Maharashtra Politics : ಸರ್ಕಾರ ರಚಿಸಲು ಭರ್ಜರಿ ತಯಾರಿಯಲ್ಲಿ ಶಿಂಧೆ ಬಣ, ಶಿವಸೇನೆಗೆ ಭಾರಿ ಹಿನ್ನಡೆ!
ಈ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ಸದ್ಯದಲ್ಲೇ ಭಾರಿ ಬದಲಾವಣೆ ಆಗಲಿದೆ ಎನ್ನಲಾಗುತ್ತಿದೆ. ಈ ರಾಜಕೀಯ ಹಗ್ಗ ಜಗ್ಗಾಟದ ನಡುವೆಯೇ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ದೆಹಲಿಗೆ ತೆರಳಿದ್ದಾರೆ.
Eknath Shinde going to make govt : ಅಸ್ಸಾಂನ ಗುವಾಹಟಿಯಲ್ಲಿ ತಂಗಿರುವ ಮಹಾರಾಷ್ಟ್ರದ ಬಂಡಾಯ ಶಾಸಕರ ಗುಂಪು ಈಗ ಸರ್ಕಾರ ರಚನೆಯತ್ತ ಸಾಗುತ್ತಿದೆ. ಏಕನಾಥ್ ಶಿಂಧೆ ಪರವಾಗಿ ವಿಧಾನಸಭೆ ಉಪಸಭಾಪತಿಗೆ ಪತ್ರ ಬರೆಯಲಾಗಿದೆ. ಇದೀಗ ಶಿಂಧೆ ಬಣ ವಿಭಿನ್ನ ತಯಾರಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ಸದ್ಯದಲ್ಲೇ ಭಾರಿ ಬದಲಾವಣೆ ಆಗಲಿದೆ ಎನ್ನಲಾಗುತ್ತಿದೆ. ಈ ರಾಜಕೀಯ ಹಗ್ಗ ಜಗ್ಗಾಟದ ನಡುವೆಯೇ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ದೆಹಲಿಗೆ ತೆರಳಿದ್ದಾರೆ.
ಸರ್ಕಾರ ರಚನೆಯಲ್ಲಿ ಯಶಸ್ವಿಯಾಗ್ತಾರಾ?
ಮೂಲಗಳಿಂದ ಬಂದ ಮಾಹಿತಿ ಪ್ರಕಾರ, ಶಿಂಧೆ ಬಣ ಉಪಸಭಾಪತಿಗೆ ಪತ್ರ ಬರೆದಿದ್ದು. ಪತ್ರದಲ್ಲಿ ಎಲ್ಲಾ ಶಾಸಕರ ಸಹಿ ಮತ್ತು ಸರ್ಕಾರ ರಚನೆಗೆ ಹಕ್ಕುಪತ್ರವಿದೆ. ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಾರೆ ಎಂದು ತಿಳಿಸಲಾಗಿದೆ. ಹೀಗಿರುವಾಗ ಶಿಂಧೆ ಬಣ ಯಾರ ಬೆಂಬಲದೊಂದಿಗೆ ಈ ಪತ್ರ ಬರೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಅವರಿಗೆ ಬಿಜೆಪಿಯಿಂದ ಬೆಂಬಲ ಬೇಕಾಗುತ್ತದೆ ಅಥವಾ ಸರ್ಕಾರ ರಚಿಸಲು ಹಳೆಯ ಮೈತ್ರಿಕೂಟವನ್ನು ಸೇರಬೇಕಾಗುತ್ತದೆ ಎಂದು ಹೇಳಬಹುದು.
ಇದನ್ನೂ ಓದಿ : Maharashtra Political Crisis : ನಂಬರ್ ಗೇಮ್ ಬಗ್ಗೆ 42 ಶಾಸಕರೊಂದಿಗೆ ಶಕ್ತಿ ಪ್ರದರ್ಶಿಸಿದ ಶಿಂಧೆ!
ಸಂಕಷ್ಟ ಸಿಲುಕಿದ ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆಗೆ ಪ್ರಸ್ತುತ ಮತ್ತೊಂದು ಭಾರಿ ಹಿನ್ನಡೆಯಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಶಿವಸೇನೆಯ ಮತ್ತಿಬ್ಬರು ಶಾಸಕರು ಠಾಕ್ರೆಗೆ ಕೈ ಕೊಟ್ಟಿದ್ದಾರೆ. ಉದ್ಧವ್ ಠಾಕ್ರೆ ಸಂದೇಶದೊಂದಿಗೆ ಸೂರತ್‌ಗೆ ತೆರಳಿದ್ದ ಶಾಸಕ ರವಿ ಫಾಟಕ್ ಮತ್ತೊಬ್ಬ ಶಾಸಕರೊಂದಿಗೆ ಗುವಾಹಟಿ ತಲುಪಿದ್ದಾರೆ ಎಂದು ಹೇಳಲಾಗುತ್ತಿದೆ. ಅವರೂ ಶಿಂಧೆ ಬಣ ಸೇರಬಹುದು ಎಂದು ಹೇಳಲಾಗುತ್ತಿದೆ.
ಶಿಂಧೆಯ ಅಂಗಳದಲ್ಲಿದೆ ಚೆಂಡು !
ಸದ್ಯ ಚೆಂಡು ಸಂಪೂರ್ಣವಾಗಿ ಶಿಂಧೆ ತಂಡದ ಅಂಗಳದಲ್ಲಿದೆ. ಅವರಿಗೆ ಬಿಜೆಪಿ ಮತ್ತು ಶಿವಸೇನೆಯಿಂದ ಉತ್ತಮ ಆಫರ್‌ಗಳು ಬರುತ್ತಿವೆ. ಎಲ್ಲಾ ಶಾಸಕರು ಬಯಸಿದರೆ, ಅವರು ಮಹಾ ವಿಕಾಸ್ ಅಘಾಡಿ (ಎಂವಿಎ) ಯಿಂದ ಹೊರಬರುವುದನ್ನು ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ. ಇದಲ್ಲದೇ ಅವರಿಗೆ ಸರ್ಕಾರ ರಚಿಸಲು ಬಿಜೆಪಿಯಿಂದಲೂ ಬೆಂಬಲ ನೀಡಲಾಗುತ್ತಿದೆ.
ಚೆಂಡು ಶಿಂಧೆಯ ಅಂಗಳದಲ್ಲಿದೆ!
ಶಿಂಧೆ ಎನ್‌ಡಿಎಗೆ ಸೇರಿದ್ರೆ ಅವರಿಗೆ 13 ಸಚಿವ ಸ್ಥಾನಗಳ ಜೊತೆಗೆ ಕೇಂದ್ರ ಸಚಿವ ಸ್ಥಾನವನ್ನೂ ನೀಡಲಾಗುವುದು ಎಂದು ಬಿಜೆಪಿ ಆಫರ್ ನೀಡಿದೆ.
ಇದನ್ನೂ ಓದಿ : Maharashtra Political Crisis : ಉದ್ಧವ್ ಠಾಕ್ರೆಗೆ ಓಪನ್ ಚಾಲೆಂಜ್ ಹಾಕಿದ ಏಕನಾಥ್ ಶಿಂಧೆ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.