ಡೆಹ್ರಾಡೂನ್: ಜನಸಮೂಹವು ಮುಸ್ಲಿಂ ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಗಗನದೀಪ್ ಸಿಂಗ್ ಆ ಯುವಕನ ರಕ್ಷಣೆ ನಿಂತು ಕಾಪಾಡಿದ ಹಿನ್ನಲೆಯಲ್ಲಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿ ಮೆರೆದಿದ್ದಾನೆ.


COMMERCIAL BREAK
SCROLL TO CONTINUE READING


ರಾಮನಗರ ದೇವಸ್ತಾನದ ಹತ್ತಿರ ತನ್ನ ಪ್ರೇಯಸಿ ಜೊತೆಗೆ ಕುಳಿತಿದ್ದಾಗ ಜನ ಸಮೂಹವು ಆ ಮುಸ್ಲಿಂ ಯುವಕನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದೆ.ಆ ಸಂದರ್ಭದಲ್ಲಿ ಈ ಪೋಲಿಸ್ ಅಧಿಕಾರಿ ಯುವಕನ ರಕ್ಷಣೆಗೆ ಧಾವಿಸಿದ್ದಾನೆ. ಈಗ ಈ ಎಲ್ಲ ಘಟನಾವಳಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈಗ ಈ ಪೋಲಿಸ್ ಅಧಿಕಾರಿಯ ಸಾಹಸಕ್ಕೆ  ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.


ಈ ಪೋಲಿಸ್ ಅಧಿಕಾರಿಯ ಕಾರ್ಯಕ್ಕೆ ಎಡಿಜಿಯವರು 2500 ರೂಗಳ ಮೆಚ್ಚುಗೆ ಬಹುಮಾನವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.