ನವದೆಹಲಿ: ಗುಜರಾತ್‌ನ ವಡೋದರಾ ಜಿಲ್ಲೆಯ ಹೋಟೆಲ್‌ನ ಒಳಚರಂಡಿಯನ್ನು ಸ್ವಚ್ಛಗೊಳಿಸುವಾಗ ಉಸಿರುಕಟ್ಟುವಿಕೆಯಿಂದ ನಾಲ್ಕು ಕಾರ್ಮಿಕರು ಸೇರಿದಂತೆ ಏಳು ಮಂದಿ ಶನಿವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ವಡೋದರಾ ನಗರದಿಂದ 30 ಕಿ.ಮೀ ದೂರದಲ್ಲಿರುವ ದಾಭೋಯ್ ತಹಸಿಲ್‌ನ ಫರ್ತಿಕುಯಿ ಗ್ರಾಮದ ಹೋಟೆಲ್‌ವೊಂದರಲ್ಲಿ ಈ ಘಟನೆ ನಡೆದಿದೆ. ಹತ್ಯೆಗೀಡಾದವರಲ್ಲಿ ಹೋಟೆಲ್‌ನ ಮೂವರು ಉದ್ಯೋಗಿಗಳೂ ಸೇರಿದ್ದಾರೆ ಎಂದು ತಿಳಿದು ಬಂದಿದೆ. 


"ಒಬ್ಬ ಪೌರ ಕಾರ್ಮಿಕ ಮ್ಯಾನ್‌ಹೋಲ್‌ನಿಂದ ಹೊರಬರಲು ವಿಫಲವಾದಾಗ, ಇತರರು ಒಳಗೆ ಹೋಗಿದ್ದಾರೆ ಆಗ ಎಲ್ಲರೂ ಉಸಿರುಕಟ್ಟುವಿಕೆಯಿಂದ ಸಾವನ್ನಪ್ಪಿದರು" ಎಂದು ಜಿಲ್ಲಾಧಿಕಾರಿ ಕಿರಣ್ ಜಾವೇರಿ ಪಿಟಿಐಗೆ ತಿಳಿಸಿದ್ದಾರೆ.