ನವದೆಹಲಿ: ಅಸ್ಟ್ರಾಜೆನ್ಕಾ ಜೊತೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸುತ್ತಿರುವ ಕೊರೊನಾವೈರಸ್ ಲಸಿಕೆ ಕೋವಿಶೀಲ್ಡ್ ಅನ್ನು ತಯಾರಿಸುತ್ತಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಮುಂದಿನ ವಾರ ಭಾರತದಲ್ಲಿ ಪ್ರಾರಂಭವಾಗಲಿರುವ 3 ನೇ ಹಂತದ ಲಸಿಕೆ ಪ್ರಯೋಗಗಳನ್ನು ನಿಲ್ಲಿಸುವುದಾಗಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಲಸಿಕೆ ಪ್ರಯೋಗವನ್ನು ನಾಲ್ಕು ರಾಷ್ಟ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಿಲ್ಲಿಸಿದ ಹಿನ್ನಲೆಯಲ್ಲಿ ಈ ಕ್ರಮ ಬಂದಿದೆ. ಯುಕೆಯಲ್ಲಿ ಈ ಪ್ರಾಯೋಗಿಕ ಲಸಿಕೆ ಸ್ವೀಕರಿಸಿದವರ ಆರೋಗ್ಯದಲ್ಲಿ ಭಾರಿ ವ್ಯತ್ಯಾಸವಾದ ಹಿನ್ನಲೆಯಲ್ಲಿ ಈಗ ಲಸಿಕೆ ಪ್ರಯೋಗವನ್ನು ಸ್ಥಗಿತಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.


ದೇಶದ ಔಷಧ ನಿಯಂತ್ರಕ ಡಿಸಿಜಿಐ ನಿನ್ನೆ ಸೀರಮ್ ಇನ್ಸ್ಟಿಟ್ಯೂಟ್ ಗೆ ಶೋಕಾಸ್ ನೋಟಿಸ್ ನೀಡಿದ್ದು, ಬೇರೆಡೆ ಲಸಿಕೆ ಪ್ರಯೋಗವನ್ನು ನಿಲ್ಲಿಸಿದ್ದರು ಕೂಡ ಭಾರತದಲ್ಲೇಕೆ ಈ ಪ್ರಯೋಗಗಳನ್ನು ಮುಂದುವರೆಸಲಾಗಿದೆ ಎಂದು ಪ್ರಶ್ನಿಸಿತ್ತು. ಯುಕೆಯಲ್ಲಿ ರೋಗಿಯ ರೋಗದ ಲಕ್ಷಣಗಳನ್ನು ವಿವರಿಸುವ ವರದಿಯನ್ನು ಏಕೆ ಇದುವರೆಗೆ ಸ್ವೀಕರಿಸಲಿಲ್ಲ ಎಂದು ಡಿಸಿಜಿಐ ಪ್ರಶ್ನಿಸಿದೆ.


COVID-19 ಲಸಿಕೆಯ ಸ್ಥಿತಿ ಎಲ್ಲಿಗೆ ಬಂತು? ಇಲ್ಲಿದೆ ಸಂಪೂರ್ಣ ಮಾಹಿತಿ


'ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಅಸ್ಟ್ರಾಜೆನೆಕಾ ಪ್ರಯೋಗಗಳನ್ನು ಪುನರಾರಂಭಿಸುವವರೆಗೆ ಭಾರತದಲ್ಲಿನ ಪ್ರಯೋಗಗಳನ್ನು ಸ್ಥಗಿತಗೊಳಿಸುತ್ತೇವೆ"ಎಂದು ಸೀರಮ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


'ನಾವು ಡಿಸಿಜಿಐನ ಸೂಚನೆಗಳನ್ನು ಅನುಸರಿಸುತ್ತಿದ್ದೇವೆ ಮತ್ತು ಪ್ರಯೋಗಗಳ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಮಾಹಿತಿಗಳಿಗಾಗಿ ನೀವು ಡಿಸಿಜಿಐ ಜೊತೆ ಸಂಪರ್ಕ ಸಾಧಿಸಬಹುದು" ಎಂದು ಆದರ್ ಪೂನವಾಲ್ಲಾ ನೇತೃತ್ವದ ಸಂಸ್ಥೆ ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಿದೆ.


ಡಿಸಿಜಿಐ ನೋಟಿಸ್ ನಂತರ ಪ್ರತಿಕ್ರಿಯಿಸಿರುವ ಸೀರಮ್ ಇನ್ಸ್ಟಿಟ್ಯೂಟ್ ,"ನಾವು ಡಿಸಿಜಿಐ ನಿರ್ದೇಶನದ ಮೇರೆಗೆ ಹೋಗುತ್ತಿದ್ದೇವೆ ಮತ್ತು ಪ್ರಯೋಗಗಳನ್ನು ಸ್ಥಗಿತಗೊಳಿಸಲು ಇಲ್ಲಿಯವರೆಗೆ ತಿಳಿಸಲಾಗಿಲ್ಲ. ಡಿಸಿಜಿಐಗೆ ಯಾವುದೇ ಸುರಕ್ಷತಾ ಕಾಳಜಿ ಇದ್ದರೆ, ನಾವು ಅವರ ಸೂಚನೆಗಳನ್ನು ಪಾಲಿಸುತ್ತೇವೆ ಮತ್ತು ಪ್ರಮಾಣಿತ ಪ್ರೋಟೋಕಾಲ್ಗಳಿಗೆ ಬದ್ಧರಾಗಿರುತ್ತೇವೆ" ಎಂದು ಹೇಳಿದೆ.


ಸ್ವಯಂಸೇವಕನೊಬ್ಬನು ಪ್ರಾಯೋಗಿಕ ಕೊರೊನಾ ಲಸಿಕೆ ಸೇವಿಸಿದ ನಂತರ ಆತನ ಆರೋಗ್ಯದಲ್ಲಿ ಏರುಪೇರಾಗಿದೆ, ಆದರೆ ಔಷಧಿ ಪ್ರಯೋಗದ ಸಂದರ್ಭದಲ್ಲಿ ಇಂತಹ ಪ್ರಕರಣಗಳು ಸಹಜ ಎಂದು ಬ್ರಿಟಿಷ್-ಸ್ವೀಡಿಷ್ ಫಾರ್ಮಾ ಅಸ್ಟ್ರಾಜೆನೆಕಾ ಸಂಸ್ಥೆ ತಿಳಿಸಿದೆ.


ಭಾರತದ 17 ಸ್ಥಳಗಳಲ್ಲಿಗಳಲ್ಲಿ 1,600 ಸ್ವಯಂಸೇವಕರ ಮೇಲೆ ಲಸಿಕೆ ಪ್ರಯೋಗಗಳನ್ನು ನಡೆಸಬೇಕಾಗಿತ್ತು ಮತ್ತು ಮುಂದಿನ ವಾರದಿಂದ ಈ ಪ್ರಕ್ರಿಯೆ ಪ್ರಾರಂಭವಾಗಬೇಕಾಗಿತ್ತು. ಈಗ ಸೀರಮ್ ಇನ್ಸ್ಟಿಟ್ಯೂಟ್ ನ ತನ್ನ ಲಸಿಕೆ ಪ್ರಯೋಗವನ್ನು ಸ್ಥಗಿತಗೊಳಿಸಿದ ಹಿನ್ನಲೆಯಲ್ಲಿ ಈ ಕ್ರಮವು ಭಾರತದಲ್ಲಿ ಮುಂಬರುವ ಪರೀಕ್ಷೆಗಳ ಬಗ್ಗೆ ಕಳವಳಕ್ಕೆ ಕಾರಣವಾಗಿದೆ.


ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಸುಮಾರು 97,000 ಪ್ರಕರಣಗಳು ದಾಖಲಾಗಿವೆ, ಇದು ಜಗತ್ತಿನಲ್ಲೆಡೆ ಒಂದೇ ದಿನದಲ್ಲಿ ಅತಿ ಹೆಚ್ಚಿನ ಪ್ರಕರಣಗಳ ಏರಿಕೆಯಾಗಿದೆ. ವೈರಸ್‌ನಿಂದ ಹೆಚ್ಚು ಹಾನಿಗೊಳಗಾದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಪ್ರಸ್ತುತ ಎರಡನೇ ಸ್ಥಾನದಲ್ಲಿದೆ.