ನವದೆಹಲಿ: ನರೇಂದ್ರ ದಾಮೋದರ ದಾಸ್ ಮೋದಿಯೆಂಬ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲು ಈಗ ಪ್ರತಿಪಕ್ಷಗಳು ಒಂದು ದೊಡ್ಡ ಧಾಳವನ್ನು ಉರುಳಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಆ ಧಾಳ ಹೇಗಿದೆ ಎಂದರೆ ಬಿಜೆಪಿಯಲ್ಲಿ ಇದ್ದು ಮೋದಿ ಸರ್ಕಾರಕ್ಕೆ ಸವಾಲಿನ ಮೇಲೆ ಸವಾಲು ಹಾಕುತ್ತಿದ್ದ ಶತ್ರುಘ್ನ ಸಿನ್ಹಾ ಈಗ ಪ್ರತಿಪಕ್ಷಗಳ ನೆಚ್ಚಿನ ಬಿಜೆಪಿ ವ್ಯಕ್ತಿ! 


COMMERCIAL BREAK
SCROLL TO CONTINUE READING

ಆದರೆ ಈಗ ಕಾಲ ಬದಲಾಗಿದೆ, ಬಿಜೆಪಿ ಈಗಾಗಲೇ ಶತ್ರುಘ್ನ ಸಿನ್ಹಾ ಅವರ ಬಹಿರಂಗ ಟೀಕೆಗಳನ್ನು ಎದುರಿಸಿ ಇರುಸುಮುರುಸು ಎದುರಿಸಿದೆ.ಆದ್ದರಿಂದ ಈಗ ಅದು ಸಿನ್ಹಾ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದೆ ಇರುವ ತಿರ್ಮಾನವನ್ನು ತಗೆದುಕೊಂಡಿದೆ ಎನ್ನಲಾಗುತ್ತಿದೆ. 


ಆದರೆ ಈಗ ಸಿನ್ಹಾ ಮಾತ್ರ ನೆಮ್ಮದಿಯಿಂದ ಇದ್ದಾರೆ ಎನ್ನುತ್ತಿವೆ ಮೂಲಗಳು.ಕಾರಣ ಇತ್ತೀಚಿಗೆ ಜಯಪ್ರಕಾಶ ನಾರಾಯಣ ಅವರ ಜನ್ಮದಿನಾಚರಣೆ ಸಂರ್ದರ್ಭದಲ್ಲಿ ಅಖಿಲೇಶ್ ಯಾದವ್ ಅವರು ವಾರಣಾಸಿಯಿಂದ  ಅವರನ್ನು ಎಸ್ಪಿಯಿಂದ ಕಣಕ್ಕಿಳಿಸಿ ಪ್ರಧಾನಿ ಮೋದಿಯವರಿಗೆ ಕಡಿವಾಣ ಹಾಕಲು ಗೇಮ್ ಪ್ಲಾನ್ ಸಿದ್ದಗೊಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.