Shocking News: ಚಹಾ ಕುಡಿದು 18 ತಿಂಗಳ ಮಗು ಸಾವು..!
MP Tea deaths: ಚಹಾದಲ್ಲಿರುವ ಕೆಫೀನ್ ಅನ್ನು ಉತ್ತೇಜಕವೆಂದು ಕರೆಯಲಾಗುತ್ತದೆ. ಚಿಕ್ಕಮಕ್ಕಳ ದೇಹವು ಸೂಕ್ಷ್ಮವಾಗಿರುತ್ತದೆ, ಹೀಗಾಗಿ ಕೆಫೀನ್ ಸೇವಿಸುವುದರಿಂದ ಅವರ ದೇಹಕ್ಕೆ ಹಾನಿಯಾಗುತ್ತದೆ.
ನವದೆಹಲಿ: ಚಹಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ಬೆಳಗ್ಗೆ ಮತ್ತು ಸಂಜೆ ಚಯಾ ಸೇವಿಸಲು ಇಷ್ಟಪಡುತ್ತಾರೆ. ಹಿರಿಯರು ಸೇವಿಸುವ ಚಹಾ ಕಂಡು ಮಕ್ಕಳು ಕೂಡ ತಮಗೂ ಬೇಕು ಅಂತಾ ಹಠ ಮಾಡುತ್ತಾರೆ. ಹೀಗಾಗಿ ಮಕ್ಕಳಿಗೂ ಪೋಷಕರು ಚಹಾ ಕುಡಿಸುವ ರೂಢಿ ಮಾಡಿರುತ್ತಾರೆ.
ಮಧ್ಯಪ್ರದೇಶದ ದೇವಾಸ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಚಹಾ ಸೇವಿಸಿ ಒಂದೂವರೆ ವರ್ಷಷ ಬಾಲಕನೊಬ್ಬ ದಾರುಣವಾಗಿ ಸಾವ್ನಪ್ಪಿದ್ದಾನೆ. ವರದಿಗಳ ಪ್ರಕಾರ, ತಮ್ಮ 18 ತಿಂಗಳ ಪುತ್ರ ಚಹಾ ಸೇವಿಸಿದ ನಂತರ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆಂದು ಮಗುವಿನ ತಾಯಿ ತಿಳಿಸಿದ್ದಾಳೆ ಅಂತಾ ಸಿಮ್ರೋಲ್ ಪೊಲೀಸ್ ಠಾಣೆಯ ಉಸ್ತುವಾರಿ ಮನ್ಸಾರಾಮ್ ಬಘೇಲ್ ಹೇಳಿದ್ದಾರೆ.
ಇದನ್ನೂ ಓದಿ: Rain Alert: ಈ ಭಾಗಗಳಲ್ಲಿ ಮುಂದಿನ 24 ಗಂಟೆಯಲ್ಲಿ ಸಿಡಿಲು ಸಹಿತ ವರುಣಾರ್ಭಟ: ಬಿರುಗಾಳಿ ಎಚ್ಚರಿಕೆ ನೀಡಿದ IMD
ಇದೀಗ ಮಗುವ ಚಹಾ ಸೇವಿಸಿ ಹೇಗೆ ಸಾವನ್ನಪ್ಪಿತು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಂದೆ ಜೈಲುಶಿಕ್ಷೆ ಅನುಭವಿಸುತ್ತಿರುವ ಕಾರಣ ಮೃತ ಬಾಲಕನು ಸಿಮ್ರೋಲ್‍ನಲ್ಲಿರುವ ತನ್ನ ಅಜ್ಜನ ಮನೆಯಲ್ಲಿದ್ದ. ಚಹಾ ಸೇವಿಸಿದ ನಂತರ ಮಗು ಇದ್ದಕ್ಕಿದ್ದಂತೆ ಉಸಿರಾಟವನ್ನು ನಿಲ್ಲಿಸಿತು ಎಂದು ತಾಯಿ ಹೇಳಿದ್ದಾಳೆ. ಕೂಡಲೇ ಅಸ್ವಸ್ಥ ಮಗುವನ್ನು ಸುಮಾರು 22 ಕಿಮೀ ದೂರದಲ್ಲಿರುವ ಇಂದೋರ್‌ನ ಚಾಚಾ ನೆಹರು ಆಸ್ಪತ್ರೆಗೆ ಸಾಗಿಸಲಾಯಿತು.
ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮಗು ಸಾವನ್ನಪ್ಪಿತ್ತು. ವೈದ್ಯರು ಕೂಡ ಮಗುವಿನ ಉಸಿರಾಟವನ್ನು ಪರಿಶೀಲಿಸಿ ಸಾವನ್ನಪ್ಪಿದೆ ಎಂದು ಘೋಷಿಸಿದರು. 18 ತಿಂಗಳ ಮಗುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆ ಸಮಯದಲ್ಲಿ ಮಗು ಸಾವನ್ನಪ್ಪಿತ್ತು ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಪ್ರೀತಿ ಮಲ್ಪಾನಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಪೋಟ ! 7 ಮಂದಿ ಸಾವು ! ಮೂವರು ನಾಪತ್ತೆ
ಕೆಫೀನ್ ಚಿಕ್ಕಮಕ್ಕಳಿಗೆ ಮಾರಕ!
ಚಹಾದಲ್ಲಿರುವ ಕೆಫೀನ್ ಅನ್ನು ಉತ್ತೇಜಕವೆಂದು ಕರೆಯಲಾಗುತ್ತದೆ. ಚಿಕ್ಕಮಕ್ಕಳ ದೇಹವು ಸೂಕ್ಷ್ಮವಾಗಿರುತ್ತದೆ, ಹೀಗಾಗಿ ಕೆಫೀನ್ ಸೇವಿಸುವುದರಿಂದ ಅವರ ದೇಹಕ್ಕೆ ಹಾನಿಯಾಗುತ್ತದೆ. ಅನೇಕ ಕಡೆ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಚಹಾ ಅಥವಾ ಕೆಫೀನ್‍ಯುಕ್ತ ಪಾನೀಯ ಸೇವಿಸುವುದನ್ನು ನಿಷೇಧಿಸಲಾಗಿದೆ. ಚಿಕ್ಕ ಮಗುವಿನ ದೇಹಕ್ಕೆ ಕೆಫೀನ್ ಮಾರಕವೆಂದು ಹೇಳಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.