ನವದೆಹಲಿ: ಕರೋನವೈರಸ್ ಮಹಾಮಾರಿಯಿಂದ ಜನರನ್ನು ರಕ್ಷಿಸಲು, ಭಾರತೀಯ ರೈಲ್ವೆ ಇಲಾಖೆ ಸುರಕ್ಷತೆಯ ಎಲ್ಲಾ ಹೊಸ ಕ್ರಮಗಳನ್ನು ಅನುಸರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಜನರ ನಡುವೆ ಕಡಿಮೆ ಸಂಪರ್ಕವನ್ನು ಉಳಿಸಿಕೊಳ್ಳಲು ಟಿಕೆಟ್ ಕೌಂಟರ್ ಮತ್ತು ರೈಲಿನೊಳಗೆ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಎಲ್ಲಾ ರೈಲು ಟಿಕೆಟ್‌ಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೆ ತರಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಶೀಘ್ರದಲ್ಲೇ, ರೈಲಿನಲ್ಲಿ ಪ್ರಯಾಣಿಸಲು ನಿಮಗೆ ಟಿಕೆಟ್ ಬದಲಿಗೆ ಕ್ಯೂಆರ್ ಕೋಡ್ ಮಾತ್ರ ಬೇಕಾಗಲಿದೆ.


COMMERCIAL BREAK
SCROLL TO CONTINUE READING

ನಿಮ್ಮ ಮೊಬೈಲ್ ನಲ್ಲಿ ನೀವು QR code ಹೊಂದಿರಬೇಕು
ವಿಮಾನ ನಿಲ್ದಾಣಗಳಂತೆ, ರೈಲು ನಿಲ್ತಾನಗಳಲ್ಲಿ ಹಾಗೂ ರೈಲುಗಳಲ್ಲಿ ಮೊಬೈಲ್ ಫೋನ್‌ಗಳಿಂದ ಸ್ಕ್ಯಾನ್ ಮಾಡಬಹುದಾದ ಕ್ಯೂಆರ್ ಕೋಡ್‌ಗಳೊಂದಿಗೆ ಸಂಪರ್ಕರಹಿತ  ಟಿಕೆಟ್‌ಗಳನ್ನು ನೀಡಲು ರೈಲ್ವೆ ಇಲಾಖೆ ಯೋಜನೆ ರೂಪಿಸುತ್ತಿದೆ.  ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್, ಪ್ರಸ್ತುತ ಶೇ.85 ರಷ್ಟು ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಲಾಗುತ್ತಿದೆ. ಹೀಗಾಗಿ ಇನ್ಮುಂದೆ ಕೌಂಟರ್‌ನಿಂದ ಟಿಕೆಟ್ ಖರೀದಿಸುವವರಿಗೆ ಕ್ಯೂಆರ್ ಕೋಡ್‌ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.


QR Code ಹೇಗೆ ಪಡೆಯಬೇಕು?
ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಯಾದವ್, “ನಾವು ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಪರಿಚಯಿಸಿದ್ದೇವೆ, ಅದನ್ನು ಟಿಕೆಟ್‌ನಲ್ಲಿ ನೀಡಲಾಗುವುದು. ಆನ್‌ಲೈನ್‌ನಲ್ಲಿ ಖರೀದಿಸುವವರಿಗೆ ಟಿಕೆಟ್‌ನಲ್ಲಿ ಕೋಡ್ ನೀಡಲಾಗುವುದು. ವಿಂಡೋ ಟಿಕೆಟ್‌ನಲ್ಲಿ ಸಹ, ಯಾರಿಗಾದರೂ ಪೇಪರ್ ಟಿಕೆಟ್ ನೀಡಿದಾಗ, ಅವರ ಮೊಬೈಲ್ ಫೋನ್‌ನಲ್ಲಿ ಸಂದೇಶವನ್ನು ಕಳುಹಿಸಲಾಗುತ್ತದೆ, ಈ ಸಂದೇಶ ಕ್ಯೂಆರ್ ಕೋಡ್‌ಗೆ ಲಿಂಕ್ ಹೊಂದಿರಲಿದೆ. ನೀವು ಲಿಂಕ್ ಕ್ಲಿಕ್ಕಿಸಿದಾಗ ಕೋಡ್ ಕಾಣಿಸಲಿದೆ. ನಂತರ, ಟಿಟಿಇ ರೇಲ್ವೆ ನಿಲ್ದಾಣ ಅಥವಾ ರೈಲಿನಲ್ಲಿ ಫೋನ್ ಅಥವಾ ಉಪಕರಣಗಳನ್ನು ಹೊಂದಿರಲಿದ್ದಾರೆ. ಇದರಿಂದ ಪ್ರಯಾಣಿಕರ ಟಿಕೆಟ್‌ನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ. ಹೀಗಾಗಿ ಟಿಕೆಟ್ ಪರಿಶೀಲನೆಯ ಪ್ರಕ್ರಿಯೆ ಸಂಪೂರ್ಣವಾಗಿ ಸಂಪರ್ಕರಹಿತವಾಗಲಿದೆ: . "ಇದೇ ವೇಳೆ ರೈಲ್ವೆ ಇಲಾಖೆ  ಸಂಪೂರ್ಣವಾಗಿ ಕಾಗದರಹಿತವಾಗಿರಲು ಯೋಜನೆ ರೂಪಿಸುತ್ತಿಲ್ಲ. ಆದರೆ ಕಾಯ್ದಿರಿಸಿದ, ಕಾಯ್ದಿರಿಸದ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಆನ್‌ಲೈನ್ ಬುಕಿಂಗ್ ಪ್ರಾರಂಭಿಸುವ ಮೂಲಕ ಕಾಗದದ ಬಳಕೆ ಬಹಳ ಮಟ್ಟಿಗೆ ಕಡಿಮೆಯಾಗಲಿದೆ" ಎಂದು ಹೇಳಿದ್ದಾರೆ.


ಕೊಲ್ಕತ್ತಾ ಮೆಟ್ರೋನಲ್ಲಿಯೂ ಕೂಡ ಆರಂಭಗೊಂಡಿದೆ ಈ ಸೇವೆ
ಕೋಲ್ಕತಾ ಮೆಟ್ರೊ ನಿಲ್ದಾನಗಳಲ್ಲಿಯೂ ಕೂಡ ಆನ್‌ಲೈನ್ ರೀಚಾರ್ಜ್ ಸೌಲಭ್ಯದ ಮೂಲಕ ಈ ಸೇವೆ ಪ್ರಾರಂಭಿಸಲಾಗಿದೆ ಎಂದು ಯಾದವ್ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದಂತೆ, ಸಂಪರ್ಕರಹಿತ ಟಿಕೆಟ್ ಅನ್ನು ಪರೀಕ್ಷಿಸುವ ಪ್ರಕ್ರಿಯೆಯನ್ನು ಎಲ್ಲಾ ಪ್ರಯಾಣಿಕರು ನಿಲ್ದಾಣಕ್ಕೆ ಪ್ರವೇಶಿಸಿದ ಕೂಡಲೇ ಪ್ರಯಾಗರಾಜ್ ಜಂಕ್ಷನ್ ನಿಲ್ದಾಣದಲ್ಲಿ ಪ್ರಾರಂಭಿಸಲಾಗಿದೆ. ಇದಕ್ಕಾಗಿ ಐಆರ್‌ಸಿಟಿಸಿಯ ವೆಬ್‌ಸೈಟ್ ಅನ್ನು ಸಂಪೂರ್ಣವಾಗಿ ನವೀಕರಿಸಲಾಗುವುದು ಮತ್ತು ಪ್ರಕ್ರಿಯೆಯನ್ನು ಸರಳ, ಅನುಕೂಲಕರವಾಗಿಸಲಾಗುವುದು ಮತ್ತು ಹೋಟೆಲ್‌ಗಳ ಬುಕಿಂಗ್ ಮತ್ತು ಊಟದ ಬುಕಿಂಗ್‌ ಗಳಿಗೂ ಕೂಡ ಈ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಯಾದವ್ ಹೇಳಿದ್ದಾರೆ.