ನವದೆಹಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೂರು ದಿನಗಳಲ್ಲಿ ಸೈನ್ಯವನ್ನು ರಚಿಸುವ ಸಾಮರ್ಥ್ಯವನ್ನು ಆರೆಸೆಸ್ ಹೊಂದಿದೆ ಎಂಬ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಇದು "ಪ್ರತಿ ಭಾರತೀಯರಿಗೆ ಮಾಡಿರುವ ಅವಮಾನ" ಎಂದು ಹೇಳುವ ಮೂಲಕ, ಇದು ನಮ್ಮ ಹುತಾತ್ಮರನ್ನು ಅವಮಾನಿಸಿದಂತೆ ಎಂದು ವಾಗ್ದಾಳಿ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ರಾಹುಲ್, ಭಾರತೀಯ ಸೇನೆಯನ್ನು ಮತ್ತು ಹುತಾತ್ಮರನ್ನು ಅವಮಾನಿಸುವಂತಹ ಹೇಳಿಕೆಯನ್ನು ಭಾಗವತ್ ಅವರಿಗೆ ಇಂತಹ ಹೇಳಿಕೆ ನೀಡಲು ನಾಚಿಕೆಯಾಗಬೇಕು. ಅಲ್ಲದೆ, ನಾವೆಲ್ಲರೂ ಎಂದಿಗೂ ಸೆಲ್ಯೂಟ್ ಮಾಡುವ ಹುತಾತ್ಮತ ಯೋಧರಿಗೆ ಆರ್’ಎಸ್ಎಸ್ ಮುಖಂಡ ಭಾಗವತ್ ಅವರ ಹೇಳಿಕೆ ಅಗೌರವವನ್ನು ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.



ಬಿಹಾರದ ಮುಜಫರ್ ಪುರ್ ನಗರದ ಆರು ದಿನಗಳ ಭೇಟಿಯ ಕೊನೆಯ ದಿನದಂದು ಜಿಲ್ಲಾ ಶಾಲೆಯ ಮೈದಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಆರೆಸೆಸ್ ಮುಖ್ಯಸ್ಥ ಮೋಹನ್ ಭಾಗವತ್, 
ದೇಶದಲ್ಲಿ ಯುದ್ಧದ ಪರಿಸ್ಥಿತಿ ಉಂಟಾದರೆ, ದೇಶಕ್ಕಾಗಿ ಹೋರಾಡಲು ಮೂರೇ ದಿನದಲ್ಲಿ ಸೈನ್ಯವನ್ನು ತಯಾರಿಸುವ ಸಾಮರ್ಥ್ಯವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೊಂದಿದೆ ಎಂದು ಹೇಳಿದ್ದರು.