ನವದೆಹಲಿ: ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭಾರಿ ಹಗರಣ ನಡೆದಿದೆ ಎಂದು ವಿರೋಧ ಪಕ್ಷಗಳಿಂದ ಮೋದಿ ಸರ್ಕಾರ ಟೀಕೆಗೆ ಒಳಗಾಗಿದೆ.ಈಗ ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿಗೆ ಈಗ ಸ್ವಪಕ್ಷದವರಿಂದಲೇ ಈ ಕುರಿತಾಗಿ ಸ್ಪಷ್ಟನೆ ನೀಡುವಂತೆ ಒತ್ತಡ ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಬಿಜೆಪಿಯ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿ ಪ್ರಧಾನಿ ಮೋದಿ ರಫೇಲ್ ವಿವಾದದ ಕುರಿತಾಗಿ ಮೌನವನ್ನು ಮುರಿಯಲು ಆಗ್ರಹಿಸಿದ್ದಾರೆ.


ಸರ್ ಜಿ, ನಿಮ್ಮ ಮೌನವನ್ನು ಮುರಿದು ಫ್ರಾನ್ಸ್ ಮಾಜಿ ಅಧ್ಯಕ್ಷ ಅವರ ಹೇಳಿಕೆ ಕುರಿತು ಸ್ಪಷ್ಟನೆ ನೀಡಿ (ನೀವಿಬ್ಬರು  ಸಭೆಯಲ್ಲಿದ್ದರಿಂದ) ಇಲ್ಲದಿದ್ದರೆ ಜನರು ಅದನ್ನು ನಿಜವೆಂದು  ತಿಳಿದುಕೊಳ್ಳುತ್ತಾರೆ" ಎಂದು ಅವರು ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದಾರೆ.



ಕಳೆದ ವಾರ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಹೊಲಾಂಡ್ ಕಳೆದ ವಾರ ಮೋದಿ ಸರ್ಕಾರವೇ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪನಿಯ ಹೆಸರನ್ನು ಪ್ರಸ್ತಾಪಿಸಿದ್ದು ಆದ್ದರಿಂದ ಫ್ರಾನ್ಸ್ ಸರ್ಕಾರಕ್ಕೆ ಬೇರೆ ಯಾವುದೇ ಆಯ್ಕೆ ಇರಲಿಲ್ಲವೆಂದು ಹೇಳಿಕೆ  ನೀಡಿದ್ದರು.ಇದರಿಂದ ಅವರ ಹೇಳಿಕೆ ಸರ್ಕಾರವನ್ನು ಮುಜುಗರಕ್ಕೆ ಒಳಪಡಿಸಿತ್ತು.ಈ ಹಿನ್ನಲೆಯಲ್ಲಿ ಈಗ ಸಿನ್ಹಾ ಪ್ರಧಾನಿಗೆ ಸ್ಪಷ್ಟನೆ ನೀಡುವಂತೆ  ಕೋರಿದ್ದಾರೆ.