ನವದೆಹಲಿ: ಸಾಮಾನ್ಯವಾಗಿ ಪ್ರತಿಪಕ್ಷದ ನಾಯಕರು ಆಡಳಿತ ಪಕ್ಷದ ನಾಯಕರನ್ನು ತೆಗಳುವುದನ್ನು ನೋಡಿರುತ್ತೇವೆ, ಆದರೆ ಈಗ ಅಪರೂಪ ಎನ್ನುವಂತೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಬಿಲ್ಕಿನ್ ಬಾನೋ ಪ್ರಕರಣದ ವಿಚಾರವಾಗಿ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಮಾಡಿದ ಟ್ವೀಟ್‌ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿರುವ ಎಲ್ಲಾ ಹನ್ನೊಂದು ಅಪರಾಧಿಗಳನ್ನು ಗುಜರಾತ್ ಸರ್ಕಾರವು ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು ಇಂತಹ ಘಟನೆಗಳು ಮನುಕುಲ ಮತ್ತು ಮಹಿಳೆಗೆ ಅವಮಾನ ಎಂದು ಹೇಳಿದರು.


ಇದನ್ನೂ ಓದಿ: ಸಿದ್ದರಾಮೋತ್ಸವ ನಡೆಸಿದರೂ ರಾಜಕೀಯ ಅಲೆಮಾರಿಯಾಗಿರುವ ಸಿದ್ದರಾಮಯ್ಯ: ಸಂಸದ ಪ್ರಸಾದ್ ವ್ಯಂಗ್ಯ


ಈ ವಿಚಾರವಾಗಿ ಶಶಿತರೂರ್ ಖುಷ್ಬೂ ಸುಂದರ್ ಅವರನ್ನು ಶ್ಲಾಘಿಸುತ್ತಾ ಬಲಪಂಥೀಯತೆಗಿಂತಲೂ ಹೆಚ್ಚಾಗಿ ವಿಷಯದ ಪರ ನಿಂತಿರುವುದಕ್ಕೆ ಹೆಮ್ಮೆಯಾಗುತ್ತದೆ. 'ಬಲಪಂಥಕ್ಕಿಂತ ಸರಿಯಾದ ವಿಷಯಕ್ಕಾಗಿ ನಿಲ್ಲುವುದನ್ನು ನೋಡಲು ನನಗೆ ಹೆಮ್ಮೆಯಾಗುತ್ತದೆ' ಎಂದು ಹೇಳಿದರು.


ಇದನ್ನೂ ಓದಿ: DK Shivakumar : 'ಸೆ.1 ರಂದು ರಾಜ್ಯಕ್ಕೆ ಬರಲಿದೆ ದೆಹಲಿಯಿಂದ ಕಾಂಗ್ರೆಸ್ ಸ್ಪೆಷಲ್ ಟೀಂ' 


"ಅತ್ಯಾಚಾರ, ಹಲ್ಲೆ, ಕ್ರೌರ್ಯಕ್ಕೆ ಒಳಗಾದ ಮತ್ತು ಆಕೆಯ ಆತ್ಮಕ್ಕೆ ಜೀವ ಹಾನಿಗೊಳಗಾದ ಮಹಿಳೆಗೆ ನ್ಯಾಯ ಸಿಗಬೇಕು. ಇದರಲ್ಲಿ ಭಾಗಿಯಾಗಿರುವ ಯಾವುದೇ ಪುರುಷನನ್ನು ಬಿಡಬಾರದು, ಹಾಗೆ ಮಾಡಿದರೆ ಅದು ಮಾನವಕುಲ ಮತ್ತು ಹೆಣ್ತನಕ್ಕೆ ಮಾಡಿದ ಅವಮಾನ" ಎಂದು ಖುಷ್ಬೂ ಸುಂದರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.