ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಅಣೆಕಟ್ಟೆ ಒಡೆದು 6 ಸಾವು, ಹಲವರು ಕಣ್ಮರೆ
ಈ ಅಣೆಕಟ್ಟಿನ ಸಾಮರ್ಥ್ಯವನ್ನು 0.08 ಟಿಎಂಸಿ ಎಂದು ವಿವರಿಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗಾಗಿ 5 ಬಿಎನ್ ಎನ್‌ಡಿಆರ್‌ಎಫ್ ತಂಡವನ್ನು ಸಿಂಧುದುರ್ಗ್‌ಗೆ ಕಳುಹಿಸಲಾಗಿದೆ. ಇದಲ್ಲದೆ ಸ್ಥಳೀಯ ಆಡಳಿತವು ಪೊಲೀಸರ ಸಹಯೋಗದೊಂದಿಗೆ ರಕ್ಷಣಾ ಕಾರ್ಯನಿರ್ವಹಿಸುತ್ತಿದೆ.
ಮುಂಬೈ: ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ರತ್ನಗಿರಿ ಜಿಲ್ಲೆಯ ಚಿಲುನ್ ತಹಸಿಲ್‌ನಲ್ಲಿರುವ ಟಿವ್ರೆ ಎಂಬ ಸಣ್ಣ ಅಣೆಕಟ್ಟು ಒಡೆದು ಬಿದ್ದಿದೆ. ಈ ಅಣೆಕಟ್ಟೆಯಿಂದ ತಗ್ಗು ಪ್ರದೇಶದಲ್ಲಿದ್ದ ಏಳು ಹಳ್ಳಿಗಳಲ್ಲಿ ಈ ವೇಳೆ ಪ್ರವಾಹ ಉಂಟಾಗಿದೆ. ಈ ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಸುಮಾರು 18-20 ಜನರು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದೆ. ರತ್ನಗಿರಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಈ ಅನಾಹುತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.
ಎನ್‌ಡಿಆರ್‌ಎಫ್ ನಿಂದ ಲಭ್ಯವಾದ ಮಾಹಿತಿ ಪ್ರಕಾರ, ಅಣೆಕಟ್ಟು ಬಳಿಯ ಸಣ್ಣ ಹಳ್ಳಿಯ ಸುಮಾರು 18 ಜನರಿಗೆ ಇನ್ನೂ ಕಣ್ಮರೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, 6 ಜನರ ಶವಗಳನ್ನು ರಕ್ಷಣಾ ತಂಡಗಳು ವಶಪಡಿಸಿಕೊಂಡಿದೆ. ಈ ಅಣೆಕಟ್ಟಿನ ಸಾಮರ್ಥ್ಯವನ್ನು 0.08 ಟಿಎಂಸಿ ಎಂದು ವಿವರಿಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗಾಗಿ 5 ಬಿಎನ್ ಎನ್‌ಡಿಆರ್‌ಎಫ್ ತಂಡವನ್ನು ಸಿಂಧುದುರ್ಗ್‌ಗೆ ಕಳುಹಿಸಲಾಗಿದೆ. ಇದಲ್ಲದೆ ಸ್ಥಳೀಯ ಆಡಳಿತವು ಪೊಲೀಸರ ಸಹಯೋಗದೊಂದಿಗೆ ರಕ್ಷಣಾ ಕಾರ್ಯನಿರ್ವಹಿಸುತ್ತಿದೆ.
ಕಣ್ಮರೆಯಾದವರ ಹೆಸರು:
1- ಅನಂತ್ ಹರಿಭೌ ಚವಾಣ್ (63)
2- ಅನಿತಾ ಅನಂತ್ ಚವಾಣ್ (58)
3- ರಂಜಿತ್ ಅನಂತ್ ಚವಾಣ್ (15)
4- ರಿತುಜಾ ಅನಂತ್ ಚವಾಣ್ (25)
5- ದುರ್ಬ್ವಾ ರಂಜಿತ್ ಚವಾಣ್ (1.5)
6- ಆಶ್ರಮ್ ಧೋಂಡು ಚವಾಣ್ (75)
7- ಲಕ್ಷ್ಮಿ ಆತ್ಮರಾಮ್ ಚವಾಣ್ (72)
8 - ನಂದರಾಮ್ ಮಹಾದೇವ್ ಚವಾಣ್ (65)
9- ಪಾಂಡುರಂಗ್ ಧೋಂಡು ಚವಾಣ್ (50)
10- ರವೀಂದ್ರ ತುಕಾರಂ ಚವಾಣ್ (50)
11- ರೇಷ್ಮಾ ರವೀಂದ್ರ ಚವಾಣ್ (45)
12 - ದಶರಥ ರವೀಂದ್ರ ಚವಾಣ್ (20)
13 - ವೈಷ್ಣವಿ ರವೀಂದ್ರ ಚವಾಣ್ (18)
14 - ಅನುಸೂಯ ಸೀತಾರಾಮ್ ಚವಾಣ್ (70)
15- ಚಂದ್ರಭಾಗ ಕೃಷ್ಣ ಚವಾಣ್ (75)
16 - ಬಲಿರಾಮ್ ಕೃಷ್ಣ ಚವಾಣ್ (55)
17 - ಶಾರದಾ ಬಲಿರಾಮ್ ಚವಾಣ್ (48)
18- ಸಂದೇಶ್ ವಿಶ್ವಾಸ್ ಧಾದ್ವೆ (18)
19- ಸುಶೀಲ್ ವಿಶ್ವಾಸ್ ಧಾದ್ವೆ (48)
20- ರಂಜಿತ್ ಕಜವೇ (30)
21 - ರಾಕೇಶ್ ಘಾಣೆಕರ್ (30)
ತಗ್ಗು ಪ್ರದೇಶಗಳಲ್ಲಿ ಕಾಣೆಯಾದವರು ಸಿಗುವ ಸಾಧ್ಯತೆಯಿದೆ, ಆದರೆ ಅವರು ಬದುಕಿರುವ ಬಗ್ಗೆ ಏನನ್ನೂ ಹೇಳಲಾಗುವುದಿಲ್ಲ ಎಂದು ಪರಿಹಾರ ಸಂಸ್ಥೆಗಳು ಹೇಳುತ್ತವೆ. ಜಿಲ್ಲಾಡಳಿತ, ಪೊಲೀಸರು ಮತ್ತು ಕೆಲವು ಎನ್‌ಜಿಒಗಳು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.