ನವದೆಹಲಿ :  ರಾಷ್ಟ್ರ ರಾಜಧಾನಿ ದೆಹಲಿಯ ಗೋಕುಲಪುರಿ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ (Fire accident). ಈ ಅವಘಡದಲ್ಲಿ ಇದುವರೆಗೆ 7 ಮಂದಿಯ ಮೃತದೇಹಗಳು ಪತ್ತೆಯಾಗಿವೆ. 13 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿತ್ತು (Gokulpuri Fire accident). ಇದೀಗ ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ.


COMMERCIAL BREAK
SCROLL TO CONTINUE READING

ಮಧ್ಯರಾತ್ರಿ  1 ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ :
ಪೂರ್ವ ದೆಹಲಿಯ ಎಡಿಶನಲ್ ಡಿಸಿಪಿ ಮಾತನಾಡಿ, 'ರಾತ್ರಿ 1 ಗಂಟೆಗೆ ಗೋಕುಲಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ (Gokulpuri Fire). ತಕ್ಷಣ ಅಗ್ನಿಶಾಮಕ ದಳವನ್ನು ಸಂಪರ್ಕಿಸಲಾಯಿತು ಎಂದು ಹೇಳಿದ್ದಾರೆ. ಮುಂಜಾನೆ 4 ಗಂಟೆ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲು ಸಾಧ್ಯವಾಯಿತು ಎಂದವರು ತಿಳಿಸಿದ್ದಾರೆ. ಈ ಅವಘಡದಲ್ಲಿ 30 ಕೊಳೆಗೇರಿಗಳು ಸುಟ್ಟು ಕರಕಲಾಗಿದ್ದು, 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.


ನಿಮ್ಮ Aadhar ಕಳೆದುಹೋಗಿದೆಯೇ? ಅದನ್ನ Enrollment ID ಇಲ್ಲದೆಯೇ ಡೌನ್‌ಲೋಡ್ ಮಾಡಬಹುದು!


ಸಿಎಂ ಕೇಜ್ರಿವಾಲ್ ಸಂತಾಪ :
ಅಗ್ನಿ ಅವಘಡಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂತಾಪ ಸೂಚಿಸಿದ್ದಾರೆ (CM Kejriwal). ಇದೊಂದು ಅತ್ಯಂತ ದುಃಖದ ಸುದ್ದಿಯಾಗಿದೆ. ಶೀಘ್ರವೇ ಸ್ಥಳಕ್ಕೆ ತೆರಳಿ ಸಂತ್ರಸ್ತರನ್ನು ಭೇಟಿ  ಮಾಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. 


ಇದನ್ನೂ ಓದಿ : Atal Bihari Vajapayee ಅವರ ಈ ಭವಿಷ್ಯವಾಣಿ ನಿಜ ಸಾಬೀತಾಗುತ್ತದೆ ಎಂದು ಕಾಂಗ್ರೆಸ್ ಕನಸಲ್ಲೂ ಊಹಿಸಿರಲಿಕ್ಕಿಲ್ಲ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.