ಮುಂಬೈ: ಮಹಾರಾಷ್ಟ್ರ(Maharashtra) ಬಿಜೆಪಿಗೆ ಅಜಿತ್ ಪವಾರ್ (Ajit Pawar) ಬೆಂಬಲ ನೀಡಿದ್ದಕ್ಕೆ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್(Sharad Pawar) ಅವರ ಪುತ್ರಿ ಸುಪ್ರಿಯಾ ಸುಲೇ(Supriya Sule) WhatsApp ಸ್ಟೇಟಸ್ ಮೂಲಕ ಅಸಮಾಧಾನ ಹೊರಹಾಕಿದ್ದು,"ಪಕ್ಷವೂ ಹೋಳಾಯಿತು, ಕುಟುಂಬವೂ ಒಡೆಯಿತು" 'ಜೀವನದಲ್ಲಿ ಯಾರನ್ನು ನಂಬುವುದು' ಎಂದು ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಸುಪ್ರಿಯಾ ಮೊದಲು "ಪಕ್ಷ ಮತ್ತು ಕುಟುಂಬವು ಮುರಿದುಹೋಯಿತು" ಎಂದು ಬರೆದಿದ್ದರು. ಇದರ ನಂತರ ಅವರು ತಮ್ಮ WhatsApp ಸ್ಟೇಟಸ್ ನಲ್ಲಿ "ಈಗ ಜೀವನದಲ್ಲಿ ಯಾರನ್ನು ನಂಬಬೇಕು? ಇಂತಹ ಮೋಸ ಮಾಡುತ್ತಾರೆ ಎಂದು ಎಣಿಸಿರಲಿಲ್ಲ. ಅವರನ್ನು ಸಮರ್ಥಿಸಿಕೊಂಡಿದ್ದೆವು. ಪ್ರೀತಿಸಿದ್ದೆವು, ಆದರೆ ಕೊನೆಗೆ ನಮಗೆ ದೊರೆತಿದ್ದೇನು?" ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.




ಭಾರತೀಯ ಜನತಾ ಪಕ್ಷದ (BJP) ನಾಯಕ ದೇವೇಂದ್ರ ಫಡ್ನವೀಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರು ಶನಿವಾರ ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸಿದ ನಂತರ ಎನ್‌ಸಿಪಿ ಒಂದರ್ಥದಲ್ಲಿ ಮೂಕವಿಸ್ಮಿತವಾಗಿದೆ. ಪವಾರ್ ಕುಟುಂಬದಲ್ಲಿ ಒಂದು ರೀತಿಯ ಗೊಂದಲವೇ ಸೃಷ್ಟಿಯಾಗಿದೆ ಎಂದು ಎನ್‌ಸಿಪಿ ಹಿರಿಯ ಮುಖಂಡರೊಬ್ಬರು ಶನಿವಾರ ಹೇಳಿದ್ದಾರೆ. ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಬೆನ್ನಿಗೆ ಚಾಕು ಇರಿದಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.


ವಾಸ್ತವವಾಗಿ, ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗಿನ ಸಮ್ಮಿಶ್ರ ಸರ್ಕಾರ ರಚಿಸಲಿದೆ. ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ನಂಬಲಾಗಿತ್ತು.  ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ಕುರಿತು ಮಾತುಕತೆಗಳನ್ನು ಬಹುತೇಕ ಅಂತಿಮಗೊಳಿಸಲಾಗಿತ್ತು.


ಆದರೆ ಶುಕ್ರವಾರ ತಡರಾತ್ರಿ 11 ರಿಂದ ಶನಿವಾರ ಬೆಳಿಗ್ಗೆ 8 ರ ನಡುವೆ ಇಂತಹ ಆಟ ನಡೆದಿದ್ದು, ಬಹುಶಃ ಯಾವುದೇ ಪಕ್ಷದ ನಾಯಕರೂ ಕೂಡ ಇದನ್ನು ಊಹಿಸಿರಲಿಲ್ಲ. ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಆಗಿ ಮತ್ತು ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.