ನವದೆಹಲಿ: ಈಗ ಶಶಿ ತರೂರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ,ಅಷ್ಟಕ್ಕೂ ಅವರು ಸುದ್ದಿಯಲ್ಲಿರುವುದು ಈಗ ರಾಜಕೀಯ ಹೇಳಿಕೆಗಳಿಗಾಗಿ ಅಥವಾ ಯಾವುದೇ ವಿವಾದದ ಕಾರಣಕ್ಕಾಗಿ ಅಲ್ಲ ಬದಲಾಗಿ ಈಗ ಅವರು ಸುದ್ದಿಯಾಗಿರುವುದು ಅವರು ಕಂಡು ಹಿಡಿದ ಹೊಸ ಇಂಗ್ಲಿಷ್ ಪದಕ್ಕಾಗಿ!



COMMERCIAL BREAK
SCROLL TO CONTINUE READING

ಹೌದು, ತರೂರ್ ರಾಜಕಾರಣಿಯಲ್ಲದೆ ಅದರ ಜೊತೆಗೆ ಇಂಗ್ಲಿಷ್ ಮೇಲೆ ಸಂಪೂರ್ಣವಾಗಿ ಹಿಡಿತ ಹೊಂದಿರುವ ವ್ಯಕ್ತಿ. ಈಗ ಅವರು ಬಳಸುವ ಇಂಗ್ಲಿಷ್ ಪದ ಅರ್ಥ ನಿಮಗೆ ಗೂಗಲ್  ಅಥವಾ ಡಿಕ್ಷನರಿ ಹುಡುಕಿದರೆ ಮಾತ್ರ ಸಿಗಬಹುದು, ಆ ರೀತಿಯ ಪದವನ್ನು ಅವರು ಬಳಸುತ್ತಾರೆ. ಪ್ರಧಾನಿ ಮೋದಿ ಕುರಿತಾಗಿ ಬರೆದಿರುವ ಹೊಸ ಪುಸ್ತಕ " The Paradoxical Prime Minister - Narendra Modi and his India ಪುಸ್ತಕದ ಕುರಿತ ಅವರು ಈ 400 ಪುಟಗಳ ಪುಸ್ತಕ ಫ್ಲೋಸಿನಿನೂನಿಹಿಲಿಫಿಲಿಫಿಕೇಷನ್ (floccinaucinihilipilification) ಅಭ್ಯಾಸದಂತೆ ಎಂದು ಹೇಳಿದ್ದಾರೆ.


ಈ ಪದ ಪ್ರಮುಖವಾಗಿ 18 ನೆ ಶತಮಾನದ ಲ್ಯಾಟಿನ್ ಪದವಾಗಿದ್ದು ಇದರ ಅರ್ಥ  "ಇದು ಉಪಯೋಗವಿಲ್ಲದ ಕ್ರಿಯೆ ಮತ್ತು ಹವ್ಯಾಸ ಎನ್ನುವ ಅರ್ಥವನ್ನು ಕೊಡುತ್ತದೆ.ಇದಕ್ಕೆ ಈಗ ಟ್ವಿಟ್ಟರ್ ನಲ್ಲಿ  ಪ್ರತಿಕ್ರಿಯಿಸಿರುವ ಟ್ವಿಟ್ಟಿಗರು ಈ ಪುಸ್ತಕದ ಜೊತೆ ಡಿಕ್ಷನರಿಯನ್ನು ಕೂಡ ಮಾರಾಟ ಮಾಡಿ ಎಂದು ಪ್ರತಿಕ್ರಿಯಿಸಿದ್ದಾರೆ.