Shocking Murder Case: ಅಶ್ಲೀಲ ವಿಡಿಯೋ ಚಟದ ಪರಿಣಾಮ ಹೆತ್ತ ಮಗಳನ್ನೇ ಲೈಂಗಿಕಕ್ರಿಯೆಗೆ ಒತ್ತಾಯಿಸಿದ ತಂದೆಯೊಬ್ಬ ಆಕೆಯನ್ನು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಹೈದರಾಬಾದ್‌ನ ನಾಡಿಗಡ್ಡ ತಾಂಡಾದಲ್ಲಿ 35 ವರ್ಷದ ನೀಚ ತಂದೆಯೊಬ್ಬ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ 13 ವರ್ಷದ ಮಗಳನ್ನು ದಾರುಣವಾಗಿ ಕೊಂದಿದ್ದಾನೆ.  


COMMERCIAL BREAK
SCROLL TO CONTINUE READING

ಮಹಬೂಬಾಬಾದ್ ಜಿಲ್ಲೆಯ ನಿವಾಸಿ ನರೇಶ್ (35) ಆರೋಪಿ ತಂದೆ. ಈತ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ತನ್ನ ಪತ್ನಿ ಹಾಗೂ ಮಗಳ ಜೊತೆ ನಗರಕ್ಕೆ ಬಂದು ವಾಸಿಸುತ್ತಿದ್ದ. ಈತನಿಗೆ ಅಶ್ಲೀಲ ವಿಡಿಯೋ ನೋಡುವ ಚಟವಿತ್ತು. ಹೀಗಾಗಿ ಲೈಂಗಿಕತೆಯ ಬಗ್ಗೆ ಕೀಳು ಆಸಕ್ತಿ ಹೊಂದಿದ್ದ ಆತ ತನ್ನ ಕಾಮದಾಹವನ್ನು ತೀರಿಸಿಕೊಳ್ಳಲು ತನ್ನ ಮಗಳ ಮೇಲೆಯೇ ಕಣ್ಣು ಹಾಕಿದ್ದ. ಕಟ್ಟಿಗೆ ತೆಗೆದುಕೊಂಡು ಬರೋವೆಂದು ಆಕೆಯನ್ನು ಹತ್ತಿರದ ಕಾಡಿಗೆ ಕರೆದೊಯ್ದಿದ್ದ. 


ಇದನ್ನೂ ಓದಿ: ಜುಲೈ 15ರಿಂದ ಮುಂಬೈ-ಹುಬ್ಬಳ್ಳಿ ನಡುವೆ ಇಂಡಿಗೋ ವಿಮಾನಯಾನ ಪುನರಾರಂಭ


ಕಾಡಿಗೆ ಹೋದ ಬಳಿಕ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಆಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆತ ಆಕೆಯ ತಲೆಯನ್ನು ಬಂಡೆಗೆ ಅಪ್ಪಳಿಸಿ ಕೊಲೆ ಮಾಡಿ ನಂತರ ಮನೆಗೆ ಮರಳಿದ್ದಾನೆ. ಮರುದಿನ ಪೊಲೀಸ್ ಠಾಣೆಗೆ ತೆರಳಿ ಮಗಳು ಕಾಣೆಯಾದ ಬಗ್ಗೆ ದೂರು ನೀಡಿದ್ದಾನೆ. ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಆತನ ಮಗಳ ಶವ ಸಮೀಪದ ಕಾಡಿನಲ್ಲಿ ಸಿಕ್ಕಿತ್ತು. 


ಆಕೆಯ ತಾಯಿ ಶವ ತಮ್ಮ ಮಗಳದ್ದೇ ಅಂತಾ ಪೊಲೀಸರಿಗೆ ತಿಳಿಸಿದ್ದಳು. ಬಳಿಕ ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದ್ದರು. ಅದರಲ್ಲಿ ಹೋಗುವಾಗ ತಂದೆ ಮಗಳ ಜೊತೆ ಇದ್ದರೆ, ವಾಪಾಸು ಬರುವಾಗ ತಂದೆ ಒಬ್ಬನೇ ಬಂದಿರುವುದು ಕಂಡುಬಂದಿತ್ತು. ಹೀಗಾಗಿ ಅನುಮಾನಗೊಂಡ ಪೊಲೀಸರು ತಂದೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.


ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕೆ ನಾಳೆ ಪ್ರಧಾನಿ ಭೇಟಿ, ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ತಂದೆಯ ಮೇಲೆ ವಿವಿಧ ಐಪಿಸಿ ಸೆಕ್ಷನ್‌ಗಳು ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.