ವಾರಣಾಸಿ: ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಕಿರುಕುಳದ ಪ್ರಕರಣಗಳ ಹಿನ್ನೆಲೆ, ಕಾಶಿಯ ಐರನ್ ಮ್ಯಾನ್ ಎಂದೇ ಖ್ಯಾತ ಶ್ಯಾಮ್ ಚೌರಾಸಿಯಾ ಅವರು 'ಲಿಪ್ಸ್ಟಿಕ್ ಗನ್' ರಚಿಸಿದ್ದಾರೆ. ಈ ಲಿಪಿಸ್ಟಿಕ್ ಗನ್ ನೋಡಲು ಲಿಪಿಸ್ಟಿಕ್ನಂತೆಯೇ ಇದೆ, ಆದರೆ ಇದು ಕಿಡಿಗೇಡಿಗಳಿಗೆ ಪಾಠ ಕಲಿಸಲು ಸಂಪೂರ್ಣವಾಗಿ ಸಮರ್ಥವಾಗಿದೆ. ಇದರಿಂದ ಹೊರಬರುವ ಗುಂಡಿನ ಶಬ್ದವು ಎಷ್ಟೊಂದು ತೀವ್ರವಾಗಿದೆ ಎಂದರೆ ಶಬ್ದವನ್ನು ನೀವು  ಒಂದು ಕಿಲೋಮೀಟರ್‌ ಅಂತರದಿಂದಲೂ ಕೇಳಬಹುದಾಗಿದೆ. ಘಟನೆಯ ಬಗ್ಗೆ ಸಾರ್ವಜನಿಕರ ಗಮನ ಸೆಳೆಯುವುದು ಈ ಗುಂಡಿನ ಶಬ್ದದ ಉದ್ದೇಶವಾಗಿದೆ. ಇದರಿಂದ ತೊಂದರೆಗೆ ಸಿಲುಕಿದ ಮಹಿಳೆಯನ್ನು ಸಾರ್ವಜನಿಕರು ಕಾಪಾಡಬಹುದು.


COMMERCIAL BREAK
SCROLL TO CONTINUE READING

ಅಷ್ಟೇ ಅಲ್ಲ ಈ ಲಿಪ್ ಸ್ಟಿಕ್ ನಲ್ಲಿ ಲೈವ್ ಲೋಕೇಶನ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಲಾಗಿದ್ದು, ೧೧೨ ಈ ಪೋಲೀಸ್ ಸಂಖ್ಯೆಗೆ ಕರೆ ಹೋಗುವುದರ ಜೊತೆಗೆ ಯುವತಿಯ ಕುಟುಂಬ ಸದಸ್ಯರಿಗೂ ಕೂಡ ಕಾಲ್ ಹೋಗಲಿದೆ. ಲೈವ್ ಲೋಕೇಶನ್ ಬಳಸಿ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಯುವತಿಯನ್ನುಕಾಪಾಡಬಹುದು. ಪೊಲೀಸರು ಘಟನಾ ಸ್ಥಳಕ್ಕೆ ತಲುಪುವವರೆಗೆ ಈ ಲಿಪ್ಸ್ಟಿಕ್ ಗನ್ ನಿಂದ ಫೈರಿಂಗ್ ಮಾಡಿ ಯುವತಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾಗಿದೆ.


ಈ ಲಿಪ್ಸ್ಟಿಕ್ ತಯಾರಿಸಲು ಶಾಮ್ ಚೌರಾಸಿಯಾ ೭ ತಿಂಗಳ ಕಾಲಾವಕಾಶ ತೆಗೆದುಕೊಂಡಿದ್ದಾರೆ. ಈ ಲಿಪ್ಸ್ಟಿಕ್ ಗನ್ ತಯಾರಿಸಲು ರೂ.650 ವೆಚ್ಚ ತಗುಲಿದೆ. ಈ ಗನ್ ನ ಪ್ರೋಟೋಟೈಪ್ ನ ತೂಕ ೭೦ ಗ್ರಾಮ್ ಗಳಷ್ಟಿದೆ. ಇದೊಂದು ಚರ್ಜೆಬಲ್ ಗನ್ ಆಗಿದ್ದು, ಒಂದು ಗಂಟೆ ಚಾರ್ಜ್ ಮಾಡಿದರೆ ಒಂದು ವಾರ ಕಾರ್ಯನಿರ್ವಹಿಸಲಿದೆ. ಮಹಿಳೆಯರು ಆತ್ಮರಕ್ಷಣೆ ಈ ಆಂಟಿ-ಇವ್ ಟೀಸಿಂಗ್ ಗನ್ ನ ಉದ್ದೇಶವಾಗಿದೆ. 


ಇದಕ್ಕೂ ಮೊದಲು ಶಾಮ್ ಚೌರಾಸಿಯಾ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಉಪಕರಣಗಳನ್ನು ತಯಾರಿಸಿದ್ದು ಇಲ್ಲಿ ವಿಶೇಷವಾಗಿದೆ. ಮಹಿಳೆಯರೂ ಕೂಡ ಅವರು ತಯಾರಿಸಿರುವ ಉಪಕರಣಗಳಿಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಉಪಕರಣಗಳನ್ನು ಬಳಸಿ ಮಹಿಳೆಯರು ಹಾಗೂ ಯುವತಿಯರು ತಮ್ಮ ವಿರುದ್ಧ ನಡೆಯುವ ಸಂಭಾವ್ಯ ದುಷ್ಕೃತ್ಯದಿಂದ ಪಾರಾಗಬಹುದು. ಈ ಲಿಪ್ ಸ್ಟಿಕ್ ರೂಪದ ಗನ್ ಕಿಡಿಗೇಡಿಗಳ ಪಾಲಿಗೆ ಎಷ್ಟೊಂದು ಅಪಾಯಕಾರಿಯಾಗಿದೆ ಎಂಬುದು ಅವರಿಗೂ ಸಹ ತಿಳಿದಿಲ್ಲ.


ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿರುವ ಶಾಮ್ ಚೌರಾಸಿಯಾ ತಾವು ತಯಾರಿಸಿದ ಗನ್ ಕುರಿತು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಸರ್ಕಾರ ಒಂದು ವೇಳೆ ಅವರಿಗೆ ಸಹಾಯ ಹಸ್ತ ಚಾಚಿದರೆ ಈ ಉಪಕರಣವನ್ನು ಇನ್ನಷ್ಟು ಪ್ರಭಾವಶಾಲಿಯಾಗಿ ತಯಾರಿಸಬಹುದು ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.