7 ಸಂಸದರು ಮತ್ತು 199 ಶಾಸಕರು ಪಾನ್ ಕಾರ್ಡ್ ವಿವರ ಘೋಷಿಸಿಲ್ಲ- ಎಡಿಆರ್ ವರದಿ
ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಏಳು ಮಂದಿ ಸಂಸದರು ಮತ್ತು 199 ಶಾಸಕರು ತಮ್ಮ ಪಾನ್ ಕಾರ್ಡ್ ವಿವರಗಳನ್ನು ಸಲ್ಲಿಸಿಲ್ಲ ಎಂದು ವರದಿಯೊಂದು ತಿಳಿಸಿದೆ.
ನವದೆಹಲಿ: ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಏಳು ಮಂದಿ ಸಂಸದರು ಮತ್ತು 199 ಶಾಸಕರು ತಮ್ಮ ಪಾನ್ ಕಾರ್ಡ್ ವಿವರಗಳನ್ನು ಸಲ್ಲಿಸಿಲ್ಲ ಎಂದು ವರದಿಯೊಂದು ತಿಳಿಸಿದೆ.
ದೇಶದ 542 ಲೋಕಸಭೆಯ ಸಂಸದರು ಮತ್ತು 4,086 ಶಾಸಕರು ಪಾನ್ ಕಾರ್ಡ್ ಸಲ್ಲಿಸಿರುವ ಕುರಿತಾದ ಸಮಗ್ರ ವರದಿಯೊಂದನ್ನು ಈಗ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಇಲೆಕ್ಷನ್ ವಾಚ್ (ನ್ಯೂ) ಹೊರತಂದಿದೆ.
ಈ ವರದಿಯಲ್ಲಿ ಏಳು ಸಂಸದರು ಮತ್ತು 199 ಶಾಸಕರು ನಾಮನಿರ್ದೇಶನ ಪತ್ರ ಸಲ್ಲಿಸುವ ವೇಳೆ ಪಾನ್ ಕಾರ್ಡ್ ವಿವರ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.ಸಾಮಾನ್ಯವಾಗಿ ಸಂಸತ್ತು ಮತ್ತು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ಅಫಿಡವಿಟ್ ಜೊತೆಗೆ ಪಾನ್ ಕಾರ್ಡ್ ವಿವರ ಸಲ್ಲಿಸುವುದು ಕಡ್ದಾಯವಾಗಿರುತ್ತದೆ.
ಈಗ ವರದಿ ಪ್ರಕಾರ ಪಾನ್ ವಿವರಗಳನ್ನು ಘೋಷಿಸದ ಶಾಸಕರಲ್ಲಿ ಕಾಂಗ್ರೆಸ್ (51) ಬಿಜೆಪಿ (42) ಸಿಪಿಐ (ಎಂ)( 25) ಪಕ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನು ರಾಜ್ಯವಾರು ನೋಡುವುದಾದರೆ ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಕೇರಳ(33), ಮಿಜೋರಾಮ್ (28) ಮಧ್ಯಪ್ರದೇಶ (19) ಎಡಿಆರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕುತೂಹಲಕರ ಸಂಗತಿಯೇನೆಂದರೆ ಮಿಜೋರಾಂ ಒಟ್ಟು 40 ಶಾಸಕರನ್ನು ಹೊಂದಿದೆ,ಅದರಲ್ಲಿ 28 ಜನರು ತಮ್ಮ ಪಾನ್ ವಿವರಗಳನ್ನು ಸಲ್ಲಿಸಿಲ್ಲ ಎಂದು ವರದಿ ತಿಳಿಸಿದೆ.ಇನ್ನು ಸಂಸದರಲ್ಲಿ, ಒಡಿಶಾದಿಂದ ಇಬ್ಬರು (ಬಿಜೆಡಿ ಯಿಂದಲೂ) ಮತ್ತು ತಮಿಳುನಾಡು (ಎಐಡಿಎಂಕೆ) ಮತ್ತು ಅಸ್ಸಾಂ,ಮಿಜೋರಾಂ ಮತ್ತು ಲಕ್ಷದ್ವೀಪದಿಂದ ತಲಾ ಒಬ್ಬ ಎಂಪಿ ತಮ್ಮ ಪಾನ್ ವಿವರಗಳನ್ನು ಘೋಷಿಸಿಲ್ಲ
ಕಾಂಗ್ರೆಸ್ ನಿಂದ ಒಬ್ಬ ಮತ್ತು ಎಐಯುಡಿಎಫ್ ಮತ್ತು ಎನ್ಸಿಪಿ ಯ ಇಬ್ಬರು ಸಂಸದರು ತಮ್ಮ ಪಾನ್ ವಿವರಗಳನ್ನು ಘೋಷಿಸಿಲ್ಲ ಎಂದು ವರದಿ ಹೇಳಿದೆ.