ಮುಂಬೈ ಷೇರುಪೇಟೆಯಲ್ಲಿ ತುಸು ಚೇತರಿಕೆ
ವಾರಾಂತ್ಯದಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 300ಕ್ಕೂ ಹೆಚ್ಚು ಅಂಕಗಳ ಏರಿಕೆಯಾಗಿದೆ.
ಮುಂಬೈ: ದಾಖಲೆ ಮಟ್ಟದ ಆರ್ಥಿಕ ಹಿಂಜರಿತದಿಂದ ನಿರಂತರವಾಗಿ ಕುಸಿಯುತ್ತಿದ್ದ ಮುಂಬೈ ಷೇರುಪೇಟೆಯ ವಹಿವಾಟಿನಲ್ಲಿ ಶುಕ್ರವಾರ ತುಸು ಸಮಾಧಾನಕರ ವಾತಾವರಣ ಕಂಡುಬಂದಿದೆ.
ವಾರಾಂತ್ಯದಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 300ಕ್ಕೂ ಹೆಚ್ಚು ಅಂಕಗಳ ಏರಿಕೆಯಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿಯಲ್ಲಿ 98 ಅಂಕಗಳ ಏರಿಕೆ ಕಂಡುಬಂದಿದೆ.
ಕೇಂದ್ರ ವಿತ್ತ ಸಚಿವಾಲಯ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಆರ್ಥಿಕ ಚೇತರಿಕೆ ಕುರಿತು ಪ್ರೋತ್ಸಾಹದಾಯಕ ಸುದ್ದಿಗಳು ಬರುತ್ತಿರುವುದು ಹಾಗೂ ವಾಣಿಜ್ಯ ಸಮರವನ್ನು ಕೊನೆಗಾಣಿಸುವ ಕುರಿತು ಅಮೆರಿಕ ಮತ್ತು ಚೀನಾ ಮಾತುಕತೆ ಮರು ಆರಂಭವಾಗಿರುವುದು ಷೇರುಪೇಟೆಯ ಚೇತರಿಕೆಗೆ ಕಾರಣವಾಯಿತು ಎಂದು ಮಾರುಕಟ್ಟೆ ಪರಿಣಿತರು ತಿಳಿಸಿದ್ದಾರೆ.
ಸೆನ್ಸೆಕ್ಸ್ ಒಟ್ಟು 337.35 ಅಂಕಗಳ ಏರಿಕೆಯೊಂದಿಗೆ 36,981 ಅಂಕಗಳಲ್ಲಿ ವಹಿವಾಟು ನಿಲ್ಲಿಸಿದರೆ, ನಿಫ್ಟಿ ಒಟ್ಟಾರೆ 98.30 ಅಂಕಗಳ ಹೆಚ್ಚಳದೊಂದಿಗೆ 10,946.20 ಅಂಕಗಳಲ್ಲಿ ವಹಿವಾಟು ನಿಲ್ಲಿಸಿತು.