ನವದೆಹಲಿ: ಪುದುಚೇರಿಯ ನೂತನ ಮುಖ್ಯ ಚುನಾವಣಾ ಅಧಿಕಾರಿಯಾಗಿ ಎಜಿಎಂಯುಟಿ (ಅರುಣಾಚಲ ಪ್ರದೇಶ, ಮಿಜೋರಾಂ, ಗೋವಾ ಮತ್ತು ಕೇಂದ್ರಾಡಳಿತ) ಕೇಡರ್‌ನ ಶುರ್ಬೀರ್ ಸಿಂಗ್ ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ.


COMMERCIAL BREAK
SCROLL TO CONTINUE READING

ಸಿಂಗ್ ಪ್ರಸ್ತುತ ಸರ್ಕಾರದ  ಪ್ರಾದೇಶಿಕ ಕಾರ್ಯದರ್ಶಿಯಾಗಿದ್ದಾರೆ. 


ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಅಶ್ವನಿ ಕುಮಾರ್ ಅವರಿಗೆ ಚುನಾವಣಾ ಆಯೋಗ ಮಾಹಿತಿ ನೀಡಿದ್ದು, ಮುಂದಿನ ಸಿಇಒ ಆಗಿ ಶುರ್ಬೀರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿರುವುದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ.


ಈ ವರ್ಷದ ಜುಲೈನಲ್ಲಿ ಈಗಿನ ಸಿಇಒ ವಿ ಕ್ಯಾಂಡವೆಲೌ ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ವರ್ಗಾಯಿಸಲಾಗಿದ್ದರಿಂದ ಅವರಲ್ಲಿ ಒಬ್ಬರನ್ನು ಈ ಹುದ್ದೆಗೆ ಅನುಮೋದನೆ ಮತ್ತು ನೇಮಕಾತಿ ಕೋರಿ ಸರ್ಕಾರ ಸೆಪ್ಟೆಂಬರ್ 24 ರಂದು ಐಎಎಸ್ ಅಧಿಕಾರಿಗಳ ಹೆಸರನ್ನು ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಶರ್ಬೀರ್ ಸಿಂಗ್ ಅವರನ್ನು ಮುಖ್ಯ ಚುನಾವಣಾ ಅಧಿಕಾರಿಯಾಗಿ ನೇಮಿಸಿದೆ.