ಮುಂಬೈ : ರಫೇಲ್ ಒಪ್ಪಂದದ ವಿಚಾರವಾಗಿ ಈಗ ಬಿಜೆಪಿ ಮೈತ್ರಿ ಪಕ್ಷ ಶಿವಸೇನಾ ಕಡಿಮೆ ಮಾತಾಡಲು ಸಲಹೆ ನೀಡಿದೆ ಇಲ್ಲದೆ ಹೋದಲ್ಲಿ ನಾಯಕರುಗಳು ನೀಡುವ ಹೇಳಿಕೆಗಳಿಂದ ಪಕ್ಷಕ್ಕೆ ತೊಂದರೆಯಾಗಲಿದೆ ಎಂದು ಅದು ಎಚ್ಚರಿಸಿದೆ.


COMMERCIAL BREAK
SCROLL TO CONTINUE READING

ರಫೇಲ್ ಒಪ್ಪಂದದ ಬಗ್ಗೆ   ರಕ್ಷಣಾ ಸಚಿವರಿಂದ ಹಿಡಿದು ಇತರ ನಾಯಕರವರೆಗೆ ಎಲ್ಲರು ತಾಳ್ಮೆಯಿಂದ ಮಾತನಾಡಬೇಕಾಗಿದೆ.ಬಿಜೆಪಿಯಲ್ಲಿರುವ ನಾಯಕರು ತಮಗಿಷ್ಟ ಬಂದಂತೆ ಮಾತನಾಡಿದ್ದಲ್ಲಿ ಅದು ಪಕ್ಷಕ್ಕೆ ಹಾನಿಯಾಗಲಿದೆ. ಆದ್ದರಿಂದ ಕಡಿಮೆ ಮಾತನಾಡಿದಷ್ಟು ಒಳ್ಳೆಯದು ಎಂದು ಹೇಳಿದೆ.ಇನ್ನೊಂದೆಡೆಗೆ ನಮೋ ಟಿವಿಯನ್ನು ಬದಿಗಿರಿಸುವುದು ಒಳ್ಳೆಯದು.ಏಕೆಂದರೆ ಈಗಾಗಲೇ ಪಕ್ಷವು ನರೇಂದ್ರ ಮೋದಿಯವರ  ರ್ಯಾಲಿ ಬಗ್ಗೆ ಕವರೇಜ್ ಗಳನ್ನು  ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ನೀಡಲಾಗುತ್ತಿದೆ ಎಂದು ಶಿವಸೇನಾ ಅಭಿಪ್ರಾಯಪಟ್ಟಿದೆ.


ಇನ್ನೊಂದೆಡೆಗೆ ಪ್ರಧಾನಿ ಮೋದಿ ಕುರಿತ ಚಲನಚಿತ್ರ ಬಿಡುಗಡೆ ಮಾಡಲು ಈಗಾಗಲೇ ಚುನಾವಣಾ ಆಯೋಗ ನಿಷೇಧ ಹೇರಿರುವುದರಿಂದ ತಮ್ಮ ಪಕ್ಷವು ಕೂಡ ಆಯೋಗದ ನಿರ್ಧಾರಕ್ಕೆ ಬದ್ದವಾಗಿದೆ ಎಂದು ಶಿವಸೇನಾ ಹೇಳಿದೆ.ಈಗಾಗಲೇ ಒಂದೋ ಎರಡು ಚಾನಲ್ ಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಚಾನೆಲ್ ಗಳು ನಮೋ ಚಾನಲ್ ಗಳಾಗಿವೆ.ಬಿಜೆಪಿ ಎಲೆಕ್ಟ್ರಾನಿಕ್ ಚಾನೆಲ್ ಗಳ ಹೆಚ್ಚಿನ ಪ್ರಭಾವವನ್ನು ಹೊಂದಿದೆ ಆದ್ದರಿಂದ ಅದರ ಲಾಭ ಪಕ್ಷಕ್ಕೆ ದೊರೆಯುತ್ತಿದೆ ಎಂದು ಹೇಳಿದರು.