ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ಧಾಳ ಭೀಕರ ಹತ್ಯೆ ಪ್ರಕರಣವು ದೇಶದಾದ್ಯಂತ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ. ಲಿವಿಂಗ್ ರಿಲೇಶನ್ ಶಿಪ್‍ನಲ್ಲಿದ್ದ  27 ವರ್ಷದ ಶ್ರದ್ಧಾಳನ್ನು ಅಫ್ತಾಬ್ ಅಮೀನ್ ಪೂನಾವಾಲಾ ಬರ್ಬರವಾಗಿ ಕೊಲೆ ಮಾಡಿದ್ದ.


COMMERCIAL BREAK
SCROLL TO CONTINUE READING

ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎಸೆದಿದ್ದ. ಈ ಆಘಾತಕಾರಿ ಸುದ್ದಿ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಫ್ತಾಬ್ ವಿರುದ್ಧ ಲವ್ ಜಿಹಾದ್ ಆರೋಪವೂ ಕೇಳಿಬರುತ್ತಿದೆ. ಅನೇಕ ಹಿಂದೂಪರ ಸಂಘಟನೆಗಳು ಅಫ್ತಾಬ್‍ಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತಿವೆ. ದೆಹಲಿಯ ವಕೀಲರು ಸಹ ಶ್ರದ್ಧಾಳ ಕೊಲೆಗಾರನಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: Shraddha Murder Case : ಗರ್ಭಿಣಿಯಾಗಿದ್ದಳಾ ಶ್ರದ್ಧಾ!? ಬಗೆದಷ್ಟು ಹೊರಬರುತ್ತಿದೆ ಈ ʻಪೀಸ್‌ʼವಾಲಾನ ಕುಕೃತ್ಯ!


ಶ್ರದ್ಧಾಳ ಭೀಕರ ಹತ್ಯೆ ಪ್ರಕರಣ ಸಂಬಂಧ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ RGV, ‘ಕೊಲೆಯಾಗಿರುವ ಶ್ರದ್ಧಾ ದೆವ್ವವಾಗಿ ಬಂದು ಅಫ್ತಾಬ್‍ನನ್ನು 70 ತುಂಡುಗಳಾಗಿ ಕತ್ತಿರಿಸಿ ಹಾಕ್ಬೇಕು’ ಅಂತಾ ಆಕ್ರೋಶ ಹೊರಹಾಕಿದ್ದಾರೆ.   


Shraddha Murder Case: ಶ್ರದ್ಧಾ ಹತ್ಯೆಗೆ ವಾಟರ್ ಬಿಲ್ ನಂಟು! ಅಗೆದಷ್ಟು ಬಯಲಾಗುತ್ತಿದೆ ‘ಪೀಸ್ ವಾಲಾ’ನ ದುಷ್ಕೃತ್ಯ 


ತಮ್ಮ ಮತ್ತೊಂದು ಟ್ವೀಟ್‍ನಲ್ಲಿ RGV, ‘ನಾವು ಕೋರುವ ಶ್ರದ್ಧಾಂಜಲಿಯಿಂದ ಶ್ರದ್ಧಾ ಶಾಂತಿ ಹೊಂದುವ ಬದಲು ಆಕೆ ಆತ್ಮವಾಗಿ ಹಿಂತಿರುಗಬೇಕು ಮತ್ತು ಆಕೆಯನ್ನು ಕೊಂದ ಕೊಲೆಗಾರನನ್ನು 70 ತುಂಡುಗಳಾಗಿ ಕತ್ತರಿಸಬೇಕು’ ಅಂತಾ ಹೇಳಿದ್ದಾರೆ.


ಇತ್ತೀಚೆಗೆ ಬರೀ ಕೊಲೆ, ದರೋಡೆ, ಹಾರರ್ ಕಥಾವಸ್ತುಗಳ ಸಿನಿಮಾ ಮಾಡುತ್ತಿರುವ ರಾಮ್ ಗೋಪಾಲ್ ವರ್ಮಾ, ಶ್ರದ್ಧಾ ಹತ್ಯೆ ಪ್ರಕರಣದ ಬಗ್ಗೆಯೂ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆಂದು ತಿಳಿದುಬಂದಿದೆ. ಈಗಾಗಲೇ ಅನೇಕ ನೈಜ್ಯ ಘಟನೆಗಳನ್ನು ಆಧರಿಸಿದ ಸಿನಿಮಾಗಳನ್ನು ಮಾಡಿರುವ RGV ಶೀಘ್ರವೇ ಶ್ರದ್ಧಾಳ ಕೊಲೆ ಪ್ರಕರಣದ ಬಗ್ಗೆಯೂ ಸಿನಿಮಾ ಮಾಡುತ್ತಾರೆಂದು ವರದಿಯಾಗಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.