ನವದೆಹಲಿ: ಟಿಕ್‌ಟಾಕ್ ಸೇರಿದಂತೆ ಚೀನಾದ ಆ್ಯಪ್‌ಗಳನ್ನು ದೇಶದಲ್ಲಿ ನಿಷೇಧಿಸಿದ ನಂತರ ಭಾರತೀಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಶೇರ್‌ಚಾಟ್ ತನ್ನ ಟಿಕ್ ಟಾಕ್ ನಂತೆಯೇ ಇರುವ 'ಮೊಜ್' ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಟಿಕ್‌ಟಾಕ್‌ನಂತೆಯೇ ವೈಶಿಷ್ಟ್ಯಗಳನ್ನು ಹೊಂದಿದೆ, ಇದರಲ್ಲಿ ಸ್ಪೆಷಲ್ ಎಫೆಕ್ಟ್ಸ್, ಕಿರು ವೀಡಿಯೊಗಳು, ಸ್ಟಿಕ್ಕರ್‌ಗಳನ್ನು ಒಳಗೊಂಡಿದೆ ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಬಳಕೆದಾರರು ಅಪ್ಲಿಕೇಶನ್‌ನಿಂದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಇದು ದೇಶದ ಒಟ್ಟು 15 ಭಾಷೆಗಳನ್ನು ಬೆಂಬಲಿಸಲಿದೆ.


COMMERCIAL BREAK
SCROLL TO CONTINUE READING

59 ಚೈನೀಸ್ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಕೂಡಲೇ ಶೇರ್‌ಚಾಟ್ ಈ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಇದುವರೆಗೆ ಸುಮಾರು 50 ಸಾವಿರ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ ಮತ್ತು ಇದು ಒಟ್ಟು 4.3 ರೇಟಿಂಗ್ ಪಡೆದಿದೆ.


ಇಲ್ಲಿವೆ ಆಪ್ ವೈಶಿಷ್ಟ್ಯಗಳು
ಮೊಜ್ ಅಪ್ಲಿಕೇಶನ್ ಮೂಲಕ, ಬಳಕೆದಾರರು 15 ಸೆಕೆಂಡುಗಳವರೆಗೆ ವೀಡಿಯೊಗಳನ್ನು ತಯಾರಿಸಿ ಅಪ್‌ಲೋಡ್ ಮಾಡಬಹುದು. ಇದರಲ್ಲಿ, ವೀಡಿಯೊ ಗುಣಮಟ್ಟವನ್ನು ಹೆಚ್ಚಿಸಲು ಹಲವು ಫಿಲ್ಟರ್‌ಗಳು ಮತ್ತು ಎಮೋಟಿಕಾನ್‌ಗಳನ್ನು ನೀಡಲಾಗಿದೆ. ಈ ಅಪ್ಲಿಕೇಶನ್ ಬಳಕೆದಾರರಿಗೆ ಲಿಪ್-ಸಿಂಕ್ ಸೌಲಭ್ಯ ಒದಗಿಸುತ್ತದೆ. ಅಪ್ಲಿಕೇಶನ್‌ನ ಇಂಟರ್ಫೇಸ್ ಬಳಕೆದಾರರಿಗೆ ಸುಲಭವಾಗಿದೆ. ಆದರೆ, ಶೇರ್‌ಚಾಟ್‌ನಂತೆ, ಅಪ್ಲಿಕೇಶನ್ ಇಂಗ್ಲಿಷ್ ಭಾಷೆಯನ್ನು ಬೆಂಬಲಿಸುವುದಿಲ್ಲ.


ಟಿಕ್ ಟಾಕ್ ನಂತೆಯೇ ಇರುವ ಇತರ ಭಾರತೀಯ ಆಪ್ ಗಳು
ಶೇರ್ ಚಾಟ್ ಅನ್ನು ಮೊಹಲ್ಲಾ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ 2015ರಲ್ಲಿ ಅಭಿವೃದ್ಧಿಗೊಳಿಸಿತ್ತು. ಟಿಕ್ ಟಾಕ್ ನಂತೆಯೇ ಶಾರ್ಟ್ ವಿಡಿಯೋ ತಯಾರಿಸಿ, ಅಪ್ಲೋಡ್ ಮಾಡಲು ಹಲವು ಆಪ್ ಗಳು ಬಿಡುಗಡೆಗೊಂಡಿವೆ. ಇವುಗಳಲ್ಲಿ ಚಿಂಗಾರಿ, ಮಿತ್ರೋನ್ ಹಾಗೂ ರೋಪೋಸೋಗಳು ಶಾಮೀಲಾಗಿವೆ. ಇತ್ತೀಚಿಗೆ ಈ ಆಪ್ ಗಳಿಗೆ ಭಾರಿ ರೆಸ್ಪಾನ್ಸ್ ಸಿಗಲು ಆರಂಭಗೊಂಡಿದೆ. ರೋಪೋಸೋ ಆಪ್ ಅನ್ನು 2014ರಲ್ಲಿ ಬಿಡುಗಡೆ ಮಾಡಲಾಗಿತ್ತು.  ಇದುವರೆಗೆ 5 ಕೋಟಿ ಬಾರಿಗೆ ಈ ಆಪ್ ಡೌನ್ ಲೋಡ್ ಗೆ ಒಳಗಾಗಿದೆ. 2018 ರಲ್ಲಿ ಬಂದ ಚಿಂಗಾರಿ ಆಪ್ ಇದುವರೆಗೆ ಸುಮಾರು 50 ಲಕ್ಷ ಡೌನ್ಲೋಡ್ ಸೆಳೆಯಲು ಯಶಸ್ವಿಯಾಗಿದೆ. ಏಪ್ರಿಲ್ 2020 ರಲ್ಲಿ ಬಿಡುಗಡೆಗೊಂಡ ಮಿತ್ರೋನ್ ಆಪ್ ಇದುವರೆಗೆ 1 ಕೋಟಿ ಗೂ ಅಧಿಕ ಬಳಕೆದಾರರನ್ನು ಸೆಳೆಯಲು ಯಶಸ್ವಿಯಾಗಿದೆ.


ಇದಲ್ಲದೆ essel ಗ್ರೂಪ್ ನ OTT ಪ್ಲಾಟ್ಫಾರ್ಮ್ ಆಗಿರುವ Zee5 ಕೂಡ ಶೀಘ್ರದಲ್ಲಿಯೇ ತನ್ನದೇ ಆದ ಶಾರ್ಟ್ ವಿಡಿಯೋ ಪ್ಲಾಟ್ಫಾರ್ಮ್ HiPi ಬಿಡುಗಡೆಗೆ ಯೋಜನೆ ರೂಪಿಸಿದೆ. ಭಾರತೀಯ ಬಳಕೆದಾರರು ಲಾಕ್ ಡೌನ್ ಅವಧಿಯ ನಡುವೆ ಟಿಕ್ ಟಾಕ್ ನಂತಹ ಶಾರ್ಟ್ ವಿಡಿಯೋ ತಯಾರಿಕಾ ಪ್ಲಾಟ್ಫಾರ್ಮ್ ಗಳನ್ನು ಹೆಚ್ಚಾಗಿ ಬಳಸಲು ಆರಂಭಿಸಿದ್ದರು. ಆದರೆ, ಕಳೆದ ಕೆಲ ವಾರಗಳಿಂದ ಬಳಕೆದಾರರು ಈ ಆಪ್ ನ ಭಾರತೀಯ ಆಯ್ಕೆಯ ಹುಡುಕಾಟದಲ್ಲಿದ್ದರು.