Adipurush: `ಕೀಳು ರಾಜಕೀಯಕ್ಕಾಗಿ ತಾಯಿ ಸೀತೆ - ಶ್ರೀರಾಮನಿಗೆ ಅವಮಾನ``, `ಆದಿಪುರುಷ್ ಚಿತ್ರದ ವಿರುದ್ಧ ಆಪ್ ಅಸಮಾಧಾನ
AAP About Adipurush: `ಆಧಿಪುರುಷ್` ಚಿತ್ರದ ವಿರುದ್ಧ ಅಸಮಾಧಾನ ಹೊರಹಾಕಿರುವ ಆಮ್ ಆದ್ಮಿ ಪಕ್ಷ ಈ ಚಿತ್ರದ ಮೂಲಕ ಶ್ರೀರಾಮ ಹಾಗೂ ಹಿಂದೂ ಧರ್ಮಕ್ಕೆ ಅವಮಾನ ಎಸಗಲಾಗಿದೆ ಎಂದು ಆರೋಪಿಸಿದೆ ಮತ್ತು ಬಿಜೆಪಿ ಮುಖಂಡರು ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದೆ.
AAP About Adipurush: ಆದಿಪುರುಷ ಚಿತ್ರದ ಬಗ್ಗೆ ಆಮ್ ಆದ್ಮಿ ಪಕ್ಷ (ಎಎಪಿ) tanna ಅಸಮಾಧಾನ horahaakide. ಚಿತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಎಎಪಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು "ಬಿಜೆಪಿ ತನ್ನ ಚೀಪ್ ಪಾಲಿಟಿಕ್ಸ್ ಗಾಗಿ ತಾಯಿ ಸೀತೆ ಹಾಗೂ ಶ್ರೀರಾಮನನ್ನು ಅವಮಾನಿಸುತ್ತಿದೆ ಎಂದು ಹೇಳಲು ಇಂದು ನನಗೆ ಅತೀವ ನೋವಾಗುತ್ತಿದೆ. ತಾಯಿ ಸೀತೆ ಎಂದಾಕ್ಷಣ ಎಲ್ಲಾ ಹಿಂದೂಗಳು ಗೌರವದಿಂದ ತಲೆ ಬಾಗುತ್ತದೆ. ಶ್ರೀರಾಮ ಮತ್ತು ಹನುಮಂತನ ಹೆಸರನ್ನು ಉಲ್ಲೇಖಿಸಿದ ಅವರು ನಮ್ಮ ದೇವದೇವತೆಗಳ ಕುರಿತು ಕೆಟ್ಟ ಚಿತ್ರ ನಿರ್ಮಿಸಿದ್ದಾರೆ" ಎಂದು ಆರೋಪಿಸಿದ್ದಾರೆ.
ಚಿತ್ರದ ಡೈಲಾಗ್‌ಗಳು ಕೀಳು ಮಟ್ಟದ್ದಾಗಿವೆ. ಅವು ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿವೆ. ಒಂದು ಕಾಲ್ಪನಿಕ ಕಥೆಯನ್ನಾಧರಿಸಿರುವ ದೃಶ್ಯದಲ್ಲಿ ತಾಯಿ ಸೀತೆಗೆ ಚೂರಿ ಇರಿಯಲಾಗುತ್ತದೆ. ಒಂದು ಕಾಲ್ಪನಿಕ ಕಥೆಯಲ್ಲಿ ನೀವು ನಿಮಗೆ ಬೇಕಾದಂತೆ ಹೇಗೆ ತೋರಿಸಲು ಸಾಧ್ಯ. ಒಂದು ಕಾಲ್ಪನಿಕ ಕಥೆಯ ಮೂಲಕ ನೀವು ರಾಮಚರಿತಮಾನಸದಲ್ಲಿನ ಆಧಾರಗಳನ್ನು ಹೇಗೆ ಬದಲಿಸಲು ಸಾಧ್ಯ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ-Export Fall: ಮೇ ತಿಂಗಳಿನಲ್ಲಿ 5 ತಿಂಗಳ ದಾಖಲೆಯ ಕನಿಷ್ಠ ಮಟ್ಟಕ್ಕೆ ಜಾರಿದ ದೇಶದ ರಫ್ತು
ಆದಿಪುರುಷ್ ಚಿತ್ರದ ವಿರುದ್ಧ ಆಪ್ ಪ್ರತಿಭಟನೆ
ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಎಎಪಿ ಸಂಸದ, "ಪುಷ್ಕರ್ ಧಾಮಿ, ನರೋತ್ತಮ್ ಮಿಶ್ರಾ, ಸಿಎಂ ಯೋಗಿ, ಶಿವರಾಜ್ ಚೌಹಾಣ್, ಏಕನಾಥ್ ಶಿಂಧೆ, ಮನೋಹರ್ ಲಾಲ್ ಖಟ್ಟರ್ ಅವರ ಆಶೀರ್ವಾದದಿಂದ ಚಿತ್ರ ನಿರ್ಮಿಸಲಾಗಿದೆ. ಈ ಜನರು ಶ್ರೀರಾಮನ ಪರವಾಗೂ ಇಲ್ಲ, ಜನಸಾಮಾನ್ಯರ ಪರವಾಗಿಯೂ ಇಲ್ಲ, ಈ ಚಿತ್ರದಲ್ಲಿ 'ಸಡಕ್ ಛಾಪ್' (ಬೀದಿ ಭಾಷೆ) ಭಾಷೆಯನ್ನು ಬಳಸಲಾಗಿದೆ. ಧರ್ಮದ ವಿಷಯದಲ್ಲೂ ಪಕ್ಷ ಕೀಳುಮಟ್ಟವನ್ನು ಪ್ರದರ್ಶಿಸಿದೆ. ಕೇವಲ ಒಂದು ಚಿತ್ರವನ್ನು ನಿರ್ಮಿಸುವ ಮೂಲಕ ಬಿಜೆಪಿ ಶ್ರೀರಾಮ, ತಾಯಿ ಸೀತೆ ಹಾಗೂ ಹನುಮನನ್ನು ಅವಮಾನಿಸಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ-Hero ಧಮಾಕಾ! 160 ಸಿಸಿ ಸ್ಟೈಲಿಶ್ ಬೈಕ್ ಬಿಡುಗಡೆ ಮಾಡಿದ ಹೀರೋ
ಪ್ರಧಾನಿ ಮೋದಿ ಕ್ಷಮೆ ಕೋರಬೇಕು
ಪ್ರಧಾನಿ ಮೋದಿಯವರ ಕ್ಷಮೆಯಾಚನೆಗೆ ಆಗ್ರಹಿಸಿದ ಸಂಜಯ್ ಸಿಂಗ್, "ಅಮಿತ್ ಶಾ, ಪ್ರಧಾನಿ ಮೋದಿ, ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ನಾಯಕರು ದೇವರನ್ನು ಅವಮಾನಿಸಿದ್ದಕ್ಕಾಗಿ ಎಲ್ಲಾ ಹಿಂದೂಗಳ ಕ್ಷಮೆಯಾಚಿಸಬೇಕು" ಎಂದು ಹೇಳಿದ್ದಾರೆ. ರಾಮಾಯಣ ಆಧಾರಿತ ಆದಿಪುರುಷ ಚಿತ್ರ ಶುಕ್ರವಾರ ಬಿಡುಗಡೆಯಾಗಿದೆ. ಈ ವೇಳೆ ಹಲವು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ದಂಡೇ ಹರಿದುಬಂದಿದೆ. ಇನ್ನೊಂದೆಡೆ ಈ ಚಲನಚಿತ್ರ ತನ್ನ ವಿಎಫ್ಎಕ್ಸ್ (ವಿಜುವಲ್ ಎಫೆಕ್ಟ್ಸ್) ಮತ್ತು ಕೆಲ ಕಳಪೆಮಟ್ಟದ ಸಂಭಾಷಣೆಗಳಿಗಾಗಿ ಟೀಕೆಗೆ ಒಳಗಾಗುತ್ತಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ