ನವದೆಹಲಿ: ದೇಶದ ಆರ್ಥಿಕ ಕುಸಿತದ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಶಿವಸೇನಾ ತರಾಟೆಗೆ ತೆಗೆದುಕೊಂಡಿದೆ. ಜಿಎಸ್ಟಿ ಹಾಗೂ ನೋಟು ನಿಷೇಧದಂತಹ ಕ್ರಮಗಳಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ ಎಂದು ಶಿವಸೇನಾ ಹೇಳಿದೆ.


COMMERCIAL BREAK
SCROLL TO CONTINUE READING

ಶಿವಸೇನಾದ ಮುಖವಾಣಿಯಾಗಿರುವ ಸಾಮ್ನಾದ ಸಂಪಾದಕೀಯದಲ್ಲಿ 'ಇಂದು ದೇಶದಲ್ಲಿ ಆರ್ಥಿಕ ಕುಸಿತವಿದೆ. ದೀಪಾವಳಿ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಕೇಳಿ ಬರುತ್ತಿದ್ದ ಪಟಾಕಿ ಭರಾಟೆ ಸದ್ದು ಕಾಣೆಯಾಗಿದೆ ಎಂದು ಹೇಳಿದೆ. ಧಂತೇರಸ್ ಮತ್ತು ಲಕ್ಷ್ಮಿ ಪೂಜಾ ಈಗಾಗಲೇ ಹೋಗಿದೆ ಎಂದು ನೆನಪಿಸುತ್ತಾ, ನವ ವರ್ಷ ಮತ್ತು ಭೈಯಾ ದುಜ್ ಗೆ ಎರಡು ದಿನಗಳು ಬಾಕಿ ಉಳಿದಿವೆ. ಆದಾಗ್ಯೂ, ನಿಧಾನಗತಿ ಆರ್ಥಿಕತೆಯಿಂದಾಗಿ ಮಾರುಕಟ್ಟೆಗಳಲ್ಲಿ ಶೇ 30-40 ರಷ್ಟು ಖರೀದಿ ಕಡಿಮೆಯಾಗಿದೆ. ಜಿಎಸ್ಟಿ ಮತ್ತು ನೋಟು ನಿಷೇಧದ ಕಾರಣದಿಂದಾಗಿ, ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬದಲು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ' ಎಂದು ಸಂಪಾದಕೀಯ ಕಿಡಿ ಕಾರಿದೆ.


ಇನ್ನು ಬ್ಯಾಂಕಿಂಗ್ ಬಿಕ್ಕಟ್ಟಿನ ಬಗ್ಗೆ ಉಲ್ಲೇಖಿಸಿ, ದೀಪಾವಳಿಗೆ ಸ್ವಲ್ಪ ಮೊದಲು ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಲ್ಲಿಯೂ ಕೂಡ ಉತ್ಸಾಹಕ್ಕಿಂತ ಹೆಚ್ಚು ಮೌನವಾಗಿತ್ತು. ದೇಶದ ಮತ್ತು ಮಹಾರಾಷ್ಟ್ರದ ಉತ್ತಮ ಭವಿಷ್ಯಕ್ಕಾಗಿ, ಪ್ರತಿ ಮೌನವನ್ನು ನೋಡಬೇಕಾಗಿದೆ. ಇದರಿಂದಾಗಿ ಇಷ್ಟು ಮೌನವೇಕೆ ಎನ್ನುವ ಪ್ರಶ್ನೆ ಎದುರಾಗಿದೆ ಎಂದು ಸಂಪಾದಕೀಯ ಪ್ರಶ್ನಿಸಿದೆ. 


ಮಹಾರಾಷ್ಟ್ರ ವಿಧಾನಸಭೆ ಫಲಿತಾಂಶ ಪ್ರಕಟವಾದ ನಂತರ ರಾಜ್ಯದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಶಿವಸೇನೆ ನಡುವೆ ಬಿರುಕು ಕಾಣಿಸಿಕೊಂಡಿದೆ. ಫಲಿತಾಂಶ ಪ್ರಕಟವಾದ ನಂತರ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಲೋಕಸಭಾ ಚುನಾವಣೆಗೆ ಮುನ್ನ ಉಭಯ ಪಕ್ಷಗಳ ನಡುವೆ ಒಪ್ಪಿದ 50:50 ಸೂತ್ರದ ಬಗ್ಗೆ ಬಿಜೆಪಿಗೆ ನೆನಪಿಸಿದರು. 50-50 ಹಂಚಿಕೆ ಸೂತ್ರದ ಪ್ರಕಾರ, ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು 2.5 ವರ್ಷಗಳ ಕಾಲ ಶಿವಸೇನಾಕ್ಕೆ ನೀಡಬೇಕೆಂದು ಶಿವಸೇನಾ ಬಯಸಿದೆ.