ನವದೆಹಲಿ: ನಟ ಶತ್ರುಘ್ನ ಸಿನ್ಹಾ ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬೆನ್ನಲ್ಲೇ ಈಗ ಅವರ ಪತ್ನಿ ಪೂನಂ ಸಿನ್ಹಾ ಮಂಗಳವಾರದಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 



COMMERCIAL BREAK
SCROLL TO CONTINUE READING

ಮಂಗಳವಾರದಂದು ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರನ್ನು ಲಕ್ನೋದಲ್ಲಿರುವ ನಿವಾಸದಲ್ಲಿ ಪೂನಂ ಸಿನ್ಹಾ ಭೇಟಿ ಮಾಡಿ ಎಸ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಲೋಕಸಭಾ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸುವ ಹಿನ್ನಲೆಯಲ್ಲಿ ಈಗ ಅವರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ. ಆದರೆ ಇದುವರೆಗೆ ಈ ವಿಚಾರವಾಗಿ ಅಧಿಕೃತ ಘೋಷಣೆಯಾಗಿಲ್ಲ ಎನ್ನಲಾಗಿದೆ.


ಲಕ್ನೋ ಕ್ಷೇತ್ರದಿಂದ ಬಿಜೆಪಿಯಿಂದ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸ್ಪರ್ಧಿಸುತ್ತಿದ್ದಾರೆ.ಈ  ಹಿನ್ನಲೆಯಲ್ಲಿ ಅವರ ವಿರುದ್ದ ಪೂನಂ ಅವರನ್ನು ಎಸ್ಪಿ ಕಣಕ್ಕೆ ಇಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಪೂನಂ ಸಿನ್ಹಾ ಇಲ್ಲಿ ಸ್ಪರ್ಧಿಸಿದ್ದೆ ಆದಲ್ಲಿ ಕಾಂಗ್ರೆಸ್ ಪಕ್ಷವೂ ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.