ಮುಂಬೈ: ಈಸ್ಟರ್ ಭಯೋತ್ಪಾದಕ ದಾಳಿಯಿಂದಾಗಿ 250 ಕ್ಕೂ ಹೆಚ್ಚು ಮಂದಿ ಸಜೀವ ದಹನವಾದ ಬೆನ್ನಲ್ಲೇ ಮುನ್ನೆಚಾರಿಕಾ ಕ್ರಮವಾಗಿ ಶ್ರೀಲಂಕಾ ಸರ್ಕಾರ ಬುರ್ಕಾ ನಿಷೇಧಿಸಿರುವಂತೆ ಭಾರತದಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ನಿಷೇಧಿಸುವಂತೆ ಶಿವಸೇನೆ ಆಗ್ರಹಿಸಿದೆ. 


COMMERCIAL BREAK
SCROLL TO CONTINUE READING

"ಈ ಹಿಂದೆಯೇ ಶಿವಸೇನೆ ಪಕ್ಷವು ಬುರ್ಕಾ ನಿಷೇಧವನ್ನು ಪ್ರಸ್ತಾಪಿಸಿತ್ತು. ಈ ಕ್ರಮ ರಾವಣನ (ಶ್ರೀಲಂಕಾ) ಲಂಕಾದಲ್ಲಿ ಈಗಾಗಲೇ ಜಾರಿಯಾಗಿದೆ. ಆದರೆ ರಾಮನ ಅಯೋಧ್ಯೆಯಲ್ಲಿ ಯಾವಾಗ ಜಾರಿಯಾಗಲಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮ ಪ್ರಶ್ನೆ" ಎಂದು ಶಿವಸೇನಾ ಹೇಳಿದೆ.


"ಭದ್ರತಾ ಪಡೆಗಳು ಯಾರನ್ನಾದರೂ ಗುರುತಿಸುವಲ್ಲಿ ಯಾವುದೇ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಈ ನಿಷೇಧವನ್ನು ಶಿಫಾರಸು ಮಾಡಲಾಗಿದೆ. ಜನರು ಬುರ್ಕಾ ಅಥವಾ ಇತರ ಯಾವುದೇ ಮುಖ ಮುಚ್ಚುವ ಉಡುಪನ್ನು ಧರಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗುವ ಸಾಧ್ಯತೆಯಿದೆ" ಎಂದು ಶಿವಸೇನೆಯ 'ಸಾಮನಾ' ಮತ್ತು 'ದೋಪಹರ್ ಕಾ ಸಾಮನಾ' ದ ಸಂಪಾದಕೀಯದಲ್ಲಿ ಹೇಳಲಾಗಿದೆ.