Shraddha Murder Case : ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ದೆಹಲಿ ಪೊಲೀಸರು ಶ್ರದ್ಧಾ ಅವರ ಫೋನ್‌ನ ಸಿಡಿಆರ್ (ಕಾಲ್ ಡಿಟೇಲ್ ರೆಕಾರ್ಡ್) ವರದಿಯನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, ಶ್ರದ್ಧಾ ಫೋನ್‌ನ ಕೊನೆಯ ಲೊಕೇಶನ್‌ ಮೇ 18 ಮತ್ತು 19 ರಂದು ಮೆಹ್ರೌಲಿಯ ಛತ್ತರ್‌ಪುರ ಎಂಬ ವಿಚಾರ ವರದಿಯಿಂದ ಬಹಿರಂಗವಾಗಿದೆ.


COMMERCIAL BREAK
SCROLL TO CONTINUE READING

ಮೇ 18ರಂದು ಶ್ರದ್ಧಾ ಅವರ ಮೊಬೈಲ್‌ನಿಂದ ಅಫ್ತಾಬ್ ಹಲವು ಬಾರಿ ಕರೆ ಮಾಡಿದ್ದ. ಅವಳ ಸಂಖ್ಯೆಗೆ ಮೊದಲಿನಿಂದಲೂ ಅನೇಕ ಕರೆಗಳು ಬಂದಿದ್ದವರು. ಆದ್ರೆ ಮೇ 19 ರಿಂದ ಶ್ರದ್ಧಾ ಫೋನ್‌ನಿಂದ ಯಾವುದೇ ಅಪ್‌ಡೇಟ್ ಇರಲಿಲ್ಲ. ಮೊಬೈಲ್ ಸಿಡಿಆರ್ ಮೂಲಕವೇ ಪೊಲೀಸರಿಗೆ ಕೊನೆಯ ಸ್ಥಳ ಗೊತ್ತಾಗಿದೆ. ಆದ್ರೆ ಶ್ರದ್ಧಾ ಫೋನ್ ನಿಂದ ಅಫ್ತಾಬ್ ಕರೆ ಮಾಡಿದ್ದು ಯಾರಿಗೆ..? ಆ ಫೋನ್‌ಗೆ ಯಾರ ಕರೆಗಳು ಬಂದಿವೆ ಎಂಬುದನ್ನು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿಲ್ಲ.


ಇದನ್ನೂ ಓದಿ: 2020 ರ ದೆಹಲಿ ಗಲಭೆ ಪ್ರಕರಣ:  ಜೆಎನ್ಯು ವಿದ್ಯಾರ್ಥಿ ಉಮರ್ ಖಾಲಿದ್ ನಿರ್ದೋಷಿ


OLX ನಲ್ಲಿ ಅಫ್ತಾಬ್ ಫೋನ್ ಮಾರಾಟ : ಮೇ 19ರ ರಾತ್ರಿ ಶ್ರದ್ಧಾ ಅವರ ಫೋನ್ ಸ್ವಿಚ್ ಆಫ್ ಆಗಿತ್ತು ಎಂಬ ವಿಚಾರ ಬಹಿರಂಗವಾಗಿದೆ. ಇದು ಶ್ರದ್ಧಾ ಹತ್ಯೆ ಪ್ರಕರಣಕ್ಕೆ ಬಹುದೊಡ್ಡ ಸಾಕ್ಷಿಯಾಗಿದೆ ಎಂದು ಪೊಲೀಸರು ಭಾವಿಸಿದ್ದಾರೆ. ಅಲ್ಲದೆ, ಇಂತಹ ಹಲವಾರು ಸಾಕ್ಷ್ಯಾಧಾರಗಳು ಅಫ್ತಾಬ್‌ಗೆ ಶಿಕ್ಷೆಯಾಗುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಕೊಲೆಯಾದ ನಾಲ್ಕು ತಿಂಗಳ ನಂತರ ಆರೋಪಿ ಅಫ್ತಾಬ್ ತನ್ನ ಮೊಬೈಲ್ ಬದಲಾಯಿಸಿದ್ದ ಎಂಬ ವಿಚಾರ ಬಹಿರಂಗವಾಗಿದೆ.


ಕೊಲೆಯ ಬಳಿಕ ಆರೋಪಿ ಅಫ್ತಾಬ್‌ ತನ್ನ ಹಳೆಯ ಮೊಬೈಲ್‌ ಅನ್ನು ಓಎಲ್‌ಎಕ್ಸ್ ನಲ್ಲಿ ಮಾರಾಟ ಮಾಡಿದ್ದಾಗಿ ತಿಳಿದು ಬಂದಿದೆ. ಅಲ್ಲದೆ, ಅದೇ ನಂಬರ್‌ನಲ್ಲಿ ಮತ್ತೊಂದು ಸಿಮ್ ಪಡೆದಿದ್ದನು. ಸದ್ಯ ಆ ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಶ್ರದ್ಧಾ ಅವರ ಮೊಬೈಲ್ ಇನ್ನೂ ಪತ್ತೆಯಾಗಿಲ್ಲ. ಸದ್ಯಕ್ಕೆ ಆಕೆಯ ಮೊಬೈಲ್‌ನ ಕೊನೆಯ ಸ್ಥಳವನ್ನು ಮಾತ್ರ ಸ್ಪಷ್ಟಪಡಿಸಲಾಗಿದೆ. ವಿಚಾರಣೆ ಮುಂದುವರೆದಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.