ಮಗನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಂದೇಶ ಪೋಸ್ಟ್ ಮಾಡಿದ ಸ್ಮೃತಿ ಇರಾನಿ!
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಪುತ್ರ ಜೊಹ್ರ್ ಇರಾನಿ ಇಂದು 18ನೆ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಪುತ್ರ ಜೊಹ್ರ್ ಇರಾನಿ ಇಂದು 18ನೆ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ತಮ್ಮ ಪುತ್ರನೊಂದಿಗಿರುವ ಫೋಟೋವನ್ನು ಸ್ಮೃತಿ ಹಂಚಿಕೊಂಡಿದ್ದು, "18 ವರ್ಷಗಳ ಸಂತೋಷ ಮತ್ತು ಸಾಹಸ" ಎಂದು ಬರೆದಿದ್ದಾರೆ.
"ನನ್ನ ಮೊದಲ ಮಗ ಜೊಹ್ರ್ ಇರಾನಿಗೆ ಇಂದು 18 ವರ್ಷಗಳು... 18 ವರ್ಷಗಳ ಸಂತೋಷ ಮತ್ತು ಸಾಹಸ. ನಾವು ಒಟ್ಟಿಗೆ ಪರ್ವತಗಳನ್ನು ಹತ್ತಿದ್ದೇವೆ, ಜೀವನದ ಸಂಗೀತಕ್ಕೆ ಒಟ್ಟಿಗೆ ನೃತ್ಯ ಮಾಡಿದ್ದೇವೆ... ನಿನಗೆ ದೇವರು ಜಗತ್ತಿನ ಎಲ್ಲ ಸಂತೋಷವನ್ನು ಆಶೀರ್ವದಿಸಲಿ" ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದಿರುವ ಸ್ಮೃತಿ ಪುತ್ರನಿಗೆ ಶುಭ ಹಾರೈಸಿದ್ದಾರೆ.