ಅಲಿಗಢ: ಉತ್ತರ ಪ್ರದೇಶದ ಅಲಿಗಢದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. 11 ತಿಂಗಳ ಪುಟ್ಟ ಕಂದಮ್ಮನ ಮೇಲೆ 12 ವರ್ಷದ ಬಾಲಕ ಅತ್ಯಾಚಾರ ಎಸಗಿದ್ದಾನೆಂಬ ಆರೋಪ ಕೇಳಿ ಬಂದಿದೆ. ಮಗುವನ್ನು ರಕ್ತಸಿಕ್ತ ಸ್ಥಿತಿಯಲ್ಲಿ ಬಿಟ್ಟು ಅಪ್ರಾಪ್ತ ವಯಸ್ಸಿನ ಆರೋಪಿ ಬಾಲಕ ಮನೆಯಿಂದ ಪರಾರಿಯಾಗಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿ ಆಗ್ರಾದ ಬಾಲಾಪರಾಧಿಗೃಹಕ್ಕೆ ಕಳುಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಅತ್ಯಾಚಾರದ ಆರೋಪದಡಿ ಅಪ್ರಾಪ್ತ ಆರೋಪಿಯನ್ನು ಗುರುವಾರ ಬೆಳಗ್ಗೆ ಬಂಧಿಸಲಾಯಿತು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯೂ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಏರಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ತಿಳಿಸಿದ್ದಾರೆ.


ಇದನ್ನೂ ಓದಿ: Viral Video: ಕಲ್ಲಂಗಡಿ ಮೇಲೆ ಮೂಡಿದ ಆಂಜನೇಯ.. ಬಾಣಸಿಗನ ಕೈಚಳಕಕ್ಕೆ ನೆಟ್ಟಿಗರು ಫಿದಾ!


ಇನ್ನೂ ಜಗತ್ತನ್ನೇ ಅರಿಯದ ಪುಟ್ಟ ಮಗುವಿನ ಮೇಲೆ ಹೀನಾಯ ಕೃತ್ಯ ಎಸಗಿರುವ ಸುದ್ದಿ ಅನೇಕರಿಗೆ ಆಘಾತವನ್ನುಂಟು ಮಾಡಿದೆ. ಈ ಬಗ್ಗೆ ಮಗುವಿನ ಪೋಷಕರು ತಮ್ಮ ಪಕ್ಕದ ಮನೆಯಲ್ಲೇ ವಾಸವಿದ್ದ ಆರೋಪಿ ಅಪ್ರಾಪ್ತ ಬಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಆರೋಪಿ ಬಾಲಕನ್ನು ಬಂಧಿಸಿದ್ದು, ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿ ಆಗ್ರಾದ ಮಕ್ಕಳ ಸುಧಾರಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ.


ಆರೋಪಿ ಬಾಲಕ ಆಗಾಗ ಸಂತ್ರಸ್ತ ಮಗುವಿನ ಮನೆಗೆ ಬಂದು ಹೋಗುತ್ತಿದ್ದ. ಕೃತ್ಯ ನಡೆದ ದಿನ ಮಗುವನ್ನು ಟೆರೇಸ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಮಗುವಿನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಐಪಿಸಿ ಸೆಕ್ಷನ್ 376-AB (12 ವರ್ಷದೊಳಗಿನ ಬಾಲಕಿ ಮೇಲೆ ಅತ್ಯಾಚಾರ) ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.


ಇದನ್ನೂ ಓದಿ: High-Tech Village : ಇದು ಭಾರತದ ಹೈಟೆಕ್‌ ಹಳ್ಳಿ! ವೈಫೈ, ಆಸ್ಪತ್ರೆ, ಎಸಿ ಶಾಲೆ.. ವಿದೇಶಿಗರನ್ನೂ ಆಕರ್ಷಿದ ಗ್ರಾಮ


ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ‘ಆರೋಪಿ ಬಾಲಕ ನಮ್ಮ ನೆರೆಹೊರೆಯವನಾಗಿದ್ದು, ನಮ್ಮ ಮಗಳನ್ನು ಟೆರೇಸ್‌ಗೆ ಕರೆದೊಯ್ದು ಕೃತ್ಯವೆಸಗಿದ್ದಾನೆ. ನನ್ನ ಮಗಳ ಅಳು ಕೇಳಿದ ನಂತರ ನಾವು ಸ್ಥಳಕ್ಕೆ ಬಂದು ನೋಡಿದಾಗ ಆಕೆಗೆ ರಕ್ತಸ್ರಾವವಾಗುತ್ತಿತ್ತು’ ಎಂದು ನೊಂದ ತಂದೆ-ತಾಯಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ. ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.