ನವದೆಹಲಿ: ಜೆಡಿಯುನ ಮಾಜಿ ನಾಯಕ ಶರದ್ ಯಾದವ್ ವಸುಂಧರಾ ರಾಜೆ ವಿರುದ್ಧ ನೀಡಿರುವ ಹೇಳಿಕೆ ವಿಚಾರವಾಗಿ ಈಗ ಕ್ಷಮೆ ಕೋರಿದ್ದಾರೆ.


COMMERCIAL BREAK
SCROLL TO CONTINUE READING

ಈ ತಮ್ಮ ಹೇಳಿಕೆಗೆ ಬಂದಿರುವ ವಿರೋಧಕ್ಕೆ ಪ್ರತಿಕ್ರಿಯಿಸಿರುವ ಶರದ್ ಯಾದವ್ "ನಾನು ಅವರ ಹೇಳಿಕೆಯನ್ನು ಗಮನಿಸಿದ್ದೇನೆ,ಅವರ ಕುಟುಂಬದೊಂದಿಗೆ ನಾನು ಹಳೆಯ ಸಂಬಂಧವನ್ನು ಹೊಂದಿದ್ದೇನೆ.ಒಂದು ವೇಳೆ ನನ್ನ ಮಾತುಗಳಿಂದ ಅವರಿಗೆ ನೋವಾಗಿದ್ದರೆ ನಾನು ಕ್ಷಮಿಸುತ್ತೇನೆ ಮತ್ತು ಈ ವಿಚಾರವಾಗಿ ನಾನು ಅವರಿಗೆ ಪತ್ರವನ್ನು ಬರೆಯುತ್ತೇನೆ ಎಂದು ಹೇಳಿರುವುದನ್ನು ಎಎನ್ಐ ಉಲ್ಲೇಖಿಸಿದೆ.


ಶರದ್ ಯಾದವ್ ಅವರು ಸಿಎಂ ರಾಜೆ ವಿರುದ್ದವಾಗಿ ಮಾತನಾಡುತ್ತಾ " ವಸುಂಧರಾ ರಾಜೆ ಆಯಾಸಗೊಂಡಿದ್ದಾರೆ ಮತ್ತು ಬಹಳ ದಪ್ಪವಾಗಿದ್ದಾರೆ.ಈ ಹಿಂದೆ ಅವರು ತೆಳ್ಳಗಿದ್ದರು ಅವರು ಮಧ್ಯಪ್ರದೇಶದ ಮಗಳು ಅವರಿಗೆ ವಿಶ್ರಾಂತಿ ನೀಡಿ" ಎಂದು ಹೇಳಿಕೆ ನೀಡಿದ್ದರು ಆದರೆ  ಅವರ ಈ ಹೇಳಿಕೆ ಕುರಿತಾಗಿ ಬಹಳ ವಿರೋಧ ವ್ಯಕ್ತವಾಗಿತ್ತು.ಸಿಪಿಎಂನ ಬೃಂದಾ ಕಾರಟ್ ಕೂಡ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದರು.ಈಗ ಇದನ್ನು ಗಮನಿಸಿರುವ ಶರದ್ ಯಾದವ್ ಅವರು ಕ್ಷಮೆಯಾಚಿಸಿದ್ದಾರೆ.