ಚಂಡೀಗಢ: ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ಗಣಿಗಾರಿಕೆ ವಲಯದಲ್ಲಿ ಭೂಕುಸಿತ(Haryana Landslide)ಸಂಭವಿಸಿದ ನಂತರ ಸುಮಾರು 15 ರಿಂದ 20 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಇದುವರೆಗೆ ಮೂವರನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಿವಾನಿ ಜಿಲ್ಲೆಯ ದಡಮ್ ಗಣಿಗಾರಿಕೆ(Mining Landslide) ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಗಣಿಗಾರಿಕೆ ವೇಳೆ ಭೂ ಕುಸಿತವಾಗಿ 10-15 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ANI ಸುದ್ದಿಸಂಸ್ಥೆ ವರದಿ ಮಾಡಿದೆ. ಘಟನೆಯಲ್ಲಿ ಗಣಿಗಾರಿಕೆಗೆ ಬಳಸುತ್ತಿದ್ದ ವಾಹನಗಳು ಕೂಡ ಕುಸಿತವಾಗಿರುವ ಭೂಮಿಯ ಅವಶೇಷಗಳಡಿ ಹೂತು ಹೋಗಿವೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Bank Locker : ಇಂದಿನಿಂದ ಬದಲಾಗಿದೆ ಬ್ಯಾಂಕ್ ಲಾಕರ್ ನಿಯಮಗಳು!


ಶನಿವಾರ(ಜ.1) ಬೆಳಗ್ಗೆ 8.15ರ ಸುಮಾರಿಗೆ ಗಣಿಗಾರಿಕೆ(Landslide Incident) ನಡೆಯುತ್ತಿದ್ದಾಗ ಭೂ ಕುಸಿತವಾಗಿದೆ ಎಂದು ತಿಳಿದುಬಂದಿದೆ. ಘಟನೆ ವೇಳೆ ಸ್ಥಳದಲ್ಲಿ ನಿಂತಿದ್ದ ಸುಮಾರು ಅರ್ಧ ಡಜನ್‌ ಪಾಪ್‌ಲ್ಯಾಂಡ್‌ ಯಂತ್ರಗಳು ಮತ್ತು ಡಂಪರ್‌ಗಳು ಹೂತುಹೋಗಿವೆ ಎಂದು ತಿಳಿದುಬಂದಿದೆ.


Randeep Guleria : ಓಮಿಕ್ರಾನ್ ಡೆಲ್ಟಾಕ್ಕಿಂತ ಏಕೆ ದುರ್ಬಲವಾಗಿದೆ? ವಿವರಣೆ ನೀಡಿದ AIIMS ನಿರ್ದೇಶಕರು 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.