಗಿದೆ ಎಂದು ಆವರು ವಿಶ್ಲೇಷಿಸಿದ್ದಾರೆ.