Sharad Pawar Health Update: ಹೊಟ್ಟೆ ನೋವು ಹಿನ್ನೆಲೆ ಶರದ್ ಪವಾರ್ ಆಸ್ಪತ್ರೆಗೆ ದಾಖಲು
Sharad Pawar Health Update: ಈ ಕುರಿತು ಮಾಹಿತಿ ನೀಡಿರುವ ಮಹಾರಾಷ್ಟ್ರ ಸರ್ಕಾರದ ಮಂತ್ರಿ ಹಾಗೂ NCP ಮುಖಂಡ ನವಾಬ್ ಮಲಿಕ್, ಆಕಸ್ಮಿಕವಾಗಿ ಕಾಣಿಸಿಕೊಂಡ ಹೊಟ್ಟೆನೋವಿನ ಹಿನ್ನೆಲೆ ಶರದ್ ಪವಾರ್ (Sharad Pawar) ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಹೇಳಿದ್ದಾರೆ.
ಮುಂಬೈ: Sharad Pawar Health Update - NCP ಸುಪ್ರೀಮೋ ಶರದ್ ಪವಾರ್ (NCP Chief Sharad Pawar) ಅವರನ್ನು ಭಾನುವಾರ ರಾತ್ರಿ ಅನಾರೋಗ್ಯದ ಕಾರಣ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ತಪಾಸಣೆಗಾಗಿ ಕರೆದೊಯ್ಯಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಮಹಾರಾಷ್ಟ್ರ ಸರ್ಕಾರದ ಮಂತ್ರಿ ಹಾಗೂ NCP ಮುಖಂಡ ನವಾಬ್ ಮಲಿಕ್ (Nawab Malik), ಆಕಸ್ಮಿಕವಾಗಿ ಕಾಣಿಸಿಕೊಂಡ ಹೊಟ್ಟೆನೋವಿನ ಹಿನ್ನೆಲೆ ಶರದ್ ಪವಾರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಹೇಳಿದ್ದಾರೆ. ಹಿರಿಯ ವೈದ್ಯರ ನಿಗಾದಲ್ಲಿ ಶರದ್ ಪವಾರ್ ಅವರ ಮೇಲೆ ಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Param Bir Sing Letter Controversy- ರಾಜೀನಾಮೆ ನೀಡುತ್ತಾರೆಯೇ ಅನಿಲ್ ದೇಶ್ಮುಖ್? ಶರದ್ ಪವಾರ್ ಹೇಳಿದ್ದೇನು?
ಶರದ್ ಪವಾರ್ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿ ಮಾತನಾಡಿರುವ ಅವರು, ಶರದ್ ಪವಾರ್ ಅವರ ಗಾಲ್ ಬ್ಲ್ಯಾಡರ್ ನಲ್ಲಿ ತೊಂದರೆ ಇರುವುದಾಗಿ ವೈದ್ಯರು ಹೇಳಿದ್ದಾರೆ ಎಂದಿದ್ದಾರೆ. ಶರದ್ ಪವಾರ್ ಅವರು ರಕ್ತವನ್ನು ತಿಳಿಯಾಗಿಸುವ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಈ ಸಮಸ್ಯೆ ಕಾಣಿಸಿಕೊಂಡ ಬಳಿಕ ಅವರು ಅದನ್ನು ನಿಲ್ಲಿಸಿದ್ದರು ಎಂದು ನವಾಬ್ ಮಲಿಕ್ ಮಾಹಿತಿ ನೀಡಿದ್ದಾರೆ. ಮಾರ್ಚ್ 31ರಂದು ಅವರನ್ನು ಪುನಃ ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದು, ಬಳಿಕ ಅವರ ಮೇಲೆ ಎಂಡೊಸ್ಕೊಪಿ ಹಾಗೂ ಸರ್ಜರಿ ನಡೆಸಲಾಗುವುದು ಎಂದು ಮಲಿಕ್ ಹೇಳಿದ್ದಾರೆ.
ಇದನ್ನೂ ಓದಿ- ಸಚಿನ್ ತೆಂಡೂಲ್ಕರ್ ಗೆ ಶರದ್ ಪವಾರ್ ನೀಡಿದ ಆ ಸಲಹೆ ಏನು ಗೊತ್ತೇ?
NCP ಮುಖ್ಯಸ್ಥರಾಗಿರುವ ಶರದ್ ಪವಾರ್ ಹಾಗೂ ಅವರ ಪಕ್ಷದ ಇನ್ನೋರ್ವ ಮುಖಂಡ ಪ್ರಫುಲ್ ಪಟೇಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah)ಅವರೊಂದಿಗಿನ ಭೇಟಿಯ ಸುದ್ದಿಗಳು ಪ್ರಕಟವಾಗುತ್ತಲೇ ಮಹಾರಾಷ್ಟ್ರದ ರಾಜಕೀಯ ವಾತಾವರಣ ಕಾವೇರತೊಡಗಿದೆ. ಒಂದೆಡೆ ಈ ಭೇಟಿಯ ಕುರಿತಾದ ಸುದ್ದಿಗಳನ್ನು NCP ತಳ್ಳಿಹಾಕಿದ್ದರೆ, ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಶಿವಸೇನಾ ಹಾಗೂ NCP ಮಿತ್ರಪಕ್ಷವಾಗಿರುವ ಕಾಂಗ್ರೆಸ್ ಈ ಭೇಟಿಯನ್ನು ಪ್ರಶ್ನಿಸಿದೆ. ಈ ಕುರಿತು ಪ್ರಶ್ನಿಸಿರುವ ಕಾಂಗ್ರೆಸ್ ಒಂದು ವೇಳೆ ಗೃಹ ಸಚಿವರು ದೇಶದ ಯಾವುದೇ ಓರ್ವ ಹಿರಿಯ ಮುಖಂಡನ ಜೊತೆಗೆ ಚರ್ಚೆ ನಡೆಸುತ್ತಿದ್ದರೆ, ಅವರು ಈ ಕುರಿತು ದೇಶಕ್ಕೆ ಮಾಹಿತಿ ನೀಡಬೇಕು. ನಾಗರಿಕರಿಗೆ ಈ ಕುರಿತು ತಿಳಿಯುವ ಹಕ್ಕಿದೆ ಎಂದು ಹೇಳಿದೆ.
ಇದನ್ನೂ ಓದಿ-Rape ಅಲ್ಲ Relationship ಎಂದ 'ಮಹಾ' ಸಚಿವನ ಬಗ್ಗೆ ಶರದ್ ಪವಾರ್ ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.