ಹರಿಯಾಣದಲ್ಲಿ ಸಿಲಿಂಡರ್ ಸ್ಫೋಟದಿಂದ ಒಂದೇ ಕುಟುಂಬದ ಆರು ಮಂದಿ ಸಜೀವ ದಹನ
Cylinder Explosion: ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾಗಿರುವ ಘಟನೆ ಹರಿಯಾಣದ ಪಾಣಿಪತ್‌ನ ತೆಹಸಿಲ್ ಕ್ಯಾಂಪ್‌ನಲ್ಲಿರುವ ರಾಧಾ ಫ್ಯಾಕ್ಟರಿ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
Cylinder explosion: ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾಗಿರುವ ಭೀಕರ ಘಟನೆ ಇಂದು(ಜನವರಿ 12) ಬೆಳಗ್ಗೆ ಹರಿಯಾಣದ ಪಾಣಿಪತ್‌ನ ತೆಹಸಿಲ್ ಕ್ಯಾಂಪ್‌ನಲ್ಲಿರುವ ರಾಧಾ ಫ್ಯಾಕ್ಟರಿ ಬಳಿ ಸಂಭವಿಸಿದೆ. ಮೃತರಲ್ಲಿ ಪತಿ-ಪತ್ನಿ ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಪಾಣಿಪತ್‌ನ ತೆಹಸಿಲ್ ಕ್ಯಾಂಪ್‌ನಲ್ಲಿರುವ ರಾಧಾ ಫ್ಯಾಕ್ಟರಿ ಬಳಿಯ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿದ್ದ ಮನೆಯಲ್ಲಿ ಈ ಅಗ್ನಿ ಅನಾಹುತ ಸಂಭವಿಸಿದೆ. ಇಂದು ಬೆಳಿಗ್ಗೆ ಅಡುಗೆ ಮಾಡಲೆಂದು ಸ್ಟೌವ್ ಹಚ್ಚಿದಾಗ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಈ ಸಮಯದಲ್ಲಿ ಮನೆಯ ಬಾಗಿಲು ತೆರೆಯದ ಕಾರಣ ಕುಟುಂಬದ ಎಲ್ಲರೂ ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ- ಚಿರಾಗ್ ಪಾಸ್ವಾನ್ ಜೀವಕ್ಕೆ ಬೆದರಿಕೆ, ಕೇಂದ್ರದಿಂದ ಜೆಡ್ ಕೆಟಗರಿ ಭದ್ರತೆ
ಈ ದುರ್ಘಟನೆ ಸಂಭವಿಸಿದಾಗ ಪತಿ-ಪತ್ನಿ ತಮ್ಮ ನಾಲ್ವರು ಮಕ್ಕಳೊಂದಿಗೆ ಮನೆಯಲ್ಲಿದ್ದರು. ನಾಲ್ವರು ಮಕ್ಕಳಲ್ಲಿ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಎನ್ನಲಾಗಿದೆ. ಮೃತರನ್ನು ಅಬ್ದುಲ್ ಕರೀಂ (50), ಅವರ ಪತ್ನಿ ಅಫ್ರೋಜಾ (46), ಹಿರಿಯ ಮಗಳು ಇಶ್ರತ್ ಖಾತುನ್ (17-18), ರೇಷ್ಮಾ (16), ಅಬ್ದುಲ್ ಶಕೂರ್ (10) ಮತ್ತು ಅಫಾನ್ (7) ಎಂದು ಗುರುತಿಸಲಾಗಿದೆ. ಮೂಲತಃ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದವರಾದ ಇವರು ಉದ್ಯೋಗದ ಸಲುವಾಗಿ ಹರಿಯಾಣದ ಪಾಣಿಪತ್‌ನಲ್ಲಿ ಬಂದು ನೆಲೆಸಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಮಗಳನ್ನು ಕೊಂದು ರಾತ್ರೋರಾತ್ರಿ ಸುಟ್ಟು ಹಾಕಿದ ತಂದೆ-ತಾಯಿ! ಕಾರಣವೇನು ಗೊತ್ತಾ?
ಆದಾಗ್ಯೂ, ಸಿಲಿಂಡರ್‌ಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ತಿಳಿದುಬಂದಿಲ್ಲ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.