IMD Warning : ಆಗ್ನೇಯ ಅರಬ್ಬಿ ಸಮುದ್ರದಲ್ಲಿ  ಮಂಗಳವಾರ ಸಂಜೆ ಚಂಡಮಾರುತ ಎದ್ದಿದೆ ಎನ್ನುವುದನ್ನು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಚಂಡಮಾರುತಕ್ಕೆ 'ಬಿಪರ್ಜೋಯ್' ಎನ್ನುವ ಹೆಸರನ್ನು ಬಾಂಗ್ಲಾದೇಶ ಇಟ್ಟಿದೆ. ಇದರ ಅರ್ಥ 'ವಿಪತ್ತು'. ಈ ಚಂಡಮಾರುತ ಆಗ್ನೇಯ ಮತ್ತು ಪಕ್ಕದ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದಲ್ಲಿ ಗಂಟೆಗೆ ನಾಲ್ಕು ಕಿಲೋಮೀಟರ್ ವೇಗದಲ್ಲಿ ಉತ್ತರದ ಕಡೆಗೆ ಚಲಿಸುತ್ತಿದೆ ಎಂದು IMD ಬುಲೆಟಿನ್ ನಲ್ಲಿ ತಿಳಿಸಿದೆ. 


COMMERCIAL BREAK
SCROLL TO CONTINUE READING

ಇದು ಬಹುತೇಕ ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದ್ದು, ಕ್ರಮೇಣ ತೀವ್ರ ರೂಪ ಪಡೆಯುವ ಸಾಧ್ಯತೆ ಇದೆ. ಚಂಡಮಾರುತದ ಹಿನ್ನೆಲೆಯಲ್ಲಿ ಕೊಂಕಣ-ಗೋವಾ-ಮಹಾರಾಷ್ಟ್ರ ಕರಾವಳಿಯಲ್ಲಿ ಜೂನ್ 8 ರಿಂದ 10 ರವರೆಗೆ ಅತಿ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿದ ಮೀನುಗಾರರು ಮರಳುವಂತೆ ಸೂಚಿಸಲಾಗಿದೆ. 


ಇದನ್ನೂ ಓದಿ : Balasore Train Accident: 40 ಜನರ ಶರೀರದ ಮೇಲೆ ಒಂದೂ ಗಾಯದ ಗುರುತಿಲ್ಲ... ಆದರೂ ಅವರು ಮೃತಪಟ್ಟಿದ್ದಾರೆ... ಅದ್ಹೇಗೆ ಸಾಧ್ಯ?


IMD ಹೇಳಿದ್ದೇನು? :
ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಉಂಟಾಗುವ ವಾಯು ಭಾರ ಕುಸಿತ   ಕೇರಳ ಕರಾವಳಿಯತ್ತ ಆಗಮಿಸುವ ಮುಂಗಾರಿನ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು ಎಂದು ಐಎಂಡಿ ಸೋಮವಾರ ಹೇಳಿತ್ತು. ಆದರೆ, ಕೇರಳಕ್ಕೆ ಮುಂಗಾರು ಆಗಮನದ ದಿನಾಂಕವನ್ನು ಹವಾಮಾನ ಇಲಾಖೆ ನೀಡಿಲ್ಲ. 


ಜೂನ್ 8 ಅಥವಾ 9 ರಂದು ಕೇರಳದಲ್ಲಿ ಮಾನ್ಸೂನ್ ಅಪ್ಪಳಿಸಬಹುದೆಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ 'ಸ್ಕೈಮೆಟ್ ವೆದರ್' ತಿಳಿಸಿದೆ. ಆದರೆ ಈ ಅವಧಿಯಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಅರಬ್ಬೀ ಸಮುದ್ರದಲ್ಲಿನ ಹವಾಮಾನ  ವೈಪರೀತ್ಯಗಳು ಮಾನ್ಸೂನ್ ಆಗಮನದ ಮೇಲೆ ಪರಿಣಾಮ ಬೀರುತ್ತವೆ ಎನ್ನಲಾಗಿದೆ. ಇದರ ಪರಿಣಾಮದಿಂದ ಮಾನ್ಸೂನ್ ಕರಾವಳಿ ಪ್ರದೇಶಗಳನ್ನು ತಲುಪಬಹುದು. ಆದರೆ ಪಶ್ಚಿಮ ಘಟ್ಟಗಳನ್ನು ಮೀರಿ ಹೋಗುವುದು ಸಾಧ್ಯಾವಾಗುವುದಿಲ್ಲ. 


ಇದನ್ನೂ ಓದಿ : Balasore Train Mishap: ಓಡಿಷಾ ರೈಲು ದುರಂತ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದ ಸಿಬಿಐ


ಜೂನ್ 7 ರಂದು ಕೇರಳಕ್ಕೆ ಮುಂಗಾರು ಅಪ್ಪಳಿಸಲಿದೆ ಎಂದು ಸ್ಕೈಮೆಟ್ ಮೊದಲೇ ಮುನ್ಸೂಚನೆ ನೀಡಿತ್ತು. ಅದು ಮೂರು ದಿನಗಳ ಮೊದಲು ಅಥವಾ ನಂತರ ಹೀಗೆ ಸ್ವಲ್ಪ ವ್ಯತ್ಯಾಸ ಆಗಬಹುದು ಎಂದು ಕೂಡಾ ಹೇಳಿತ್ತು. ಈ ಅವಧಿಯಲ್ಲಿ ನೈಋತ್ಯ ಮುಂಗಾರು ಆಗಮಿಸುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಹೇಳಿತ್ತು. ಲಕ್ಷದ್ವೀಪ, ಕೇರಳ ಮತ್ತು ಕರಾವಳಿ ಕರ್ನಾಟಕದಲ್ಲಿ ಸತತ ಎರಡು ದಿನಗಳಲ್ಲಿ ನಿಗದಿತ ಮಳೆಯಾದಾಗ ಮಾನ್ಸೂನ್ ಪ್ರಾರಂಭವಾಯಿತು ಎಂದು ಪರಿಗಣಿಸಲಾಗುತ್ತದೆ. ಆದರೂ  ಮಾನ್ಸೂನ್‌ನ ಆರಂಭ  ಅಷ್ಟೇನೂ ಶಕ್ತಿಯುತವಾಗಿರುವುದಿಲ್ಲ. 


ಕೇರಳದಲ್ಲಿ ಸೋಮವಾರವೂ ಉತ್ತಮ ಮಳೆಯಾಗಿದ್ದು, ಇನ್ನೆರಡು ಮೂರು ದಿನಗಳಲ್ಲಿ ಮಾನ್ಸೂನ್ ಆಗಮನಕ್ಕೆ ಅನುಕೂಲಕರ ವಾತಾವರಣವಿದೆ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಡಿಎಸ್ ಪೈ ಹೇಳಿದ್ದಾರೆ. ಚಂಡಮಾರುತವು ದುರ್ಬಲಗೊಂಡ ನಂತರ, ಮುಂಗಾರು ದಕ್ಷಿಣ ಪರ್ಯಾಯ ದ್ವೀಪದಿಂದ ಮುನ್ನಡೆಯಲಿದೆ. ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರಂದು ಕೇರಳವನ್ನು ತಲುಪುತ್ತದೆ. ಇಡು ಅನೇಕ ಬಾರಿ ಏಳು ದಿನಗಳ ಮುಂಚಿತವಾಗಿಯೂ ಆಗಬಹುದು ಅಥವಾ  ವಿಳಂಬವಾಗಿಯೂ ಆಗಬಹುದು. 


ಇದನ್ನೂ ಓದಿ : Manipur Clash: ಮಣಿಪುರ ಹಿಂಸಾಚಾರದಲ್ಲಿ ಓರ್ವ ಬಿಎಸ್ಎಫ್ ಜವಾನ ಹುತಾತ್ಮ, ಅಸ್ಸಾಂ ರೈಫಲ್ಸ್ ನ ಇಬ್ಬರು ಯೋಧರಿಗೂ ಗುಂಡೇಟು


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ