ನವದೆಹಲಿ: ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವು ಹೆಸರುಗಳ ಮರುನಾಮಕರಣಕ್ಕೆ ಮುಂದಾಗಿರುವ ಕ್ರಮದ ಬಗ್ಗೆ ಕಿಡಿಕಾರಿರುವ ಇತಿಹಾಸಕಾರ ಇರ್ಫಾನ್ ಹಬೀಬ್ "ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರು ಪರ್ಷಿಯಾ ಮೂಲದ್ದು ಆದ್ದರಿಂದ ಬಿಜೆಪಿ ಮೊದಲು ಅದನ್ನು ಬದಲಾಯಿಸಬೇಕೆಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಎಎನ್ಐ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ತಿಳಿಸಿರುವ ಇತಿಹಾಸಕಾರ ಇರ್ಫಾನ್ ಹಬೀಬ್ " ಶಾ ಎನ್ನುವುದು ಪರ್ಷಿಯನ್ ಪದ  ಇದು ಸಂಸ್ಕೃತದಿಂದ ಬಂದಿರುವಂತದ್ದಲ್ಲ,ಒಂದು ವೇಳೆ  ಬಿಜೆಪಿ ನಗರಗಳ ಹೆಸರುಗಳನ್ನು ಬದಲಿಸುತ್ತಿರಬೇಕಾದರೆ ಅದು ಮೊದಲು ತಮ್ಮ ಹೆಸರುಗಳಿಂದಲೇ ಪ್ರಾರಂಭವಾಗಬೇಕು" ಎಂದು ಹಬೀಬ್ ಅವರು ತಿಳಿಸಿದ್ದಾರೆ.



ಇನ್ನು ಮುಂದುವರೆದು" ಗುಜರಾತ್ ಎನ್ನುವುದು ಕೂಡ ಪರ್ಷಿಯನ್ ಮೂಲದ್ದು ಇದನ್ನು ಈ ಹಿಂದೆ ಗುರ್ಜರತ್ರಾ ಎಂದು ಕರೆಯುತ್ತಿದ್ದರು ಆದ್ದರಿಂದ ಅದನ್ನು ಅವರು ಬದಲಾಯುಸಬೇಕು ಎಂದರು.ಬಿಜೆಪಿ ಸರ್ಕಾರದ  ಮರುನಾಮಕರಣ ರಾಜಕೀಯ ಮೂಲತಃ ಆರೆಸೆಸ್ಸ್ ನ ನಿಯಮವಾಗಿದ್ದು,ಪಕ್ಕದ ಪಾಕಿಸ್ತಾನದಲ್ಲಿ ಯಾವುದು ಇಸ್ಲಾಂ ಅಲ್ಲವೋ ಅದೆಲ್ಲವನ್ನು ತೆಗೆದುಹಾಕುವಂತದ್ದು.ಆದ್ದರಿಂದ  ಬಿಜೆಪಿ ಮತ್ತು ಬಲಪಂಥೀಯ ಕಾರ್ಯಕರ್ತರಿಗೆ ಯಾವುದು ಹಿಂದು ಅಲ್ಲವೋ ಅದೆಲ್ಲವನ್ನು ಕೂಡ ತಗೆದುಹಾಕುವಂತ ಕಾರ್ಯಕ್ಕೆ ಮುಂದಾಗಿದ್ದಾರೆ ಅದರಲ್ಲೂ ಪ್ರಮುಖವಾಗಿ ಮುಸ್ಲಿಮರು ಇರುವ ಪ್ರದೇಶದಲ್ಲಿ ಎಂದು ಅವರು ತಿಳಿಸಿದರು.


ಇತಿಹಾಸಕಾರ ಇರ್ಫಾನ್ ಹಬೀಬ್ ಅವರ ಹೇಳಿಕೆಯು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಲಹಾಬಾದ್ ನ್ನು ಪ್ರಯಾಗ್ ರಾಜ್ ಎಂದು ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮತ್ತು ಎಂದು ನಾಮಕರಣ ಮಾಡಿದ ಹಿನ್ನಲೆಯಲ್ಲಿ ಬಂದಿದೆ.